ಭಾರತೀಯ ಡ್ರಗ್ ಕಂಟ್ರೋಲರ್ ರೆಗ್ಯೂಲೇಟರಿ ಆಕ್ಸ್‌ಫರ್ಡ್ ಆಸ್ಟ್ರಾಝೆನಿಕಾ ಲಸಿಕೆಗೆ ಅನುಮತಿ ನೀಡಿದೆ. ಇದರ ಬೆನ್ನಲ್ಲೇ ಭಾರತದ ಬಯೋಟೆಕ್ ಸಂಸ್ಥೆಯ ಕೋವಾಕ್ಸಿನ್ ತುರ್ತು ಬಳಕೆಗೆ ಶಿಫಾಸರು ಮಾಡಲಾಗಿದೆ.
ನವದೆಹಲಿ(ಜ.02): ಭಾರತದಲ್ಲಿ ಕೊರೋನಾ ಲಸಿಕೆ ವಿತರಣೆ ಕಾರ್ಯಗಳು ಆರಂಭಗೊಂಡಿದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಲಸಿಕೆ ಡ್ರೈ ರನ್ ಕಾರ್ಯಗಳು ಆರಂಭಗೊಂಡಿದೆ. ಇನ್ನು ಡ್ರಗ್ ಕಂಟ್ರೋಲರ್ ರೆಗ್ಯೂಲೇಟರಿ ಭಾರತದಲ್ಲಿ ಆಕ್ಸ್‌ಫರ್ಡ್ ಅಸ್ಟ್ರಝೆನಿಕಾ ಕೊರೋನಾ ಲಸಿಕೆಗೆ ಅನುಮತಿ ನೀಡಿದೆ. ಇದರ ಬೆನ್ನಲ್ಲೇ ಇದೀಗ ತಜ್ಞರ ಸಮಿತಿ ಭಾರತ್ ಬಯೋಟೆಕ್ ಸಂಸ್ಥೆ ಕೋವ್ಯಾಕ್ಸಿನ್ ಲಸಿಕೆ ತುರ್ತು ಬಳಕೆಗೆ ಶಿಫಾರಸು ಮಾಡಿದೆ.
ಆಸ್ಟ್ರಾಝೆನಿಕಾ ಕೊರೋನಾ ಲಸಿಕೆ ತುರ್ತು ಬಳಕೆಗೆ ಭಾರತ ಡ್ರಗ್ ರೆಗ್ಯೂಲೇಟರಿ ಅನುಮತಿ !.
undefined
ಭಾರತದಲ್ಲಿ ತುರ್ತು ಬಳಕೆಗೆ ಕೋವ್ಯಾಕ್ಸಿನ್ ಲಸಿಕೆ ಅನುಮತಿ ನೀಡಬೇಕು ಎಂದು ತಜ್ಞರ ಸಮಿತಿ, ಭಾರತದ ಡ್ರಗ್ ಕಂಟ್ರೋಲರ್ ರೆಗ್ಯೂಲೇಟರಿಗೆ ಶಿಫಾರಸು ಮಾಡಿದೆ. ಶೀಘ್ರದಲ್ಲೇ ಅಧೀಕೃತ ಪ್ರಕಟಣೆ ಹೊರಬೀಳುವ ಸಾಧ್ಯತೆ ಇದೆ.
ದೇಶದೆಲ್ಲೆಡೆ ಕೊರೋನಾ ಲಸಿಕೆ ವಿತರಣೆ ಮಾಡಲು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ತಯಾರಿ ಮಾಡಿಕೊಂಡಿದೆ. ಲಸಿಕೆ ತಾಲೀಮುಗಾಗಿ ಆಯಾ ರಾಜ್ಯಗಳು ಮೊದಲ ಹಂತದಲ್ಲಿ 5 ಜಿಲ್ಲೆಗಳನ್ನು ಆಯ್ಕೆ ಮಾಡಿಕೊಂಡಿದೆ. ಇಷ್ಟೇ ಅಲ್ಲ ಲಸಿಕೆ ತಾಲೀಮು ನಡೆಯುತ್ತಿದೆ.