* ಸಿಡಿಎಸ್ ಬಿಪಿನ್ ರಾವತ್ ಇದ್ದ ಹೆಲಿಕಾಪ್ಟರ್ ಪತನ
* ನೀಲಗಿರಿ ಅರಣ್ಯದಲ್ಲಿ ವಿಹಾರ ನಡೆಸುತ್ತಿದ್ದವರಿಂದ ಹೆಲಿಕಾಪ್ಟರ್ ವಿಡಿಯೋ ರೆಕಾರ್ಡ್
* ಮೊಬೈಲ್ ಫೋನ್ ಫಾರೆನ್ಸಿಕ್ ಲ್ಯಾಬ್‌ಗೆ ಕಳುಹಿಸಿದ ತನಿಖಾಧಿಕಾರಿಗಳು
ವೆಲ್ಲಿಂಗ್ಟನ್(ಡಿ.13): ಡಿಸೆಂಬರ್ 8 ರಂದು, ದೇಶದ ಮೊದಲ ಸಿಡಿಎಸ್ ಜನರಲ್ ಬಿಪಿನ್ ರಾವತ್ (CDS General Bipin Rawat) ಅವರ ಹೆಲಿಕಾಪ್ಟರ್ ತಮಿಳುನಾಡಿನ ಕೂನೂರಿನಲ್ಲಿ ಅಪಘಾತಕ್ಕೀಡಾಯಿತು (IAF Helicopter Crash). ಈ ದುರಂತದಲ್ಲಿ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ (Madhulika Rawat)ಮತ್ತು ಇತರ 11 ಸೇನಾ ಅಧಿಕಾರಿಗಳು ಸಾವನ್ನಪ್ಪಿದ್ದಾರೆ. ದುರಂತದ ಬೆನ್ನಲ್ಲೇ ಸ್ಥಳೀಯರು ಚಿತ್ರೀಕರಿಸಿದ್ದಾರೆನ್ನಲಾದ ಹೆಲಿಕಾಪ್ಟರ್ ಹಾರಾಟದ ವಿಡಿಯೋ ಒಂದು ಭಾರೀ ವೈರಲ್ ಆಗಿತ್ತು.
ಮೊಬೈಲ್‌ನಲ್ಲಿ ದಾಖಲಾದ ದೃಶ್ಯದಲ್ಲಿ ಹೆಲಿಕಾಪ್ಟರ್ ತೀರಾ ಕೆಳಮಟ್ಟದಲ್ಲಿ ಹಾರುತ್ತಿದ್ದು, ದಟ್ಟವಾದ ಮಂಜಿನಲ್ಲಿ ಇದ್ದಕ್ಕಿದ್ದಂತೆ ಕಣ್ಮರೆಯಾಗಿತ್ತು. ಇದರ ನಂತರ, ದೊಡ್ಡ ಶಬ್ದವೊಂದು ಕೇಳುತ್ತದೆ. ಅಲ್ಲದೇ ವೀಡಿಯೋದಲ್ಲಿ ಪುರುಷ ಮತ್ತು ಮಹಿಳೆಯರ ಗುಂಪು ರೈಲ್ವೇ ಹಳಿ ಮೇಲೆ ನಿಂತು ಹೆಲಿಕಾಪ್ಟರ್ ಪತನದ ಬಗ್ಗೆ ಮಾತಡಿರುವುದೂ ಇದೆ. ಈ ವಿಡಿಯೋವನ್ನು ಕೊಯಮತ್ತೂರು ಮೂಲದ ಛಾಯಾಗ್ರಾಹಕ ವೈ ಜೋ ಪಾಲ್ ಅಕಾ ಕುಟ್ಟಿ ಮಾಡಿದ್ದಾರೆನ್ನಲಾಗಿದೆ. ಅಪಘಾತದ ಸಮಯದಲ್ಲಿ, ಅವರು ತಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ನೀಲಗಿರಿ (Nilgiri) ಜಿಲ್ಲೆಯ ಕಟ್ಟೇರಿ ಅರಣ್ಯದಲ್ಲಿ ವಿಹಾರಕ್ಕೆ ತೆರಳಿದ್ದರು.
ತನಿಖೆಯ ಭಾಗವಾದ ಮೊಬೈಲ್
ಅಪಘಾತದ ತನಿಖೆ ನಡೆಸುತ್ತಿರುವ ಪೊಲೀಸರು ಛಾಯಾಗ್ರಾಹಕ ಕುಟ್ಟಿ ಅವರ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಮೊಬೈಲ್ ಫೋನ್ ಈಗ ಘಟನೆಯ ತನಿಖೆಯ ಭಾಗವಾಗಿದೆ. ಏರ್ ಮಾರ್ಷಲ್ ನೇತೃತ್ವದ ಸೇನೆಯ ಉನ್ನತ ಮಟ್ಟದ ಸಮಿತಿಯು ಈ ಬಗ್ಗೆ ತನಿಖೆ ನಡೆಸುತ್ತಿದೆ. ಇದು ಸಿಡಿಎಸ್ ಬಿಪಿನ್ ರಾವತ್ ಅವರ ಹೆಲಿಕಾಪ್ಟರ್ ಪತನದ ವೀಡಿಯೊವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಮೊಬೈಲ್ ಫೋರೆನ್ಸಿಂಗ್ ತನಿಖೆ ನಡೆಸಲಾಗುತ್ತಿದೆ. ಇದಲ್ಲದೆ, ಈ ಪ್ರಕರಣಕ್ಕೆ ಸಂಬಂಧಿಸಿದ ಪ್ರತ್ಯಕ್ಷದರ್ಶಿಗಳ ವಿಚಾರಣೆ ಮತ್ತು ಸುಳಿವು ಪಡೆಯುವಲ್ಲಿ ಪೊಲೀಸರು ನಿರತರಾಗಿದ್ದಾರೆ.
ವಿಡಿಯೋ ಮಾಡುತ್ತಿದ್ದವರು ಕಾಡಿಗೆ ಯಾಕೆ ಹೋದರು?
ನಿರ್ಬಂಧಿತ ಪ್ರದೇಶದಲ್ಲಿ ಅವರು ಏನು ಮಾಡುತ್ತಿದ್ದಾರೆ ಎಂದು ಪೊಲೀಸರು ವಿಡಿಯೋ ತಯಾರಕರನ್ನು ಕೇಳಿದ್ದಾರೆ. ಈ ಪ್ರದೇಶದಲ್ಲಿ ಹೊರಗಿನವರ ಓಡಾಟಕ್ಕೆ ನಿರ್ಬಂಧವಿದೆ. ಛಾಯಾಗ್ರಾಹಕ ಮತ್ತು ಇತರರು ಕಾಡಿನ ಆ ಭಾಗಕ್ಕೆ ಏಕೆ ಹೋಗಿದ್ದರು ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅತ್ಯಂತ ದಟ್ಟವಾದ ಅರಣ್ಯ ಮತ್ತು ಕಾಡು ಪ್ರಾಣಿಗಳಿರುವುದರಿಂದ ಈ ಭಾಗದಲ್ಲಿ ಯಾವುದೇ ಹೊರಗಿನವರ ಸಂಚಾರಕ್ಕೆ ನಿರ್ಬಂಧವಿದೆ.
ಸಿಡಿಎಸ್ ಸಾವು ಸಂಭ್ರಮಿಸಿದವರ ವಿರುದ್ಧ ಆಕ್ರೋಶ, ಹಿಂದೂ ಧರ್ಮಕ್ಕೆ ನಿರ್ದೇಶಕ ಅಲಿ ಅಕ್ಬರ್ ಮತಾಂತರ!
ಭಾರತದ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸಾವನ್ನು(Bipin Rawat Death) ಕೆಲ ಕಿಡಿಗೇಡಿಗಳು ಸಂಭ್ರಮಿಸಿದ್ದಾರೆ. ಹೀಗೆ ಸಂಭ್ರಮಿಸಿದ ಬೆರಳೆಣಿಕೆ ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಇನ್ನೂ ಹಲವರು ರಾವತ್ ಸಾವನ್ನು ಸಂಭ್ರಮಿಸುತ್ತಲೇ ಇದ್ದಾರೆ. ಹೀಗೆ ಕೆಲ ಮುಸ್ಲಿಮರು ರಾವತ್ ಸಾವನ್ನು ಸಂಭ್ರಮಿಸಿದ್ದಕ್ಕೆ ಮಲೆಯಾಳಂ(Malayalam Director) ಖ್ಯಾತ ನಿರ್ದೇಶಕ ಅಕ್ಬರ್ ಆಲಿ(Akbar Ali) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇವರ ಆಕ್ರೋಶ ಕೇವಲ ಸಾಮಾಜಿಕ ಜಾಲತಾಣಕ್ಕೆ(Social Media) ಸೀಮಿತವಾಗಿಲ್ಲ. ಇಸ್ಲಾಂ(Islam) ಧರ್ಮದ ಮೇಲಿನ ನಂಬಿಕೆಯನ್ನೇ ಕಳೆದುಕೊಂಡ ಅಕ್ಬರ್ ಆಲಿ ಕುಟುಂಬ ಸಮೇತ ಹಿಂದೂ ಧರ್ಮಕ್ಕೆ(Hindu) ಮತಾಂತರವಾಗಿದ್ದಾರೆ.
ದೇಶದ ವೀರ ಯೋಧ, ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸಾವನ್ನು ಕೆಲ ಮುಸ್ಲಿಮರು(Muslims celebrate Rawat death) ಸಂಭ್ರಮಿಸುತ್ತಿದ್ದಾರೆ. ಕೆಲವರು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಬರಹಗಳ ಮೂಲಕ ಸಂಭ್ರಮಿಸಿದ್ದಾರೆ. ಮತ್ತೂ ಕೆಲವರೂ ಇಮೋಜಿ ಸ್ಮೈಲ್ ಹಾಕಿ ತಮ್ಮ ಸಂತಸ ಹೊರಹಾಕುತ್ತಿದ್ದಾರೆ. ಓರ್ವ ಯೋಧನ ಸಾವನ್ನು ಹೀಗೆ ಸಂಭ್ರಮಿಸುತ್ತಿರುವ ಇವರು ದೇಶದ್ರೋಹಿಗಳು(Anti nationals). ಈ ಮುಸ್ಲಿಮರ ವಿರುದ್ದ ಇಸ್ಲಾಂ ನಾಯಕರು ಮೌನವಹಿಸಿದ್ದಾರೆ. ಯಾವುದೇ ಖಂಡನೆ ವ್ಯಕ್ತಪಡಿಸಿಲ್ಲ. ಇದನ್ನು ಸಹಿಸಲು ಸಾಧ್ಯವಿಲ್ಲ. ನನಗೆ ಇಸ್ಲಾಂ ಮೇಲಿನ ನಂಬಿಕೆ ಇಲ್ಲವಾಗಿದೆ. ಹೀಗಾಗಿ ಹಿಂದೂ ಧರ್ಮಕ್ಕೆ(Convert to Hinduism) ಮತಾಂತರವಾಗುತ್ತಿದ್ದೇನೆ ಎಂದು ಅಕ್ಬರ್ ಆಲಿ ಫೇಸ್‌ಬುಕ್(Facebook) ಮೂಲಕ ಹೇಳಿಕೊಂಡಿದ್ದಾರೆ.