India Omicron case ಕೇರಳದಲ್ಲಿ ಮೊದಲ ಕೇಸ್, ಕರ್ನಾಟಕದಲ್ಲಿ ಮತ್ತೊಂದು, 38ಕ್ಕೇರಿತು ರೂಪಾಂತರಿ ತಳಿ ಪ್ರಕರಣ

By Suvarna News  |  First Published Dec 12, 2021, 8:30 PM IST

ಓಮಿಕ್ರಾನ್ ವೈರಸ್ ಪ್ರಕರಣ ಸಂಖ್ಯೆ ಗಣನೀಯ ಏರಿಕೆ
ನಿಯಂತ್ರಣದಲ್ಲಿದ ಕರ್ನಾಟಕದಲ್ಲಿ ಮತ್ತೊಂದು ಪ್ರಕರಣ ಪತ್ತೆ
ಕೇರಳದಲ್ಲಿ ಮೊದಲ ಪ್ರಕರಣ ಪತ್ತೆ, ಹೈ ಅಲರ್ಟ್


ನವದೆಹಲಿ(ಡಿ.12): ಓಮಿಕ್ರಾನ್ ಪ್ರಕರಣ(Omicron variant) ಸಂಖ್ಯೆ ಹೆಚ್ಚಾಗುತ್ತಿದೆ. ವಿದೇಶದಿಂದ ಆಗಮಿಸುತ್ತಿರುವವರಲ್ಲಿ ಓಮಿಕ್ರಾನ್ ಕೇಸ್ ಪತ್ತೆಯಾಗುತ್ತಿದೆ. ಆದರೆ ಭಾರತದಲ್ಲಿ(India) ಕಠಿಣ ನಿಯಮ ಜಾರಿಗೊಳಿಸಿರುವ ಕಾರಣ ದೇಶದಲ್ಲಿ ಓಮಿಕ್ರಾನ್ ಹರಡುವಿಕೆ ನಿಯಂತ್ರಣದಲ್ಲಿದೆ. ಇದೀಗ ಕರ್ನಾಟಕ(Karnatka) ಹಾಗೂ ಕೇರಳಕ್ಕೆ(Kerala) ಮತ್ತೊಂದು ಆಘಾತ ಎದುರಾಗಿದೆ. ಕರ್ನಾಟಕದಲ್ಲಿ ಮತ್ತೊಂದು ಓಮಿಕ್ರಾನ್ ಪ್ರಕರಣ ಪತ್ತೆಯಾಗಿದ್ದರೆ, ಕೇರಳದಲ್ಲಿ ಮೊದಲ ಓಮಿಕ್ರಾನ್ ಪ್ರಕರಣ ವರದಿಯಾಗಿದೆ. ಇದರಿಂದ ದೇಶದಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 38ಕ್ಕೆ ಏರಿಕೆಯಾಗಿದೆ.

ಕರ್ನಾಟಕದಲ್ಲಿ ಇಂದು(ಡಿ.12) ಮೂರನೇ ಓಮಿಕ್ರಾನ್ ಪ್ರಕರಣ ಖಚಿತವಾಗಿದೆ. ಸೌತ್ ಆಫ್ರಿಕಾದಿಂದ ಬೆಂಗಳೂರಿಗೆ ಮರಳಿದ 34 ವರ್ಷದ ವ್ಯಕ್ತಿಯಲ್ಲಿ ಓಮಿಕ್ರಾನ್ ಕಾಣಿಸಿಕೊಂಡಿದೆ. ಸದ್ಯ ಓಮಿಕ್ರಾನ್ ಕಾಣಿಸಿಕೊಂಡಿರುವ ವ್ಯಕ್ತಿಯನ್ನು ಐಸೋಲೇಶನ್‌ನಲ್ಲಿ ಇಡಲಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

Latest Videos

undefined

Omicron Test Kit ವಾರಗಟ್ಟಲೇ ಕಾಯಬೇಕಿಲ್ಲ 2 ಗಂಟೆಯಲ್ಲಿ ರಿಸಲ್ಟ್, ICMR ಅಭಿವೃದ್ಧಿ ಪಡಿಸಿದ ಟೆಸ್ಟ್ ಕಿಟ್!

ಈತನ ಸಂಪರ್ಕದಲ್ಲಿದ್ದ 5 ಮೊದಲ ಹಾಗೂ 15 ಎರಡನೇ ಸಂಪರ್ಕಿತರನ್ನು ಪತ್ತೆ ಹಚ್ಚಿ ಮಾದರಿ ಸಂಗ್ರಹಿಸಿಲಾಗಿದೆ. ಈ ಮಾದರಿಗಳನ್ನು ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆ ಕಳುಹಿಸಲಾಗಿದೆ. ಹೀಗಾಗಿ ಕರ್ನಾಟಕದಲ್ಲಿ ಪತ್ತೆಯಾದ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಮೂರಕ್ಕೇರಿದೆ. 

ಇತ್ತ ಕೇರಳದಲ್ಲಿ ಮೊದಲ ಓಮಿಕ್ರಾನ್ ಕೇಸ್ ವರದಿಯಾಗಿದ್ದು, ಹೈ ಅಲರ್ಟ್ ಘೋಷಿಸಲಾಗಿದೆ.ಯುಕೆಯಿಂದ ಕೇರಳಕ್ಕೆ ಆಗಮಿಸಿದ ವ್ಯಕ್ತಿಯಲ್ಲಿ ಓಮಿಕ್ರಾನ್ ಪತ್ತೆಯಾಗಿದೆ. ವ್ಯಕ್ತಿಯನ್ನು ಐಸೋಲೇಶನ್‌ನಲ್ಲಿ ಇಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಓಮಿಕ್ರಾನ್ ಸೋಂಕಿತನ ಸಂಪ್ರಕದಲ್ಲಿದ್ದವರ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಕೇರಳ ಆರೋಗ್ಯ ಸಚಿವ ವೀಣಾ ಜಾರ್ಜ್ ಹೇಳಿದ್ದಾರೆ. 

Section 144 in Mumbai: ಮುಂಬೈನಲ್ಲಿ ಒಮಿಕ್ರಾನ್ ಕೇಸ್ ಹೆಚ್ಚಿದ ಬೆನ್ನಲ್ಲೇ 144 ಸೆಕ್ಷನ್ ಜಾರಿ

ಕೇರಳದಲ್ಲಿ ಮಾತ್ರವಲ್ಲ, ಆಂಧ್ರ ಪ್ರದೇಶ, ಚಂಡಿಘಡ ಹಾಗೂ ನಾಗ್ಪುದಲ್ಲೂ ಮೊದಲ ಓಮಿಕ್ರಾನ್ ಪ್ರಕರಣ ವರದಿಯಾಗಿದೆ. ಇದೀಗ ಇವರ ಸಂಪರ್ಕಿತ ಪತ್ತೆಹಚ್ಚಿ ಮಾದರಿಗಳನ್ನು ಜಿನೋಮ್ ಸೀಕ್ವೆನ್ಸಿಂಗ್‌ಗೆ ಕಳುಹಿಸಲಾಗಿದೆ. ಇಂದು(ಡಿ.12) ಐದು ಓಮಿಕ್ರಾನ್ ಪ್ರಕರಣ ಪತ್ತೆಯಾಗಿದೆ. ರಾಜ್ಯಗಳ ಪೈಕಿ ಮಹಾರಾಷ್ಟ್ರದಲ್ಲಿ 18 ಓಮಿಕ್ರಾನ್ ಪ್ರಕರಣಗಳು ದಾಖಲಾಗಿದೆ. ಇದಲ್ಲಿ 10 ಪ್ರಕರಣಗಳು ಮುಂಬೈನಲ್ಲೇ ದಾಖಲಾಗಿದೆ.

ಕರ್ನಾಟಕದ ಮೂಲಕ ಓಮಿಕ್ರಾನ್ ಪ್ರಕರಣ ಭಾರತಕ್ಕೆ ಲಗ್ಗೆ ಇಟ್ಟಿತ್ತು. ಸೌತ್ ಆಫ್ರಿಕಾದಿಂದ ಮರಳಿದ ಇಬ್ಬರಲ್ಲಿ ಓಮಿಕ್ರಾನ್ ಪತ್ತೆಯಾಗಿತ್ತು. ಬೆಂಗಳೂರಿನಲ್ಲಿ ಪತ್ತೆಯಾದ ಈ ಪ್ರಕರಣ ದೇಶದ  ಮೊದಲ ಎರಡು ಪ್ರಕರಣವಾಗಿತ್ತು. ಇದರಲ್ಲಿ ಓರ್ವ ನೆಗಟೀವ್ ರಿಪೋರ್ಟ್ ಹಾಗೂ ರೋಗ ಲಕ್ಷಣಗಳು ಇಲ್ಲದ  ಕಾರಣ ಬೆಂಗಳೂರಿನಿಂದ ದುಬೈಗೆ ತೆರಳಿದ್ದರು. ಇತ್ತ ಮತ್ತೊರ್ವ 46 ವೈದ್ಯ ಯಾರ ಸಂಪರ್ಕವಿಲ್ಲದಿದ್ದರೂ ಓಮಿಕ್ರಾನ್ ಕಾಣಿಸಿಕೊಂಡಿತ್ತು.

ಭಾರತದಲ್ಲಿ ಯಾವ ರಾಜ್ಯಗಳಲ್ಲಿ ಓಮಿಕ್ರಾನ್ ಪತ್ತೆ?
ಕರ್ನಾಟಕ
ಮಹಾರಾಷ್ಟ್ರ
ರಾಜಸ್ಥಾನ
ಗುಜರಾತ್
ದೆಹಲಿ
ಆಂಧ್ರ ಪ್ರದೇಶ
ಪಂಜಾಬ್
ಕೇರಳ

ಒಟ್ಟು 8 ರಾಜ್ಯಗಳಲ್ಲಿ ಓಮಿಕ್ರಾನ್ ಪತ್ತೆಯಾಗಿದೆ. ಎಲ್ಲಾ ಓಮಿಕ್ರಾನ್ ಸೋಂಕಿತರು ವಿದೇಶದಿಂದ, ಅದರಲ್ಲೂ ಹೈ ರಿಸ್ಕ್ ದೇಶಗಳಿಂದ ಮರಳಿದವರಾಗಿದ್ದಾರೆ. ಓಮಿಕ್ರಾನ್ ಪತ್ತೆಗೂ ಮೊದಲು ಭಾರತ ಡಿಸೆಂಬರ್ 15 ರಿಂದ ಅಂತಾರಾಷ್ಟ್ರೀಯ ವಿಮಾನಯಾನ ಆರಂಭಿಸುವುದಾಗಿ ಹೇಳಿತ್ತು. ಆದರೆ ಓಮಿಕ್ರಾನ್ ಆತಂಕದಿಂದ ಅಂತಾರಾಷ್ಟ್ರೀಯ ವಿಮಾನಯಾನ ಸೇವೆಗೆ ಮತ್ತೆ ನಿರ್ಬಂಧ ಹೇರಿದೆ. ಮುಂಬೈನಲ್ಲಿ ಓಮಿಕ್ರಾನ್ ಪ್ರಕರಣ ಹೆಚ್ಚಾಗಿರುವ ಕಾರಣ 144 ಸೆಕ್ಷನ್ ಜಾರಿಮಾಡಲಾಗಿದೆ.

ಕಳೆದ 24 ಗಂಟೆಯಲ್ಲಿ ದೇಶದಲ್ಲಿ 7,774 ಕೊರೋನಾ ವೈರಸ್ ಪ್ರಕರಣ ದಾಖಲಾಗಿದೆ. ಇನ್ನು ಕೊರೋನಾಗೆ 306 ಮಂದಿ ಬಲಿಯಾಗಿದ್ದಾರೆ. ಭಾರತದಲ್ಲಿ ಸಕ್ರಿಯ ಕೊರೋನಾ ಪ್ರಕರಣಗಳ ಸಂಖ್ಯೆ 93,277.  ದೇಶದಲ್ಲಿ ದಾಖಲಾದ ಒಟ್ಟು ಕೊರೋನಾ ವೈರಸ್ ಪ್ರಕರಣ ಸಂಖ್ಯೆ 3,46,90,510. ಇದರಲ್ಲಿ  3,41,22,795 ಮಂದಿ ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ 8,464 ಮಂದಿ ಕೊರೋನಾದಿಂದ ಗುಣಮುಖರಾಗಿದ್ದಾರೆ. ಭಾರತದಲ್ಲಿ ಗುಣಮುಖರಾಗುವವರ ಸರಾಸರಿ ಶೇಕಡಾ 98.36.  ಕರ್ನಾಟಕದಲ್ಲಿ 320 ಕೊರೋನಾ ಪ್ರಕರಣ ದಾಖಲಾಗಿದ್ದರೆ, ಅತೀ ಹೆಚ್ಚು ಪ್ರಕರಣ ಕೇರಳದಲ್ಲಿ ದಾಖಲಾಗಿದೆ. ಕಳೆದ 24 ಗಂಟೆಯಲ್ಲಿ ಕೇರಳದಲ್ಲಿ 3,795 ಪ್ರಕರಣ ದಾಖಲಾಗಿದೆ.
 

click me!