ನ್ಯಾ.ಉದಯ್ ಲಲಿತ್, ನ್ಯಾ.ಇಂದು ಮಲೋತ್ರ ಅವರಿದ್ದ ಪೀಠ ಮಹತ್ವದ ತೀರ್ಪನ್ನು ಪ್ರಕಟಿಸಿದ್ದು, ಮಧ್ಯಂತರ ಕ್ರಮವಾಗಿ ಜಿಲ್ಲಾ ನ್ಯಾಯಾಧೀಶರ ನೇತೃತ್ವದ ಸಮಿತಿ ರಚನೆ ಮಾಡಲು ಸೂಚನೆ ನೀಡಲಾಗಿದೆ.ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ನವದೆಹಲಿ(ಜು.13): ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದ ವ್ಯಾಜ್ಯದ ವಿಚಾರದ ಕುರಿತಂತೆ ದೇಶದ ಸರ್ವೊಚ್ಚ ನ್ಯಾಯಾಲಯ ಮಹತ್ವದ ತೀರ್ಪನ್ನು ಪ್ರಕಟಿಸಿದ್ದು, ತಿರುವಾಂಕೂರು ರಾಜಮನೆತನದ ಕುಟುಂಬದ ಹಕ್ಕನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.
ನ್ಯಾ.ಉದಯ್ ಲಲಿತ್, ನ್ಯಾ.ಇಂದು ಮಲೋತ್ರ ಅವರಿದ್ದ ಪೀಠ ಮಹತ್ವದ ತೀರ್ಪನ್ನು ಪ್ರಕಟಿಸಿದ್ದು, ಮಧ್ಯಂತರ ಕ್ರಮವಾಗಿ ಜಿಲ್ಲಾ ನ್ಯಾಯಾಧೀಶರ ನೇತೃತ್ವದ ಸಮಿತಿ ರಚನೆ ಮಾಡಲು ಸೂಚನೆ ನೀಡಲಾಗಿದೆ. ಆ ಸಮಿತಿಯ ಅಡಿ ಆಡಳಿತ ನೋಡಿಕೊಳ್ಳಲು ತಿರುವಾಂಕೂರು ರಾಜಮನೆತನದ ಕುಟುಂಬಕ್ಕೆ ಸೂಚನೆ ನೀಡಲಾಗಿದೆ.
ದಕ್ಷಿಣ ಕೇರಳ ಮತ್ತು ತಮಿಳುನಾಡಿನಲ್ಲಿ ಆಡಳಿತ ನಡೆಸಿದ್ದ ತಿರುವಾಂಕೂರು ರಾಜಮನೆತನ 18ನೇ ಶತಮಾನದಲ್ಲಿ ಅನಂತ ಪದ್ಮನಾಭ ದೇವಾಲಯವನ್ನು ಪುನರ್ ನಿರ್ಮಾಣ ಮಾಡಿತ್ತು. ಸ್ವಾತಂತ್ರ್ಯಾನಂತರ ಟ್ರಸ್ಟ್ ಮಾಡಿಕೊಂಡು ದೇಗುಲವನ್ನು ರಾಜಮನೆತನದವರೇ ನೋಡಿಕೊಳ್ಳುತ್ತಿದ್ದರು. ಆದರೆ ಈ ದೇಗುಲಯದಲ್ಲಿ ಭ್ರಷ್ಟಾಚಾರದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ದೇಗುಲವನ್ನು ಸರ್ಕಾರ ವಶಕ್ಕೆ ಪಡೆಯಬೇಕು ಎಂದು 2011ರ ಜ.31ರಂದು ಕೇರಳ ಹೈಕೋರ್ಟ್ ತೀರ್ಪು ನೀಡಿತ್ತು. ಇದನ್ನು ರಾಜಮನೆತನ ಪ್ರಶ್ನಿಸಿದ್ದು, ಕಳೆದ 9 ವರ್ಷಗಳಿಂದ ದಾವೆ ನಡೆಯುತ್ತಿತ್ತು. ಏ.10ರಂದು ಸುಪ್ರೀಂಕೋರ್ಟ್ ತೀರ್ಪು ಕಾದಿರಿಸಿತ್ತು.
ಅನಂತ ಪದ್ಮನಾಭ ದೇಗುಲ ಯಾರ ವಶ? ಸುಪ್ರೀಂನಿಂದ ಮಹತ್ತರ ತೀರ್ಪು
ದೇವರು ನಮಗೆ ನ್ಯಾಯ ಒದಗಿಸಿದ್ದಾನೆ ಎಂದು ತಿರುವಾಂಕೂರು ರಾಜಮನೆತನದ ಕುಟುಂಬದ ಸದಸ್ಯೆ ಗೌರಿ ಲಕ್ಷ್ಮೀಬಾಯಿ ಹರ್ಷ ವ್ಯಕ್ತಪಡಿಸಿದ್ದಾರೆ. ಇನ್ನು ಕೇರಳ ಸರ್ಕಾರ ಕೂಡಾ ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ವಕೀಲ ಗೋಪಾಲ ಸುಬ್ರಮಣ್ಯನ್ ಅವರನ್ನು ಅಮಿಕಸ್ ಕ್ಯೂರಿಯಾಗಿ ನೇಮಕ ಮಾಡಲಾಗಿತ್ತು. ನಿವೃತ್ತ ಸಿಎಜಿ ವಿನೋದ್ ರಾಯ್ ಅವರನ್ನು ಕೂಡ ಆಡಿಟ್ ಮಾಡಲು ನೇಮಕ ಮಾಲಾಗಿತ್ತು.
News In 100 Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್