ದೆಹಲಿ ತಲುಪಿದ ಸಿಎಂ ಗೆಹ್ಲೋಟ್‌, ಇತ್ತ ಸಹೋದರನ ಮನೆ ಮೇಲೆ ಸಿಬಿಐ ದಾಳಿ!

By Suvarna News  |  First Published Jun 17, 2022, 11:18 AM IST

* ದೆಹಲಿಯಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಜೋಧ್‌ಪುರದಲ್ಲಿರುವ ಸಹೋದರನ ಮನೆ ಮೇಲೆ ಸಿಬಿಐ ದಾಳಿ

* ರಸಗೊಬ್ಬರ ವಿತರಣೆ ಪ್ರಕರಣಗಳಲ್ಲಿ ವಿಚಾರಣೆಗಾಗಿ ದೆಹಲಿಯಿಂದ ಜೋಧಪುರಕ್ಕೆ ಬಂದ  ಸಿಬಿಐ ತಂಡ

* ಗೆಹ್ಲೋಟ್ ಅವರ ಸಹೋದರ ಅಗ್ರಸೇನ್ ಗೆಹ್ಲೋಟ್ ಗೊಬ್ಬರ ಬೀಜಗಳ ದೊಡ್ಡ ವ್ಯಾಪಾರವನ್ನು ಹೊಂದಿದ್ದಾರೆ


ಜೈಪುರ(ಜೂ.17): ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಕಿರಿಯ ಸಹೋದರನ ಮನೆ ಮೇಲೆ ಇಂದು ಬೆಳಗ್ಗೆ ಸಿಬಿಐ ದಾಳಿ ನಡೆಸಿದೆ. ದೆಹಲಿಯಿಂದ ಜೋಧಪುರ ತಲುಪಿದ ಸಿಬಿಐ ಅಧಿಕಾರಿಗಳ ವಾಹನ ಸಿಎಂ ಗೆಹ್ಲೋಟ್‌ ಸಹೋದರನ ಬಂಗಲೆ ತಲುಪಿದ್ದು, ವಿಚಾರಣೆ ಆರಂಭವಾಗಿದೆ. ಆದರೆ, ಈ ಬಗ್ಗೆ ಸ್ಥಳೀಯ ಸಿಬಿಐ ತಂಡಕ್ಕೆ ಮಾಹಿತಿ ನೀಡಿಲ್ಲ, ಸ್ಥಳೀಯ ಪೊಲೀಸರಿಗೆ ಈ ದಾಳಿ ಕುರಿತು ಮಾಹಿತಿ ನೀಡಿಲ್ಲ. ಸದ್ಯಕ್ಕೆ ಇಡೀ ಘಟನೆಯಿಂದ ಮಾಧ್ಯಮಗಳನ್ನೂ ದೂರ ಇಡಲಾಗಿದೆ.

5 ವರ್ಷ ದುಡಿದವರ ಕುಟುಂಬ ಸದಸ್ಯರಿಗೂ ಕಾಂಗ್ರೆಸ್‌ ಟಿಕೆಟ್‌, ಪ್ರತಿನಿಧಿಗಳಿಗೆ ನಿವೃತ್ತಿ ವಯೋಮಿತಿಯೂ ನಿಗದಿ!

Tap to resize

Latest Videos

ಸಿಎಂ, ಇತರ ನಾಯಕರು ದೆಹಲಿಯಲ್ಲಿದ್ದಾಗ ಇತ್ತ ಸಹೋದರನ ಮನೆ ರೇಡ್

ವಾಸ್ತವವಾಗಿ, ಸಿಎಂ ಅಶೋಕ್ ಗೆಹ್ಲೋಟ್ ಮತ್ತು ರಾಜ್ಯದ ಅನೇಕ ಹಿರಿಯ ನಾಯಕರು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಇಡಿ ಪ್ರಶ್ನಿಸಿದ್ದನ್ನು ವಿರೋಧಿಸಿ ಕೆಲವು ದಿನಗಳ ಕಾಲ ದೆಹಲಿಯಲ್ಲಿದ್ದಾರೆ. ಅಲ್ಲಿ ಇಡಿ ಮತ್ತು ಪೊಲೀಸರ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ. ಏತನ್ಮಧ್ಯೆ, ಸಿಬಿಐ ತಂಡಗಳು ಇಂದು ಬೆಳಿಗ್ಗೆ ಜೋಧ್‌ಪುರದ ಮಂಡೋರ್ ಪ್ರದೇಶದಲ್ಲಿ ವಾಸಿಸುತ್ತಿರುವ ಸಿಎಂ ಅವರ ಕಿರಿಯ ಸಹೋದರ ಅಗ್ರಸೇನ್ ಗೆಹ್ಲೋಟ್ ಅವರ ಮನೆ ತಲುಪಿವೆ. ಸಿಬಿಐ ದಾಳಿ ಬಳಿಕ ಹಲವು ರೀತಿಯ ಊಹಾಪೋಹಗಳು ಹರಿದಾಡುತ್ತಿವೆ. ಅಧಿಕಾರಿಗಳು ಎರಡು ವಾಹನಗಳಲ್ಲಿ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.

ರಾಜಸ್ಥಾನ ಸಿಎಂ ಪಟ್ಟಕ್ಕೆ ಸಚಿನ್‌ ಪೈಲಟ್‌ ಪಟ್ಟು: ನನಗೆ ಮುಖ್ಯಮಂತ್ರಿ ಪಟ್ಟ ಕೊಡದಿದ್ರೆ ಕಾಂಗ್ರೆಸ್‌ಗೆ ಸೋಲು’

ರಸಗೊಬ್ಬರ ವಿತರಣೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಹಿನ್ನೆಲೆ ಇಡಿ ಅಧಿಕಾರಿಗಳೂ ಬಂಧಿದ್ದರು

ವಾಸ್ತವವಾಗಿ, ಅಗ್ರೇಸನ್ ಗೆಹ್ಲೋಟ್‌ನ ಪಾವ್ಟಾ ಛೌಹಾರೇ ಸಮೀಪ ಬಳಿ ರಸಗೊಬ್ಬರ ಬೀಜದ ದೊಡ್ಡ ವ್ಯಾಪಾರವಿದೆ. ರಸಗೊಬ್ಬರ ವಿತರಣೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಇಡಿ ಕೂಡ ಅಲ್ಲಿಗೆ ತಲುಪಿತ್ತು. ಇಡಿ ತೋಟದ ಮನೆಗಳು, ಬಂಗಲೆಗಳು ಮತ್ತು ಇತರ ಹಲವು ಸ್ಥಳಗಳ ಮೇಲೆ ದಾಳಿ ನಡೆಸಿತ್ತು. ಇಡಿ ನೋಟಿಸ್ ನೀಡಿ ದೆಹಲಿಗೆ ಕರೆಸಿಕೊಂಡು ಅಲ್ಲಿಯೂ ಹಲವು ಬಾರಿ ವಿಚಾರಣೆ ನಡೆಸಲಾಗಿತ್ತು. ಆದರೆ, ಈ ಪ್ರಕರಣದಲ್ಲಿ ಮುಂದೇನು ಎಂಬ ಮಾಹಿತಿ ಬಹಿರಂಗವಾಗಿಲ್ಲ. ಇಡಿ ಬಳಿಕ ಇದೀಗ ಈ ಪ್ರಕರಣದಲ್ಲಿ ಫಾರ್ಮ್ ಹೌಸ್, ಬಂಗಲೆ ಮತ್ತಿತರ ಕಡೆ ಸಿಬಿಐ ದಾಳಿ ನಡೆಸಿದೆ ಎಂದು ಹೇಳಲಾಗುತ್ತಿದೆ. ರಸಗೊಬ್ಬರ ವಿತರಣೆಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವರ ತನಿಖೆ ನಡೆಯುತ್ತಿದೆ. ಮತ್ತೊಂದೆಡೆ, ಈ ಸಂಪೂರ್ಣ ಘಟನೆಯ ಬಗ್ಗೆ ಸಿಎಂ ಅಥವಾ ಬೇರೆಯವರ ಹೇಳಿಕೆ ಬಂದಿಲ್ಲ.

click me!