ಟ್ವಿಟ್ಟರ್ ಇನ್‌ಸ್ಟಾಗೂ ಬಂದ್ರು ಸಿಬಿಐ ಮಂದಿ... ಜೋಪಾನ!

By Kannadaprabha NewsFirst Published Oct 3, 2022, 10:43 AM IST
Highlights

ಇಂಟರ್‌ಪೋಲ್‌ ಸಾಮಾನ್ಯ ಸಭೆಗೂ ಮುನ್ನ ಕೇಂದ್ರೀಯ ತನಿಖಾ ದಳ (ಸಿಬಿಐ) ಟ್ವಿಟರ್‌ ಹಾಗೂ ಇನ್‌ಸ್ಟಾಗ್ರಾಂ ಖಾತೆಗಳನ್ನು ತೆಗೆದು ಸಾಮಾಜಿಕ ಮಾಧ್ಯಮಗಳಿಗೆ ಪಾದಾರ್ಪಣೆ ಮಾಡಿದೆ.

ನವದೆಹಲಿ: ಇಂಟರ್‌ಪೋಲ್‌ ಸಾಮಾನ್ಯ ಸಭೆಗೂ ಮುನ್ನ ಕೇಂದ್ರೀಯ ತನಿಖಾ ದಳ (ಸಿಬಿಐ) ಟ್ವಿಟರ್‌ ಹಾಗೂ ಇನ್‌ಸ್ಟಾಗ್ರಾಂ ಖಾತೆಗಳನ್ನು ತೆಗೆದು ಸಾಮಾಜಿಕ ಮಾಧ್ಯಮಗಳಿಗೆ ಪಾದಾರ್ಪಣೆ ಮಾಡಿದೆ. ಅ.18ರಿಂದ 3 ದಿನಗಳ ಕಾಲ ಅಂತಾರಾಷ್ಟ್ರೀಯ ಕ್ರಿಮಿನಲ್‌ ಪೊಲೀಸ್‌ ಸಂಸ್ಥೆ (ಇಂಟರ್‌ಪೋಲ್‌) ಸಾಮಾನ್ಯ ಸಭೆ ದೆಹಲಿಯಲ್ಲಿ ನಡೆಯಲಿದ್ದು, 195 ದೇಶಗಳು ಇದರಲ್ಲಿ ಪಾಲ್ಗೊಳ್ಳಲಿವೆ. ಈ ಹಿನ್ನೆಲೆಯಲ್ಲಿ ‘ಸಿಬಿಐ-ಸಿಐಒ’ ಹೆಸರಲ್ಲಿ 2 ಸಾಮಾಜಿಕ ಮಾಧ್ಯಮಗಳಲ್ಲಿ ಸಿಬಿಐ ಖಾತೆ ಆರಂಭಿಸಿದೆ. ಇತರೆ ತನಿಖಾ ಏಜೆನ್ಸಿಗಳಾದ ಜಾರಿ ನಿರ್ದೇಶನಾಲಯ (ಇ.ಡಿ) ಹಾಗೂ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಈಗಾಗಲೇ ಸಾಮಾಜಿಕ ಮಾಧ್ಯಮದ ಖಾತೆ ಹೊಂದಿವೆ.
 

click me!