ಕಳ್ಳ ಕೆಲಸ ಮಾಡಿ ದೇಶ ತೊರೆದವರ ಬೇಟೆಗೆ ಸಿಬಿಐನಿಂದ 'ಭಾರತ್‌ ಪೋಲ್‌' ಪೋರ್ಟಲ್‌ ಶುರು

By Kannadaprabha News  |  First Published Jan 8, 2025, 9:42 AM IST

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾರತ್‌ ಪೋಲ್‌ ಪೋರ್ಟಲ್‌ಗೆ ಚಾಲನೆ ನೀಡಿದ್ದಾರೆ. ಈ ಪೋರ್ಟಲ್‌ ಭಾರತದ ತನಿಖಾ ಸಂಸ್ಥೆಗಳಿಗೆ ಅಂತಾರಾಷ್ಟ್ರೀಯ ಪೊಲೀಸ್ ಸಹಾಯವನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ.


ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಗಳವಾರ ದೆಹಲಿಯಲ್ಲಿ ‘ಭಾರತ್‌ ಪೋಲ್‌’ ಪೋರ್ಟಲ್ ಗೆ ಚಾಲನೆ ನೀಡದರು. ಸಿಬಿಐ ಈ ಹೋಸ ವೆಬ್‌ಸೈಟ್‌ ಆರಂಭಿಸಿದ್ದು ಭಾರತದಾದ್ಯಂತ ಇರುವ ತನಿಖಾ ಸಂಸ್ಥೆಗಳಿಗೆ ವೇಗವಾದ ಅಂತರಾಷ್ಟ್ರೀಯ ಪೊಲೀಸ್ ಸಹಾಯಕ್ಕಾಗಿ ನೈಜ-ಸಮಯದ ಮಾಹಿತಿ ಹಂಚಿಕೊಳ್ಳಲು ಸಹಾಯ ಮಾಡುತ್ತದೆ.ಈ ವೇಳೆ ಅವರು ಮಾತನಾಡಿ, ‘ವಿದೇಶದಲ್ಲಿ ಅವಿತಿರುವ ಕೇಡಿಗಳನ್ನು ಭಾರತಕ್ಕೆ ತರಲು ಇದರಿಂದ ನೈಜ ಸಮಯದಲ್ಲಿ ಅವಕಾಶ ಸಿಗಲಿದೆ’ ಎಂದರು.

ಭಾರತಪೋಲ್ ಎಂದರೇನು?ಭಾರತದ ಯಾವುದೇ ರಾಜ್ಯದಲ್ಲಿರುವ ತನಿಖಾ ಏಜೆನ್ಸಿಗಳು ನೈಜ ಸಮಯದಲ್ಲಿ ಆರೋಪಿಗಳ ಬಗ್ಗೆ ಅಥವಾ ಅಪರಾಧಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲು ಭಾರತ್‌ ಪೋಲ್‌ ಪೋರ್ಟಲ್‌ ಸಹಾಯ ಮಾಡಲಿದೆ. ಉದಾಹರಣೆಗೆ: ಚೆನ್ನೈ ಪೊಲೀಸರಿಗೆ ಬೇಕಾದ ಒಬ್ಬ ಆರೋಪಿ ಅಮೆರಿಕದಲ್ಲಿದ್ದರೆ ಚೆನ್ನೈ ಪೊಲೀಸರು ಆತ ತಮಗೆ ಬೇಕಾಗಿದ್ದಾನೆ ಎಂಬ ಮಾಹಿತಿಯನ್ನು ಭಾರತ್ ಪೋಲ್‌ ಪೋರ್ಟಲ್‌ಗೆ ಹಾಕುತ್ತಾರೆ.

Tap to resize

Latest Videos

ಕೂಡಲೇ ಈ ಪೋರ್ಟಲ್‌ ನಿರ್ವಹಿಸುವ ಸಿಬಿಐ, ಆತ ಭಾರತಕ್ಕೆ ಬೇಕಾಗಿದ್ದಾನೆ ಎಂಬ ಮಾಹಿತಿಯನ್ನು ಅಂತಾರಾಷ್ಟ್ರೀಯ ತನಿಖಾ ಸಂಸ್ಥೆಯಾದ ಇಂಟರ್‌ಪೋಲ್‌ಗೆ ರವಾನಿಸುತ್ತಾರೆ ಹಾಗೂ ಆತನ ಬಂಧನಕ್ಕೆ ಸಹಕಾರ ಕೋರುತ್ತಾರೆ. ಬಳಿಕ ಇಂಟರ್‌ಪೋಲ್‌, ಆ ಕೇಡಿಯ ಬಂಧನಕ್ಕೆ ನೋಟಿಸ್ ಹೊರಡಿಸುತ್ತದೆ. ಈವರೆಗೂ ಬೇಕಿರುವ ಆರೋಪಿಗಳ ಬಗ್ಗೆ ಮಾಹಿತಿಯನ್ನು ಆಯಾ ರಾಜ್ಯಗಳ ಪೊಲೀಸರು ಪತ್ರ ಮುಖೇನ ಸಿಬಿಐಗೆ ತಿಳಿಸುತ್ತಿದ್ದರು. ಇದು ವಿಳಂಬ ಪ್ರಕ್ರಿಯೆ ಆಗಿತ್ತು.

ತೆಲಂಗಾಣ ಫಾರ್ಮುಲಾ-ಇ ಹಗರಣ: ಕೆಟಿಆರ್‌ಗೆ ಬಂಧನ ಭೀತಿ

ಹೈದರಾಬಾದ್‌: ಬಿಆರ್‌ಎಸ್‌ ಅಧಿಕಾರದಲ್ಲಿ ಇದ್ದಾಗ ಫಾರ್ಮುಲಾ-ಇ ರೇಸ್‌ ನಡೆಸಿದ್ದ ವೇಳೆ, ಫಾರ್ಮುಲಾ ಕಂಪನಿ ಜತೆ ಸರ್ಕಾರ ನಡೆಸಿದ 55 ಕೋಟಿ ರು. ಹಣದ ವ್ಯವಹಾರದಲ್ಲಿ ಅಕ್ರಮ ಹಣ ವರ್ಗಾವಣೆ ನಡೆದಿದೆ ಎಂಬ ಆರೋಪವು ಬಿಆರ್‌ಎಸ್‌ ನಾಯಕ ಕೆ.ಟಿ. ರಾಮರಾವ್‌ ಅವರಿಗೆ ಸಂಕಷ್ಟ ತಂದೊಡ್ಡಿದೆ. ಅವರಿಗೆ ಜಾರಿ ನಿರ್ದೇಶನಾಲಯದ (ಇ.ಡಿ.) ಬಂಧನದ ಭೀಇ ಶುರುವಾಗಿದೆ.ಪ್ರಕರಣದಲ್ಲಿ ಅವರ ಪಾತ್ರ ಇದ್ದಂತೆ ಕಾಣುತ್ತಿದೆ ಎಂದಿರುವ ಹೈಕೋರ್ಟ್‌, ಅವರ ವಿರುದ್ಧ ತೆಲಂಗಾಣ ಎಸಿಬಿ ದಾಖಲಿಸಿದ್ದ ಎಫ್‌ಐಆರ್‌ ರದ್ದತಿಗೆ ನಿರಾಕರಿಸಿದೆ. ಇದರ ಬೆನ್ನಲ್ಲೇ ಅವರಿಗೆ ಜ.16ರಂದು ವಿಚಾರಣೆಗೆ ಹಾಜರಾಗಬೇಕು ಎಂದು ಎಸಿಬಿ ಕೇಸು ಆಧರಿಸಿ ಎಫ್ಐಆರ್‌ ಹಾಕಿದ್ದ ಇ.ಡಿ. ಬುಲಾವ್ ನೀಡಿದೆ. ಹೀಗಾಗಿ ರಾಮವರಾವ್‌ಗೆ ಬಂಧನ ಭೀತಿ ಶುರುವಾಗಿದೆ.

ಬೆಂಗಳೂರು: ನಕಲಿ ಸಿಬಿಐ ಅಧಿಕಾರಿಗಳ ಸೋಗಲ್ಲಿ ವೃದ್ಧೆಗೆ ಬೆದರಿಸಿ 1.3 ಕೋಟಿ ಸುಲಿಗೆ


ಬಿವೈವಿಯಿಂದ 150 ಕೋಟಿ ಆಮಿಷ: ಸಿಬಿಐಗೆ ಜವಾಬ್ದಾರಿ ಇದ್ದರೆ ತನಿಖೆ ನಡೆಸಲಿ, ಕೃಷ್ಣಬೈರೇಗೌಡ

click me!