ಲವ್ ಜಿಹಾದ್‌ಗೆ ಒದ್ದಾಡಿದ ರಾಷ್ಟ್ರೀಯ ಶೂಟರ್‌ಗೆ ಸಿಕ್ಕಿತು ನ್ಯಾಯ, ಪತಿ ರಖೀಬುಲ್‌ಗೆ ಜೀವಾವಧಿ ಶಿಕ್ಷೆ!

Published : Oct 05, 2023, 03:19 PM ISTUpdated : Oct 05, 2023, 03:43 PM IST
ಲವ್ ಜಿಹಾದ್‌ಗೆ ಒದ್ದಾಡಿದ ರಾಷ್ಟ್ರೀಯ ಶೂಟರ್‌ಗೆ ಸಿಕ್ಕಿತು ನ್ಯಾಯ, ಪತಿ ರಖೀಬುಲ್‌ಗೆ ಜೀವಾವಧಿ ಶಿಕ್ಷೆ!

ಸಾರಾಂಶ

ರಂಜಿತ್ ಕೊಹ್ಲಿ ಹೆಸರಿನಲ್ಲಿ ಭಾರತದ ರಾಷ್ಟ್ರೀಯ ಶೂಟರ್‌ನ್ನೇ ಪ್ರೀತಿಸಿದ ರಖೀಬುಲ್ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದ. ವಿವಾದವಾದ ಬೆನ್ನಲ್ಲೇ ರಖೀಬುಲ್ ಅಸಲಿ ಮುಖ ತೋರಿಸಿದ್ದಾನೆ. ಇಸ್ಲಾಂಗೆ ಮತಾಂತರವಾಗಲು ರಖೀಬುಲ್ ಹಾಗೂ ಆತನ ತಾಯಿ ಶೂಟರ್‌ಗೆ ಚಿತ್ರಹಿಂಸೆ ನೀಡಿದ್ದಾರೆ. ಲವ್ ಜಿಹಾದ್ ವಿರುದ್ದ ಪ್ರಕರಣ ದಾಖಲಿಸಿದ್ದ ತಾರಾಗೆ ಇದೀಗ ನ್ಯಾಯ ಸಿಕ್ಕಿದೆ. ಪತಿ ರಖೀಬುಲ್‌ಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. 

ನವದೆಹಲಿ(ಅ.05) ಭಾರತದ ರಾಷ್ಟ್ರೀಯ ಶೂಟರ್ ತಾರಾ ಶಹದೇವ್ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದು ಕೀರ್ತಿ ತಂದಿದ್ದಳು. ತಾರಾ ಭಾರತದ ಭರವಸೆಯ ಕ್ರೀಡಾಪಟವಾಗಿ ಮಂಚಿದ್ದಳು. ಇದೇ ವೇಳೆ ತಾರಾಗೆ ರಂಜಿತ್ ಕೊಹ್ಲಿ ಅನ್ನೋ ವ್ಯಕ್ತಿಯ ಪರಿಚಯವಾಗುತ್ತೆ. ಈ ಪರಿಚಯ ಆತ್ಮೀಯತೆ ಪಡೆದುಕೊಂಡು ಪ್ರೀತಿಯಾಗಿ ಬೆಳೆದಿತ್ತು. ಕೊನೆಗೆ ಮದುವೆಯೂ ಆಯಿತು. ಆದರೆ ಮದುವೆಯಾದ ದಿನವೇ ತಾನು ಮೋಸ ಹೋಗಿದ್ದೇನೆ ಎಂದು ತಾರಾಗೆ ಗೊತ್ತಾಗಿದೆ. ಕಾರಣ ತಾನು ಪ್ರೀತಿಸಿದ ರಂಜಿತ್ ಕೊಹ್ಲಿ ಅಸಲಿ ಹೆಸರು ರಖೀಬುಲ್ ಹಸನ್ ಖಾನ್. ಇಷ್ಟೇ ಆದರೆ ಸಮಸ್ಯೆ ಇರುತ್ತಿರಲಿಲ್ಲ. ರಖೀಬುಲ್ ಹಸನ್ ಖಾನ್ ತನ್ನ ಅಸಲಿ ಆಟ ಶುರುಮಾಡಿದ್ದ. ತಾರಾಳನ್ನು ಇಸ್ಲಾಂಗೆ ಮತಾಂತರವಾಗುವಂತೆ ಚಿತ್ರ ಹಿಂಸೆ ನೀಡಲು ಆರಂಭಿಸಿದ್ದ. ಇತ್ತ ರಖೀಬುಲ್ ತಾಯಿಯೂ ಸಾಥ್ ನೀಡಿದ್ದಾಳೆ. ರೋಸಿ ಹೋದ ತಾರ, ದೂರು ದಾಖಲಿಸಿದ್ದರು. 2017ರಿಂದ ಈ ಪ್ರಕರಣ ನಡೆಯುತ್ತಿದೆ. ಇದೀಗ ದೆಹಲಿ ಸಿಬಿಐ ಕೋರ್ಟ್ ತೀರ್ಪು ನೀಡಿದ್ದು, ರಖೀಬುಲ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ರಖೀಬುಲ್ ತಾಯಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ರಾಂಚಿ ಮೂಲದ ತಾರಾ ಶಹದೇವ್ 2015ರ ವೇಳೆಗೆ ಭಾರತೀಯ ಶೂಟರ್ ಕ್ಷೇತ್ರದಲ್ಲಿ ಮಿಂಚಿನ ಹೆಸರು. ಈ ವೇಳೆ ರಖೀಬುಲ್ ಹಸನ್ ಖಾನ್, ಹಿಂದೂ ಉದ್ಯಮಿಯಂತೆ ಫೋಸ್ ನೀಡಿದ್ದ. ಶೂಟರನ್ನೇ ಪ್ರೀತಿಸಿದ ರಖೀಬುಲ್ ಮದುವೆಗೂ ಒಪ್ಪಿಸಿದ್ದ. ಪೋಷಕರ ವಿರೋಧ ಸೇರಿದಂತೆ ಹಲವರ ವಿರೋಧ ಕಟ್ಟಿಕೊಂಡ ಶೂಟರ್ ತಾರಾ ರಂಜಿತ್ ಕೊಹ್ಲಿ ಅಲಿಯಾಸ್ ರಖೀಬುಲ್‌ನ ಮದುವೆಯಾಗಿದ್ದರು.

ಲವ್ ಜಿಹಾದ್‌ಗೆ ಹೆಣ್ಣು ಮಕ್ಕಳು ಬಲಿಯಾಗದಂತೆ ನೋಡಿಕೊಳ್ಳಿ: ಪೇಜಾವರ ಶ್ರೀ

ಮದುವೆಯಾದ ಬೆನ್ನಲ್ಲೇ ರಂಜಿತ್ ಕೊಹ್ಲಿ ಅಸಲಿಯತ್ತು ಬೆಳಕಿಗೆ ಬಂದಿದೆ. ಇಸ್ಲಾಂಗೆ ಮತಾಂತರವಾಗಲು ಚಿತ್ರ ಹಿಂಸೆ ನೀಡಿದ್ದಾರೆ. ಮಾನಸಿಕವಾಗಿ, ದೈಹಿಕವಾಗಿ ಕಿರುಕುಳ ನೀಡಲು ಆರಂಭಿಸಿದ ರಖೀಬುಲ್‌ನಿಂದ ತಾರಾ ನೆಮ್ಮದಿ ಕಳೆದುಕೊಂಡಳು. ದಿನದಿಂದ ದಿನಕ್ಕೆ ಚಿತ್ರಹಿಂಸೆ ಜೋರಾಯಿತು. 2017ರ ಆಗಸ್ಟ್ 22ರಂದು ಕಿರುಕುಳ ತಾಳಲಾರದೆ ಶೂಟರ್ ತಾರಾ ದೆಹಲಿಯ ಹಿಂದ್‌ಪಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ವೇಳೆ ಇದೊಂದು ಲವ್ ಜಿಹಾದ್ ಪ್ರಕರಣ ಅನ್ನೋದು ಸ್ಪಷ್ಟವಾಗಿದೆ. ದೂರು ದಾಖಲಾದ ಬೆನ್ನಲ್ಲೇ ರಖೀಬುಲ್ ಹಾಗೂ ಆತನ ತಾಯಿ ನಾಪತ್ತೆಯಾಗಿದ್ದರು. ಇತ್ತ ರಾಂಚಿ ಪೊಲೀಸರು ಹಾಗೂ ದೆಹಲಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ರಖೀಬುಲ್ ಹಾಗೂ ಆತನ ತಾಯಿಯನ್ನು ಬಂಧಿಸಿದ್ದರು.

ಬೆಂಗಳೂರು: ಕಾಶ್ಮೀರಿ ಯುವಕನಿಂದ ಲವ್‌ ಜಿಹಾದ್‌, ಯುವತಿಯಿಂದ ಪ್ರಧಾನಿ ಮೋದಿಗೆ ಟ್ವೀಟ್‌

ಈ ವೇಳೆ ರಖೀಬುಲ್ ಅಸಲಿಯತ್ತು ಬಹಿರಂಗವಾಗಿದೆ. ಲವ್ ಜಿಹಾದ್ ಷಡ್ಯಂತ್ರ ಪತ್ತೆ ಹಚ್ಚಿದ ಪೊಲೀಸರು ರಖೀಬುಲ್ ವಿರುದ್ಧ ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದರು. ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಸುದೀರ್ಘ ವಿಚಾರಣೆ ನಡೆಸಿದ ಸಿಬಿಐ ಕೋರ್ಟ್ ಇದೀಗ ತೀರ್ಪು ನೀಡಿದೆ. ಮೋಸದಿಂದ ಮದುವೆಯಾಗಿ ಇಸ್ಲಾಂಗೆ ಮತಾಂತರ ಮಾಡಲು ಯತ್ನಿಸಿದ ರಖೀಬುಲ್ ಹಸನ್ ಹಾಗೂ ಆತನ ತಾಯಿಯನ್ನು ಸಿಬಿಐ ಕೋರ್ಟ್ ದೋಷಿ ಎಂದು ತೀರ್ಪು ನೀಡಿದೆ. ರಖೀಬುಲ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದರೆ, ಇತ್ತ ಆತನ ತಾಯಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

UIDAI Rules: ಯಾವುದೇ ಹೋಟೆಲ್‌ನಲ್ಲಿ ಆಧಾರ್ ಕಾರ್ಡ್ ಫೋಟೋಕಾಪಿ ನೀಡೋ ಅಗತ್ಯವಿಲ್ಲ: ಈ ಹೊಸ ನಿಯಮ ತಿಳ್ಕೊಳ್ಳಿ
ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು