ಹೆಂಡತಿ ಇಬ್ಬರು ಹೆಣ್ಣು ಮಕ್ಕಳಿಗೆ ಗುಂಡಿಕ್ಕಿ ಪೊಲೀಸ್ ಪೇದೆ ಸಾವಿಗೆ ಶರಣು

By Suvarna News  |  First Published Oct 5, 2023, 3:15 PM IST

ಹೆಂಡತಿ ಹಾಗೂ ಇಬ್ಬರು ಮುದ್ದಾದ ಹೆಣ್ಣು ಮಕ್ಕಳಿಗೆ ಗುಂಡಿಕ್ಕಿಗೆ ಪೊಲೀಸ್ ಪೇದೆಯೊಬ್ಬರು ಸಾವಿಗೆ ಶರಣಾದ ದಾರುಣ ಘಟನೆ ನೆರೆಯ ಆಂಧ್ರಪ್ರದೇಶದ ಕಡಪಾದಲ್ಲಿ ನಡೆದಿದೆ.


ಕಡಪಾ: ಹೆಂಡತಿ ಹಾಗೂ ಇಬ್ಬರು ಮುದ್ದಾದ ಹೆಣ್ಣು ಮಕ್ಕಳಿಗೆ ಗುಂಡಿಕ್ಕಿಗೆ ಪೊಲೀಸ್ ಪೇದೆಯೊಬ್ಬರು ಸಾವಿಗೆ ಶರಣಾದ ದಾರುಣ ಘಟನೆ ನೆರೆಯ ಆಂಧ್ರಪ್ರದೇಶದ ಕಡಪಾದಲ್ಲಿ ನಡೆದಿದೆ. ಮೊದಲಿಗೆ ಹೆಂಡತಿ ಹಾಗೂ ಮಕ್ಕಳಿಗೆ ಗುಂಡು ಹಾರಿಸಿದ ಪೊಲೀಸ್ ಪೇದೆ ಅವರ ಸಾವಿನ ಬಳಿಕ ತನಗೂ ಗುಂಡು ಹಾರಿಸಿಕೊಂಡು ಸಾವಿನ ದಾರಿ ಹಿಡಿದಿದ್ದಾರೆ.  ಹೆಂಡತಿ ಮಕ್ಕಳನ್ನು ಕೊಂದು ತಾನು ಸಾವಿಗೆ ಶರಣಾದ ಪೇದೆಯನ್ನು 55 ವರ್ಷದ ವೆಂಕಟೇಶ್ವರಲು ಎಂದು ಗುರುತಿಸಲಾಗಿದೆ. 

ಇವರು ಕಡಪಾ (Kadapa) ನಗರದ ಎರಡು ನಗರದ ಪೊಲೀಸ್ ಠಾಣೆಯಲ್ಲಿ ರೈಟರ್ ಆಗಿ ಕೆಲಸ ಮಾಡುತ್ತಿದ್ದರು.  ಮೃತ ಪೇದೆಯ ಮನೆಯಲ್ಲಿ ಡೆತ್‌ನೋಟ್ ಕೂಡ ಸಿಕ್ಕಿದೆ ಎಂದು ಪೊಲೀಸರು ಹೇಳಿದ್ದಾರೆ. ಬುಧವಾರ ರಾತ್ರಿ 11ಗಂಟೆಯವರೆಗೆ ವೆಂಕಟೇಶ್ವರಲು ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡಿದ್ದು, ಕೆಲಸ ಮುಗಿಸಿ ಮನೆಗೆ ಹೋಗುವ ವೇಳೆ ಠಾಣೆಯಲ್ಲಿದ್ದ ಪಿಸ್ತೂಲ್ ಹಾಗೂ ಗುಂಡುಗಳನ್ನು ತೆಗೆದುಕೊಂಡು ಹೋಗಿದ್ದರು ಎಂದು ಕಡಪಾ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಎಂ.ಎಡಿ ಶರೀಫ್ ಹೇಳಿದ್ದಾರೆ. 

Tap to resize

Latest Videos

ಮಗಳಿಗೆ ಬುದ್ಧಿ ಕಲಿಸಲು ಬರ್ತ್‌ಡೇಗೆ ಕೊಳಚೆ ನೀರು ಗಿಫ್ಟ್ ಕೊಟ್ಟ ಅಪ್ಪ

ವೆಂಕಟೇಶ್ವರಲು ಅವರು ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿ ಹಣ ಕಳೆದುಕೊಂಡಿದ್ದರು, ಇದರ ಜೊತೆಗೆ ಕೌಟುಂಬಿಕ ವಿಚಾರಗಳು ಕೂಡ ಅವರನ್ನು ಬಾಧಿಸುತ್ತಿತ್ತು. ಇದರಿಂದ ನೊಂದು ಸಾವಿಗೆ ಶರಣಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. 

ತಾನೇ ಹೆಣೆದ ಬಲೆಗೆ ಬಿದ್ದ ಚೀನಾ ಸಬ್‌ಮರೀನ್‌: ಚೀನಾ ನೌಕಾಪಡೆಯ ಸಿಬ್ಬಂದಿ ಸೇರಿ 55 ಜನ ಬಲಿ 

ಸಹೋದ್ಯೋಗಿಗಳ ಹೆಸರು ಬರೆದಿಟ್ಟು ಪೊಲೀಸ್ ಅಧಿಕಾರಿ ಆತ್ಮಹತ್ಯೆ

ಮತ್ತೊಂದೆಡೆ ಕೇರಳದಲ್ಲೂ ಪೊಲೀಸ್ ಅಧಿಕಾರಿಯೊಬ್ಬರು ಸಾವಿಗೆ ಶರಣಾಗಿದ್ದಾರೆ. ಕಲಮಸ್ಸೆರಿಯ ಎಆರ್‌ ಕ್ಯಾಂಪ್‌ನಲ್ಲಿರುವ ಮನೆಯಲ್ಲಿ ಜೊಬಿ ದಾಸ್‌ ಎಂಬ ಪೊಲೀಸ್ ನೇಣಿಗೆ ಶರಣಾಗಿದ್ದಾರೆ. ಇವರು ಪೊಲೀಸ್ ಡ್ರೈವರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಸಾವಿಗೆ ಶರಣಾಗುವ ಮೊದಲು ಅವರು  ಡೆತ್‌ನೋಟು ಬರೆದಿಟ್ಟಿದ್ದು, ಅದರಲ್ಲಿ ಸಹೋದ್ಯೋಗಿಗಳ ಹೆಸರು ಉಲ್ಲೇಖಿಸಿದ್ದಾರೆ ಎಂದು ತಿಳಿದು ಬಂದಿದೆ. ಸಹೋದ್ಯೋಗಿಗಳು ಸಂಬಳ ಹೆಚ್ಚಾಗುವುದನ್ನು ತಡೆಯಲು ಸಂಚು ರೂಪಿಸಿದ್ದರು ಎಂದು ಅವರು ಆರೋಪಿಸಿದ್ದಾರೆ.

click me!