ಕಾವೇರಿ ನದಿ ನೀರು ಹಂಚಿಕೆಯಲ್ಲಿ ಕರ್ನಾಟಕಕ್ಕೆ ಬಿಗ್ ರಿಲೀಫ್, ತಮಿಳನಾಡು 2 ಅರ್ಜಿ ತಿರಸ್ಕರಿಸಿದ ಸುಪ್ರೀಂ

Published : Nov 20, 2026, 11:32 AM IST
Big Setback for Tamil Nadu

ಸಾರಾಂಶ

ಕಾವೇರಿ ನದಿ ನೀರು ಹಂಚಿಕೆ ಕುರಿತು ತಮಿಳು ಪದೇ ಪದೇ ಖ್ಯಾತೆ ತೆಗೆಯುತ್ತಿದೆ. 11 ಟಿಎಂಸಿ ನೀರು ಹರಿಸಲು ಒತ್ತಾಯಿಸಿ ಸುಪ್ರೀಂ ಕದ ತಟ್ಟಿದ್ದ ತಮಿಳುನಾಡು ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ.

ನವದೆಹಲಿ (ನ.20) ಕಾವೇರಿ ನದಿ ನೀರು ಹಂಚಿಕೆ ವಿವಾದ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಇಂದು ಸುಪ್ರೀಂ ಕೋರ್ಟ್ ನದಿ ನೀರು ಹಂಚಿಕೆ ಕುರಿತು ತಮಿಳುನಾಡು ಆಗ್ರಹವನ್ನು ತಿರಸ್ಕರಿಸಿದೆ. ತಮಿಳುನಾಡು ಸರ್ಕಾರ ಸಲ್ಲಿಸಿದ ಎರಡು ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಮೂಲಕ ತಮಿಳುನಾಡು ಸರ್ಕಾರಕ್ಕೆ ಅತೀ ದೊಡ್ಡ ಹಿನ್ನಡೆಯಾಗಿದೆ. ನ್ಯಾ.ವಿಕ್ರಮನಾಥ್ ನೇತೃತ್ವದ ಪೀಠ ಮಹತ್ವದ ತೀರ್ಪು ಪ್ರಕಟಿಸಿದೆ. ಸುಪ್ರೀಂ ಕೋರ್ಟ್ ತೀರ್ಪು ಪ್ರಕಾರ ಕರ್ನಾಟಕ ಸರ್ಕಾರ ಕಾವೇರು ನೀರು ಹರಿಸಿಲ್ಲ ಎಂದು ತಮಿಳುನಾಡು ವಾದ ಮಂಡಿಸಿತ್ತು. ಇತ್ತ ಕರ್ನಾಟಕ ಮಳೆ ಕೊರತೆಯಿಂದ ನದಿ ಬತ್ತಿ ಹೋಗುತ್ತಿದೆ. ಈ ಸಂಕಷ್ಟ ಸಮಯದಲ್ಲೂ CWMA ಆದೇಶ ಪಾಲಿಸಲಾಗಿದೆ ಎಂದು ಕರ್ನಾಟಕ ವಾದ ಮಂಡಿಸಿತ್ತು. ವಾದ ಪ್ರತಿವಾದ ಆಲಿಸಿದ ಸುಪ್ರೀಂ ಕೋರ್ಟ್, ತಮಿಳುನಾಡು ಎರಡೂ ಅರ್ಜಿಯನ್ನು ತಿರಸ್ಕರಿಸಿದೆ.

ತಮಿಳುನಾಡು ಸರ್ಕಾರದ ತಕರಾರು ಅರ್ಜಿ ತಿರಸ್ಕಾರ

CWMA ಆದೇಶವನ್ನು ಪ್ರತಿ ಬಾರಿ ಪಾಲಿಸಿದ ಕರ್ನಾಟಕ ಈ ಬಾರಿ ಸುಪ್ರೀಂ ಕೋರ್ಟ್‌ನಲ್ಲಿ ಗೆಲುವು ಸಿಕ್ಕಿದೆ. ಕರ್ನಾಟಕ ಅದೇಶದಂತೆ ನೀರು ಹರಿಸುತ್ತಿಲ್ಲ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಎರಡು ಅರ್ಜಿ ಸಲ್ಲಿಸಿತ್ತು. ಇತ್ತ ಕಾವೇರಿ ನದಿ ನೀರಿನ ಸಂಕಷ್ಟ, ಕುಡಿಯಲು ನೀರಿನ ಅಭಾವ ಕುರಿತು ಕರ್ನಾಟಕ ತನ್ನ ವಾದವನ್ನು ಸುಪ್ರೀಂ ಕೋರ್ಟ್‌ನಲ್ಲಿ ಮಂಡಿಸಿತ್ತು. ಇದೇ ವೇಳೆ ತಾವು ಪ್ರತಿ ಬಾರಿ CWMA ನೀರುವ ಆದೇಶವನ್ನು ಪಾಲಿಸಿದೆ. ಸಂಕಷ್ಟದ ಸಮಯದಲ್ಲಿ ಕುಡಿಯಲು ನೀರಿಲ್ಲ, ಹೀಗಾಗಿ ಬೆಳಗಳಿಗೆ ನೀರು ಹರಿಸಲು ಸಮಸ್ಯೆಯಾಗುತ್ತಿದೆ ಎಂದು ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಿತ್ತು. ಹೀಗಾಗಿ ತಮಿಳುನಾಡು ಸಲ್ಲಿಸಿದ್ದ ಎರಡು ತಕರಾರು ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.

ಸಿಜೆಐ ಪೀಠದ ಮುದೆ ತಮಿಳುನಾಡು ಪರ ವಕೀಲ ಬಿ ಕರುಣಾಕರ್ ತುರ್ತು ವಿಚಾರಣೆಗೆ ಮನವಿ ಮಾಡಿತ್ತು. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಪ್ರತಿದಿನ 3,000 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಆದೇಶಿಸಿದ್ದರೂ ಇನ್ನೂ ನೀರು ಬಿಡುಗಡೆ ಮಾಡಿಲ್ಲ ಎಂದು ತಕರಾರು ಅರ್ಜಿ ಸಲ್ಲಿಸಿತ್ತು. ನಾಲ್ಕು ಲಕ್ಷ ಹೆಕ್ಟೇರ್ ನಲ್ಲಿ ಬೆಳೆ ಸಂಪೂರ್ಣವಾಗಿ ನಾಶ ವಾಗುತ್ತಿದೆ ಕರ್ನಾಟಕ ನೀರು ಬಿಡುಗಡೆ ಮಾಡುತ್ತಿಲ್ಲ. ನಾವು ಎಲ್ಲಿಗೆ ಹೋಗಬೇಕು? ಎಂದು ವಕೀಲರು ವಾದ ಮಂಡಿಸಿದ್ದರು.

ಕುಡಿಯಲು ನೀರಿಲ್ಲ

ಕರ್ನಾಟಕ ಈ ಬಾರಿ ತೀವ್ರ ಬರ ಪರಿಸ್ಥಿತಿ ಎದುರಿಸಿದೆ. ಕಾವೇರಿ ನದಿಯಲ್ಲಿ ನೀರಿಲ್ಲ. ಜಲಾಶಯದಲ್ಲಿ ನೀರಿನ ಮಟ್ಟ ತಳಮಟ್ಟ ತಲುಪಿದೆ. ಕರ್ನಾಟಕದಲ್ಲಿ ಕುಡಿಯಲು ನೀರಿಗೆ ಹಾಹಾಕಾರ ಇದೆ. ಇದರ ನಡುವೆ CWMA ಆದೇಶವನ್ನು ಪಾಲಿಸುತ್ತಾ ಬಂದಿದ್ದೇವೆ. ಇದೀಗ ತಮಿಳುನಾಡು ರೈತರಿಗೆ ನೀರು ಬಿಡಲು ಸಾಕಷ್ಟು ನೀರಿಲ್ಲ ಎಂದು ಕರ್ನಾಟಕ ವಾದ ಮಂಡಿಸಿತ್ತು. ಬರ, ಕಡಿಮೆಯಾದ ಒಳಹರಿವು ಮತ್ತು ಕುಡಿಯುವ ನೀರಿನ ಅವಶ್ಯಕತೆಗಳನ್ನು ಉಲ್ಲೇಖಿಸಿ ಕರ್ನಾಟಕ ತಮಿಳುನಾಡು ಬೇಡಿಕೆಯನ್ನು ವಿರೋಧಿಸಿತ್ತು.

ಮೂರನೇ ಅರ್ಜಿ ಸಲ್ಲಿಸಿದ ತಮಿಳುನಾಡು

ಎರಡು ಅರ್ಜಿಗಳು ತಿರಸ್ಕೃತಗೊಂಡ ಬೆನ್ನಲ್ಲೇ ಇದೀಗ ತಮಿಳುನಾಡು ಮೂರನೇ ಅರ್ಜಿ ಸಲ್ಲಿಕೆ ಮಾಡಿದೆ. ಇದೇ ವೇಳೆ ಮೂರನೇ ಅರ್ಜಿ ವಿಚಾರಣೆಗೆ ಒಂದು ವಾರ ಸಮಯವಕಾಶವನ್ನು ಕೇಳಿದೆ. ತಮಿಳನಾಡು ಮೂರನೇ ಅರ್ಜಿಯನ್ನು ಮುಂದಿನ ವಾರ ವಿಚಾರಣೆಗೆ ದಿನಾಂಕ ನಿಗಧಿಪಡಿಸಲಾಗಿದೆ.

ನೀವು ಇಂದು ಮತ್ತೊಂದು ಅರ್ಜಿಯನ್ನು ಸಲ್ಲಿಸಿದ್ದೀರಾ? ತಮಿಳುನಾಡು ಸರ್ಕರಾದಲ್ಲಿ ಸಾಕಷ್ಟು ಹಣವಿದೆ. ಮೇಲಿಂದ ಮೇಲೆ ಅರ್ಜಿ ಸಲ್ಲಿಸುತ್ತಿದೆ ಎಂದು ಸುಪ್ರೀಂ ಕೋರ್ಟ್ ಪೀಠ ಹಾಸ್ಯವಾಗಿ ಹೇಳಿದೆ. ಅರ್ಜಿ 2843 ಹಾಗೂ 46291 ವಜಾಗೊಳಿಸಲಾಗಿದೆ. ಇಂದು ಸಲ್ಲಿಕೆಯಾದ ಮೂರನೇ ಅರ್ಜಿ ಮುಂದಿನ ವಾರ ವಿಚಾರಣೆಗೆ ಬರಲಿದೆ ಎಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೋದಿ ಜೈಲಿಗೆ ಹೋಗುವುದನ್ನು ಅಂದು ಕೈ ತಡೆಯಿತು ಎಂದು ಮೊಯ್ಲಿ ವಿವಾದ, ಕಾಂಗ್ರೆಸ್‌ ಮುಖವಾಡ ಕಳಚಿದೆ ಎಂದ ಬಿಜೆಪಿ
ಒಬ್ಬ ಡಾಕ್ಟರ್, ಇನ್ನೊಬ್ಬ ಇಂಜಿನಿಯರ್ ಆಗ್ತೀನಿ ಅಂದ್ರು! ಮಕ್ಕಳ ಕನಸು ಈಡೇರಿಸಲು ಭೂಮಿಯನ್ನೇ ಮಾರಿದ ಅಪ್ಪ, ಮುಂದೇನಾಯ್ತು?