ಮೋದಿ ಪ್ರತಿಕೃತಿ ದಹಿಸಿ ಗಲಭೆ : BSR ಸಂಘಟನೆ ಅಧ್ಯಕ್ಷ ಸೇರಿ 15 ಮಂದಿ ಮೇಲೆ ಕೇಸ್!

By Suvarna NewsFirst Published Sep 19, 2020, 8:02 PM IST
Highlights

ಪ್ರಧಾನಿ ನರೇಂದ್ರ ಮೋದಿ ಹುಟ್ಟು ಹಬ್ಬವನ್ನು ವಿರೋಧ ಪಕ್ಷ ಸೇರಿದಂತೆ ಹಲವು ಸಂಘಟನೆಗಳು ನಿರುದ್ಯೋಗ ದಿನ ಎಂದು ಆಚರಿಸಿತ್ತು. ಇದೇ ವೇಳೆ ಗಲಭೆ ಸೃಷ್ಟಿಸಿದ ಭಾರತೀಯ ಸಮಾಜ್ ರಕ್ಷಕ್ ಯುವ ಮೋರ್ಚಾ ಅಧ್ಯಕ್ಷ ಸೇರಿದಂತೆ 14 ಮಂದಿ ವಿರುದ್ದ ಪ್ರಕರಣ ದಾಖಲಾಗಿದೆ.

ಮುಜಾಫರ್‌ನಗರ್(ಸೆ.19): ಪ್ರಧಾನಿ ನರೇಂದ್ರ ಮೋದಿ ಸೆ.17 ರಂದು 70ನೇ ವರ್ಷಕ್ಕೆ ಕಾಲಿಟ್ಟಿದ್ದರು. ಮೋದಿ ಹುಟ್ಟು ಹಬ್ಬಕ್ಕೆ ಹಲವು ಗಣ್ಯರು ಶುಭಕೋರಿದ್ದರು. ಆದರೆ ಹಲವು ಸಂಘಟನಗಳು ಮೋದಿ ಹುಟ್ಟುಹಬ್ಬವನ್ನು ನಿರುದ್ಯೋಗ ದಿನ ಎಂದು ಆಚರಿಸಿತ್ತು. ಮುಜಾಫರ್‌ನಗರಲ್ಲಿ ಭಾರತೀಯ ಸಮಾಜ್ ರಕ್ಷಕ್ ಯುವ ಮೋರ್ಚಾ ನಿರುದ್ಯೋಗ ದಿನವಾಗಿ  ಆಚರಿಸಿತ್ತು. ಆದರೆ ಈ ಆಚರಣೆ ಹೆಸರಿನಲ್ಲಿ ಗಲಭೆ ಸೃಷ್ಟಿಸಿದೆ.

'ಮೋದಿ ಸರ್ಕಾರದ ತಪ್ಪು ಆರ್ಥಿಕ ನಿರ್ಧಾರಗಳಿಂದ ನಿರುದ್ಯೋಗ

ಶಾಮ್ಲಿ ಜಿಲ್ಲೆಯಲ್ಲಿ ನಿರುದ್ಯೋಗ ದಿನ ಆಚರಣೆ ವೇಳೆ ಭಾರತೀಯ ಸಮಾಜ್ ರಕ್ಷಕ್ ಯುವ ಮೋರ್ಚಾ ಸಂಘ ಮೋದಿ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿತ್ತು. ವೋದಿ ವಿರುದ್ಧ ಘೋಷಣೆ ಕೂಗಿದ ಸಂಘಟನೆ, ಪ್ರತಿಕೃತಿ ದಹಿಸಿದ ಬೆನ್ನಲ್ಲೇ ಗಲಭೆ ಆರಂಭಿಸಿತು. ಸಾರ್ವಜನಿ ಆಸ್ತಿ ಪಾಸ್ತಿ ನಾಶಕ್ಕೆ ಮುಂದಾಗಿದೆ. ಈ ಕುರಿತು ಶಾಮ್ಲಿ ಜಿಲ್ಲಾ ಬಿಜೆಪಿ ಘಟಕ ದೂರು ನೀಡಿತ್ತು.

ಉದ್ದೇಶ ಪೂರ್ವಕವಾಗಿ ಗಲಭೆ ಸೃಷ್ಟಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.  ಭಾರತೀಯ ಪೀನಲ್ ಕೋಡ್ ಸೆಕ್ಷನ್ 147, 188 ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ನಾಲ್ವರನ್ನು ಗುರುತಿಸಲಾಗಿದ್ದು, ಇನ್ನುಳಿದ 11 ಮಂದಿ ಪತ್ತೆಗಾಗಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇತ್ತ  ಶಾಂತಿ ಭಂಗ ತಂದ, ಸಾರ್ವಜನಿಕ ಸೇವೆಯಲ್ಲಿರುವ ಪ್ರಧಾನಿಯನ್ನು ಅವಮಾನಿಸಿದ ಪ್ರತಿಯೊಬ್ಬರಿಗೆ ಶಿಕ್ಷೆ ಆಗಬೇಕು ಎಂದು ಜಿಲ್ಲಾ ಬಿಜೆಪಿ ಘಟಕ ಆಗ್ರಹಿಸಿದೆ.
 

click me!