ಶಿಕ್ಷೆ ಕಡಿತಗೊಳಿಸಲು ಸಾಧ್ಯವಿಲ್ಲ, ಮುಂಬೈ ಬ್ಲಾಸ್ಟ್ ಅಪರಾಧಿ ಅಬು ಸಲೆಮ್‌ಗೆ ಸುಪ್ರೀಂ ಚಾಟಿ!

Published : Jul 11, 2022, 12:41 PM IST
ಶಿಕ್ಷೆ ಕಡಿತಗೊಳಿಸಲು ಸಾಧ್ಯವಿಲ್ಲ, ಮುಂಬೈ ಬ್ಲಾಸ್ಟ್ ಅಪರಾಧಿ ಅಬು ಸಲೆಮ್‌ಗೆ ಸುಪ್ರೀಂ ಚಾಟಿ!

ಸಾರಾಂಶ

ಜೀವಾವಧಿ ಶಿಕ್ಷೆ ಕಡಿತಗೊಳಿಸಲು ಸುಪ್ರೀಂಗೆ ಮನವಿ ಶಿಕ್ಷೆ ಸ್ಫೋಟದಲ್ಲಿ ಮಡಿದ ಕುಟುಂಬಕ್ಕೆ ನೀಡಿದ ನ್ಯಾಯ ಶಿಕ್ಷೆ ಪ್ರಮಾಣದಲ್ಲಿ ಕಡಿತ ಸಾಧ್ಯವೇ ಇಲ್ಲ ಎಂದು ಸುಪ್ರೀಂ

ದೆಹಲಿ(ಜು.11):  ಮುಂಬೈ ಸ್ಫೋಟ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಅಪರಾಧಿ ಅಬು ಸಲೇಮ್‌ಗೆ ಮತ್ತೆ ಹಿನ್ನಡೆಯಾಗಿದೆ. 1993ರ ಮುಂಬೈ ಸ್ಫೋಟದಲ್ಲಿ ದೋಷಿ ಎಂದು ಸಾಬೀತಾಗಿರುವ ಅಬು ಸಲೇಮ್‌ಗೆ ಸುಪ್ರೀಂ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಈ ಶಿಕ್ಷೆ ಪ್ರಮಾಣವನ್ನು ಕಡಿತಗೊಳಿಸಬೇಕು ಎಂದು ಕೋರ್ಟ್ ಮೆಟ್ಟಿಲೇರಿದ್ದ ಅಬ್ ಸಲೇಮ್‌ಗೆ ಸುಪ್ರೀಂ ಕೋರ್ಟ್ ಚಾಟಿ ಬೀಸಿದೆ.  1993ರ ಮುಂಬೈ ಬ್ಲಾಸ್ಟ್ ಪ್ರಕರಣ ರೂವಾರಿ ಅಬು ಸಲೇಮ್‌ಗೆ ನೀಡಿರುವ ಶಿಕ್ಷೆ ಘಟನೆಯಲ್ಲಿ ಮಡಿದ ಕುಟಂಬಕ್ಕೆ ನೀಡಿದ ನ್ಯಾಯವಾಗಿದೆ. ಈ ಶಿಕ್ಷೆಯನ್ನು ಕಡಿತಗೊಳಿಸಲು ಸಾಧ್ಯವೇ ಇಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಶಿಕ್ಷೆಯಿಂದ ಪಾರಾಗಲು 20 ವರ್ಷಗಳ ಹಿಂದೆ ನೀಡಿದ್ದ ವಾಗ್ದಾನ ಮಾತನ್ನು ಕೋರ್ಟ್ ಮುಂದೆ ವಾದಿಸಿದ ಅಬು ಸಲೇಮ್‌ಗೆ ಕೋರ್ಟ್ ತಕ್ಕ ಉತ್ತರ ನೀಡಿದೆ.  1993ರ ಮುಂಬೈ ಸ್ಫೋಟ ಪ್ರಕರಣ ಬಳಿಕ ಪರಾರಿಯಾಗಿದ್ದ ಅಬ್ ಸಲೇಮ್‌ನನ್ನು ತನಿಖಾ ಸಂಸ್ಥೆ 2022 ಪೋರ್ಚುಗಲ್‌ನಲ್ಲಿ ಪತ್ತೆ ಹಚ್ಚಿತ್ತು. ಬಳಿಕ ಕಾನೂನು ಹೋರಾಟ ಮುಂದುವರಿಸಿದ ಭಾರತ, 2005ರಲ್ಲಿ ಪೋರ್ಚುಗಲ್‌ನಿಂದ ಭಾರತಕ್ಕೆ ಗಡೀಪಾರು ಮಾಡುವಲ್ಲಿ ಯಶಸ್ವಿಯಾಗಿತ್ತು. ಗಡೀಪಾರು ಮಾಡುವಾಗ ಪೂರ್ಚುಗಲ್ ನಿಯಮದ ಪ್ರಕಾರ ಭಾರತ ಶಿಕ್ಷೆ ಪ್ರಮಾಣ ಅಥವಾ ಅವಧಿಯನ್ನು ಹೇಳಬೇಕಿತ್ತು. ಈ ವೇಳೆ ಗರಿಷ್ಠ 25 ವರ್ಷ ಜೈಲು ಶಿಕ್ಷೆ ಎಂದಿತ್ತು. ಇದೇ ವಾಗ್ದಾನವನ್ನು ಮುಂದಿಟ್ಟ ಅಬು ಸಲೇಮ್ ಈಗಾಗಲೇ 17 ವರ್ಷ ಜೈಲಿನಲ್ಲಿ ಕಳೆದಿದ್ದೇನೆ. ಪೂರ್ಚುಗಲ್‌ಗೆ ನೀಡಿದ ವಾಗ್ದಾನದಂತೆ ತನಗೆ ನೀಡಿರುವ ಜೀವಾವಧಿ ಶಿಕ್ಷೆ ಪ್ರಮಾಣವನ್ನು 25 ವರ್ಷಕ್ಕೆ ಕಡಿತಗೊಳಿಸಬೇಕು ಎಂದು ಅರ್ಜಿ ಸಲ್ಲಿಸಿದ್ದರು.

 

1993ರ ಮುಂಬೈ ದಾಳಿ ರೂವಾರಿಗಳಿಗೆ ಪಾಕಿಸ್ತಾನ ಆತಿಥ್ಯ: India

3 ವರ್ಷಗಳ ಕಾನೂನು ಹೋರಾಟದ ಬಳಿಕ ಪೋರ್ಚುಗಲ್‌ನಿಂದ ಅಬು ಸಲೇಮ್ ಗಡೀಪಾರು ಮಾಡಲಾಯಿತು. 2017ರಲ್ಲಿ ಸುಪ್ರೀಂ ಕೋರ್ಟ್ ಅಬು ಸಲೇಮ್ ದೋಷಿ ಎಂದು ತೀರ್ಪು ನೀಡಿತ್ತು. ಈ ವೇಳೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದೀಗ ಈ ಶಿಕ್ಷೆ ಪ್ರಮಾಣ ಕಡಿತಗೊಳಿಸಲು ಮನವಿ ಮಾಡಿದ್ದ ಅಬು ಸಲೇಮ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.

ಶಿಕ್ಷೆಯಲ್ಲಿ ಉನ್ನತ ಶಿಕ್ಷೆ ಅಥವಾ ಕಡಿಮೆ ಶಿಕ್ಷೆ ಎಂದಿಲ್ಲ.  ಕಾನೂನು ಉಲ್ಲಂಘನೆ, ಗಂಭೀರತೆಯನ್ನ ನೋಡಿಕೊಂಡು ಶಿಕ್ಷೆ ವಿಧಿಸಲಾಗುತ್ತದೆ. ಕೋರ್ಟ್ ವಿಧಿಸಿದ ಶಿಕ್ಷೆಯನ್ನು ಪೂರೈಸಿದರೆ ಮಡಿದ ಕುಟುಂಬಸ್ಥರಿಗೆ ನ್ಯಾಯ ಸಿಗಲಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. 1993ರ ಬಾಂಬ್ ಸ್ಫೋಟ ಪ್ರಕರಣದಲ್ಲಿ ದೋಷಿಯಾಗಿರುವ ಅರ್ಜಿದಾರ ಅಬು ಸಲೇಮ್, ಪೂರ್ಚುಗಲ್ ಅಥವಾ ಇನ್ಯಾವುದೇ ದೇಶದ ಕಾನೂನು ಬಳಸಿ ಶಿಕ್ಷೆ ಪ್ರಮಾಣದ ತಪ್ಪಿಸಲು ಸಾಧ್ಯವಿಲ್ಲ. ಈ ನೆಲದ ಕಾನೂನು ಗೌರವಿಸಬೇಕು ಎಂದು ಕೋರ್ಟ್ ಹೇಳಿದೆ. 

ವಾರಣಾಸಿ ಸರಣಿ ಸ್ಫೋಟ, ಭಯೋತ್ಪಾದಕ ವಲೀಯುಲ್ಲಾಗೆ ಗಲ್ಲು ಶಿಕ್ಷೆ!

1993ರ ಮುಂಬೈ ಸ್ಫೋಟದಲ್ಲಿ 257 ಮಂದಿ ಮೃತಪಟ್ಟಿದ್ದರು. 713 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಭಾರತದ ಮೇಲೆ ನಡೆದ ಬಾಂಬ್ ಸ್ಫೋಟ ಪ್ರಕಣರ ಹಾಗೂ ದಾಳಿಗಳಲ್ಲಿ 1993ರ ಮುಂಬೈ ಸ್ಫೋಟ ಗರಿಷ್ಠ ಮಟ್ಟದ ಸಾವು ನೋವು ತಂದಿದೆ. ಅಬು ಸಲೇಮ್ ಅರ್ಜಿಯನ್ನು ಮೇ 5 ರಂದು ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿತ್ತು. ಇಂದು ತೀರ್ಪು ಪ್ರಕಟಿಸಿದ ಕೋರ್ಟ್ ಸಲೇಮ್ ಅರ್ಜಿಯನ್ನು ತರಿಸ್ಕರಿಸಿ, ಕೋರ್ಟ್ ಈ ಮೊದಲು ನೀಡಿದ ಶಿಕ್ಷೆ ಪ್ರಕಾರ ನಡೆದುಕೊಳ್ಳುವಂತೆ ಸೂಚಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಇಲ್ಲೂ ಹಿಂಸೆ ಆದೀತು ಹುಷಾರ್‌: ರಾಜ್ಯಗಳಿಗೆ ಕೇಂದ್ರದಿಂದ ಅಲರ್ಟ್
India Latest News Live: ಮಕ್ಕಳ ಬಗ್ಗೆ ರಶ್ಮಿಕಾ ಮಂದಣ್ಣ ಮಾತು, ಆಗಲೇ ತಾಯಿಯಾದ ಫೀಲಿಂಗ್! ಶೀಘ್ರದಲ್ಲೇ ನಟನೆಗೆ ಗುಡ್‌ಬೈ?