ಆನ್‌ಲೈನ್‌ ಮೂಲಕ ಮದುವೆ ನೋಂದಣಿ: ಹೈಕೋರ್ಟ್‌ ಅಸ್ತು!

By Suvarna NewsFirst Published Sep 12, 2021, 8:45 AM IST
Highlights

* ಆನ್‌ಲೈನ್‌ ಮೂಲಕ ಮದುವೆ ನೋಂದಣಿ: ದಿಲ್ಲಿ ಹೈಕೋರ್ಟ್‌ ಅಸ್ತು

* ವರ್ಚು​ವಲ್‌ ಆಗಿ ದಂಪತಿ ಹಾಜ​ರಾ​ತಿಗೆ ಅವ​ಕಾ​ಶ

ನವದೆಹಲಿ(ಸೆ.12): ಈಗಿನ ಸನ್ನಿವೇಶದಲ್ಲಿ ಮದುವೆಗಳ ನೋಂದಣಿಯನ್ನು ವರ್ಚುವಲ್‌ ಆಗಿಯೂ ನೋಂದಾಯಿಸಬಹುದಾಗಿದೆ ಎಂದು ದೆಹಲಿ ಹೈಕೋರ್ಟ್‌ ತೀರ್ಪು ನೀಡಿದೆ. ಗಂಡು ಹೆಣ್ಣಿನ ಉಪಸ್ಥಿತಿಯಲ್ಲಿಯೇ ವಿವಾಹವನ್ನು ನೋಂದಣಿ ಮಾಡಬೇಕು ಎಂದು ಕಾನೂನು ಹೇಳುತ್ತದೆ. ಆದರೆ, ಈ ನಿಯಮಗಳು ಜನರು ತಮ್ಮ ಹಕ್ಕುಗಳನ್ನು ಚಲಾಯಿಸಲು ಅಡ್ಡಿ ಆಗಬಾರದು ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ.

ಅಮೆರಿಕ ಮೂಲದ ಭಾರತೀಯ ದಂಪತಿಯೊಬ್ಬರು ತಮ್ಮ ಮದುವೆಯನ್ನು ವಿಡಿಯೋ ಕಾನ್ಫರೆನ್ಸ್‌ ಮೂಲಕ ನೋಂದಣಿ ಮಾಡಲು ಅವಕಾಶ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ

ರೇಖಾ ಪಾಟೀಲ್‌ ಅವರಿದ್ದ ಪೀಠ, ದೆಹಲಿ (ಕಡ್ಡಾಯ ಮದುವೆ ನೋಂದಣಿ) ಆದೇಶ- 2014ರಲ್ಲಿರುವ ನಿಯಮಗಳು ಮದುವೆಗಳ ನೋಂದಣಿಗೆ ದೈಹಿಕ ಉಪಸ್ಥಿತಿ ಕಡ್ಡಾಯ ಎಂದು ಹೇಳುತ್ತವೆ. ಆದರೆ, ವಿಡಿಯೋ ಕಾನ್ಫರೆನ್ಸ್‌ ಮೂಲಕವೂ ಮದುವೆ ನೋಂದಣಿಗೆ ಅವಕಾಶ ನೀಡಬಹುದು ಎಂಬುದಾಗಿ ಆದೇಶವನ್ನು ಅರ್ಥಮಾಡಿಕೊಳ್ಳಬೇಕಿದೆ. ಇಂದಿನ ದಿನಗಳಲ್ಲಿ ವಿಡಿಯೋ ಕಾನ್ಫರೆನ್ಸ್‌ ವಿಧಾನವನ್ನು ಬಳಕೆ ಮಾಡಿಕೊಳ್ಳುವುದು ಮಹತ್ವದ್ದಾಗಿದೆ ಮತ್ತು ಸುಲಭವಾಗಿ ಲಭ್ಯವಿರುವ ಆಯ್ಕೆಯೂ ಆಗಿದೆ ಎಂದು ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ.

click me!