
ನವದೆಹಲಿ: ಮಧ್ಯಪ್ರಾಚ್ಯ ಬಿಕ್ಕಟ್ಟು ಇದೀಗ ನೇರವಾಗಿ ಕೋಟ್ಯಂತರ ಭಾರತೀಯ ಕುಟುಂಬಗಳ ಅಡುಗೆ ಮನೆಗೇ ಪ್ರವೇಶಿಸಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಅನಿಲ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 60 ರು. ಮತ್ತು ವಾಣಿಜ್ಯ ಸಿಲಿಂಡರ್ ಬೆಲೆಯನ್ನು 115 ರು.ನಷ್ಟು ಹೆಚ್ಚಳ ಮಾಡಿದೆ. ಬೆಲೆ ಏರಿಕೆ ಶುಕ್ರವಾರದಿಂದಲೇ ಜಾರಿಗೆ ಬಂದಿದೆ.
ಈ ದರ ಏರಿಕೆ ಬಳಿಕ, ಈಗಾಗಲೇ ಸಬ್ಸಿಡಿರಹಿತವಾಗಿರುವ 14.2 ಕೆ.ಜಿ. ತೂಕದ ಗೃಹ ಬಳಕೆಯ ಸಿಲಿಂಡರ್ ಬೆಲೆ ಬೆಂಗಳೂರಿನಲ್ಲಿ 915 ರು.ಗೆ, ದೆಹಲಿಯಲ್ಲಿ 913 ರು.ಗೆ ತಲುಪಿದೆ. ಕಳೆದ ಏಪ್ರಿಲ್‌ನಲ್ಲಿ ಕೂಡ ಎಲ್‌ಪಿಜಿ ಬೆಲೆಯಲ್ಲಿ 50 ರು. ಏರಿಕೆ ಮಾಡಲಾಗಿತ್ತು.
ಆದರೆ ಉಜ್ವಲಾ ಯೋಜನೆಯಡಿ ದೇಶದ 10 ಕೋಟಿ ಬಡವರಿಗೆ ವಿತರಿಸುವ ಗೃಹ ಬಳಕೆಯ ಎಲ್‌ಪಿಜಿ ದರವೂ 60 ರು. ಏರಿಕೆಯಾಗಲಿದೆ. ಅವರಿಗೆ 300 ರು. ಸಬ್ಸಿಡಿ ಇರುವುದರಿಂದ 615 ರು.ಗೆ ಸಿಲಿಂಡರ್ ಸಿಗಲಿದೆ. ಈ ಯೋಜನೆಯಡಿ ವಾರ್ಷಿಕ 12 ಸಿಲಿಂಡರ್ ಖರೀದಿಸಬಹುದಾಗಿದೆ.
ಇನ್ನು ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಬಳಸುವ ವಾಣಿಜ್ಯ ಉದ್ದೇಶದ 19 ಕೆ.ಜಿ. ತೂಕದ ಸಿಲಿಂಡರ್ ಬೆಲೆಯಲ್ಲಿ 114.5 ರು. ಹೆಚ್ಚಳ ಮಾಡಲಾಗಿದೆ. ಹೆಚ್ಚಳದ ಬಳಿಕ ಸಿಲಿಂಡರ್ ಬೆಲೆ ಬೆಂಗಳೂರಿನಲ್ಲಿ 1958 ರು.ಗೆ ತಲುಪಿದೆ.
ಈ ನಡುವೆ ಸರ್ಕಾರ ಶೀಘ್ರವೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನೂ ಏರಿಸಲಿದೆ ಎಂಬ ವದಂತಿಗಳು ಹಬ್ಬಿದ್ದು, ಸರ್ಕಾರ ಅದನ್ನು ಸ್ಪಷ್ಟವಾಗಿ ತಳ್ಳಿಹಾಕಿದೆ. ಅಂಥ ಯಾವುದೇ ಪ್ರಸ್ತಾಪ ಇಲ್ಲ ಎಂದು ಕೇಂದ್ರ ಸರ್ಕಾರದ ಮೂಲಗಳು ಖಚಿತಪಡಿಸಿವೆ.
₹855
₹915
ವಾಣಿಜ್ಯ ಬಳಕೆ ಹಾಲಿ ದರ - ಪರಿಷ್ಕೃತ ದರ
1843 - 1958
₹110 11 ತಿಂಗಳಲ್ಲಿ ಗೃಹ ಬಳಕೆ
ಸಿಲಿಂಡರ್ ದರ ಹೆಚ್ಚಳ ಪ್ರಧಾನಿ ಮೋದಿ ಹುದ್ದೆ ತ್ಯಜಿಸಲಿ
ಸಿಲಿಂಡರ್ ಬೆಲೆ ಏರಿಕೆ ಅನಿವಾರ್ಯವಾಗಿರಲಿಲ್ಲ. ಶರಣಾಗತಿಯೇ ವಿದೇಶಾಂಗ ನೀತಿ, ರಾಜತಾಂತ್ರಿಕತೆ ಎಂಬುದು ಪ್ರದರ್ಶನದ ವಸ್ತು ಎಂದು ತಿಳಿದಿರುವುದರ ಫಲವೇ ಈ ದರ ಏರಿಕೆ. ಜಾಗತಿಕ ಮಟ್ಟದಲ್ಲಿ ದೇಶದ ಮಾನ ಕಳೆಯುತ್ತಿರುವ ಮೋದಿ ಜನರ ಕ್ಷಮೆಯಾಚಿಸಿ, ರಾಜೀನಾಮೆ ನೀಡಲಿ.
ಸಿದ್ದರಾಮಯ್ಯ, ಮುಖ್ಯಮಂತ್ರಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ