
ಪಾಟ್ನಾ (ಜೂನ್ 20): ಗುಡುಗು, ಸಿಡಿಲು ಸಹಿತ (lightning and thunderstorms) ಭಾರೀ ಮಳೆಯ ಕಾರಣದಿಂದಾಗಿ ಬಿಹಾರದಲ್ಲಿ (Bihar) 17 ಜನರು ಸಾವಿಗೀಡಾಗಿದ್ದಾರೆ, ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar), ಇವರ ಸಾವಿಗೆ ಅತೀವ ದುಃಖ ವ್ಯಕ್ತಪಡಿಸಿದ್ದು, ಪ್ರತಿ ಸಂತ್ರಸ್ತರ ಕುಟುಂಬಕ್ಕೆ 4 ಲಕ್ಷ ರೂಪಾಯಿ ಪರಿಹಾರವನ್ನು ಘೋಷಣೆ ಮಾಡಿದ್ದಾರೆ.
ಪ್ರತಿಕೂಲ ವಾತಾವರಣದಲ್ಲಿ ಜನರು ಹೆಚ್ಚಿನ ಜಾಗರೂಕರಾಗಿರಬೇಕು ಮತ್ತು ಗುಡುಗು ಸಹಿತ ಮಳೆಯನ್ನು ತಪ್ಪಿಸಲು ವಿಪತ್ತು ನಿರ್ವಹಣಾ ಇಲಾಖೆಯ ಶಿಫಾರಸುಗಳನ್ನು (Disaster Management Department) ಅನುಸರಿಸಬೇಕು ಎಂದು ಅವರು ಒತ್ತಾಯಿಸಿದರು.
ಈ ಕುರಿತು ಟ್ವಿಟರ್‌ನಲ್ಲಿ (Twitter) ಮಾಹಿತಿ ನೀಡಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್, “ಗುಡುಗು ಮತ್ತು ಸಿಡಿಲು ಸಹಿತ ಮಳೆಯಿಂದಾಗಿ ಭಾಗಲ್ಪುರದಲ್ಲಿ 6, ವೈಶಾಲಿಯಲ್ಲಿ 3, ಖಗಾರಿಯಾದಲ್ಲಿ 2, ಕತಿಹಾರ್‌ನಲ್ಲಿ 1, ಸಹರ್ಸಾದಲ್ಲಿ 1, ಮಾಧೇಪುರದಲ್ಲಿ 1, ಬಂಕಾದಲ್ಲಿ 2 ಮತ್ತು ಮುಂಗೇರ್ ನಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಸಂತ್ರಸ್ತ ಕುಟುಂಬಗಳಿಗೆ ಸಂತಾಪ ಸೂಚಿಸುತ್ತಿದ್ದೇನೆ ಮೃತರ ಎಲ್ಲಾ ಸಂಬಂಧಿಕರಿಗೆ ತಕ್ಷಣವೇ ₹ 4 ಲಕ್ಷ ಪರಿಹಾರವನ್ನು ನೀಡಲಾಗುವುದು' ಎಂದು ಹೇಳಿದ್ದಾರೆ.
"ಪ್ರತಿಕೂಲ ಹವಾಮಾನದಲ್ಲಿ ಸಂಪೂರ್ಣ ಜಾಗರೂಕತೆ ವಹಿಸಲು ಮತ್ತು ಗುಡುಗು ಸಹಿತ ಸಮಯದಲ್ಲಿ ವಿಪತ್ತು ನಿರ್ವಹಣಾ ಇಲಾಖೆಯು ಕಾಲಕಾಲಕ್ಕೆ ನೀಡುವ ಸಲಹೆಗಳನ್ನು ಅನುಸರಿಸಲು ಜನರಲ್ಲಿ ಮನವಿ ಮಾಡುತ್ತೇವೆ. ಮನೆಯಲ್ಲಿಯೇ ಇರಿ ಮತ್ತು ಕೆಟ್ಟ ವಾತಾವರಣದಲ್ಲಿ ಇನ್ನಷ್ಟು ಎಚ್ಚರಿಕೆಯಿಂದ ಇರಿ" ಎಂದು ಅವರು ಹೇಳಿದರು.
ಇದರ ನಡುವೆ ನೈಋತ್ಯ ಮಾನ್ಸೂನ್ ಗುಜರಾತ್, ಮಧ್ಯಪ್ರದೇಶ, ವಿದರ್ಭದ ಉಳಿದ ಭಾಗಗಳು, ಛತ್ತೀಸ್‌ಗಢದ ಕೆಲವು ಭಾಗಗಳು, ಗಂಗಾನದಿ ವ್ಯಾಪ್ತಿಯ ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ಬಿಹಾರದ ಭಾಗಗಳಲ್ಲಿ ಮುಂದುವರೆದಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ಉತ್ತರ, ಮಧ್ಯ ಮತ್ತು ಪೂರ್ವ ಭಾರತದಲ್ಲಿ ಮುಂದಿನ ಎರಡು ಮೂರು ದಿನಗಳ ಕಾಲ ಚದುರಿದ ಭಾರೀ ಮಳೆಯೊಂದಿಗೆ ಗುಡುಗು ಸಹಿತ ಮಳೆ ಮುಂದುವರಿಯುವ ನಿರೀಕ್ಷೆಯಿದೆ.
ಶನಿವಾರದಂದು, IMD ತನ್ನ ಬುಲೆಟಿನ್‌ನಲ್ಲಿ ಮುಂದಿನ ಕೆಲವು ದಿನಗಳಲ್ಲಿ ಬಿಹಾರ, ಜಾರ್ಖಂಡ್, ಒಡಿಶಾ ಮತ್ತು ಗಂಗಾನದಿ ವ್ಯಾಪ್ತಿಯ ಪಶ್ಚಿಮ ಬಂಗಾಳದಲ್ಲಿ ಮಳೆಯ ಮುನ್ಸೂಚನೆ ನೀಡಿದೆ. ಮುಂದಿನ ಐದು ದಿನಗಳಲ್ಲಿ ಬಿಹಾರ, ಜಾರ್ಖಂಡ್, ಒಡಿಶಾ ಮತ್ತು ಗಂಗಾನದಿ ವ್ಯಾಪ್ತಿಯ ಪಶ್ಚಿಮ ಬಂಗಾಳದಲ್ಲಿ ಗುಡುಗು/ಮಿಂಚು/ಗಾಳಿ ಸಹಿತ ಸಾಕಷ್ಟು ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ.
Karnataka Weather Forecast: ಕರಾವಳಿ ಮತ್ತು ಮಲೆನಾಡಿನಲ್ಲಿ ಭಾರೀ ಮಳೆ ನಿರೀಕ್ಷೆ
9 ರಾಜ್ಯಗಳಲ್ಲಿ ಭಾರಿ ಮಳೆಯ ಮುನ್ಸೂಚನೆ: ಈಗಾಗಲೇ ಭಾರತೀಯ ಹಮಾಮಾನ ಇಲಾಖೆ ದೇಶದ 9 ರಾಜ್ಯಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಮುನ್ಸೂಚನೆಯಲ್ಲಿ ಈಗಾಗಲೇ ನೀಡಿದೆ. ಸಾಮಾನ್ಯವಾಗಿ ಜೂನ್ ತಿಂಗಳಲ್ಲಿ ಭರ್ಜರಿಯಾಗಿ ಅಬ್ಬರಿಸುತ್ತಿದ್ದ ಮಳೆ ಈ ಬಾರಿ ವಿಳಂಬವಾಗಿದೆ. ಲೇಟ್ ಆಗಿದ್ದರೂ ಮಳೆ ಭರ್ಜರಿಯಾಗಿ ಸುರಿಯುವ ಮುನ್ಸೂಚನೆ ಈಗ ಸಿಕ್ಕಿದೆ.
Monsoon ಮುಂದಿನ 48 ಗಂಟೆಗಳಲ್ಲಿ 9 ರಾಜ್ಯದಲ್ಲಿ ಭಾರಿ ಮಳೆ, IMD ಎಚ್ಚರಿಕೆ!
ಜೂನ್ 19 ರಂದು ಭಾರತೀಯ ಹವಾಮಾನ ಇಲಾಖೆ ಈ ಮುನ್ಸೂಚನೆ ನೀಡಿತ್ತು. ವಿದರ್ಭ, ಆಂಧ್ರಪ್ರದೇಶ, ಬೇ ಆಫ್ ಬೆಂಗಾಲ್, ಮಧ್ಯಪ್ರದೇಶ, ಚತ್ತೀಸಘಡ, ಒಡಿಶಾ, ಜಾರ್ಖಂಡ್, ಬಿಹಾರ ಹಾಗೂ ಉತ್ತರ ಪ್ರದೇಶಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ದೆಹಲಿ, ಹರ್ಯಾಣ, ಚಂಡೀಘಡದಲ್ಲಿ ಜೂನ್ 20 ರಂದು ಭಾರಿ ಮಳೆಯಾಗಲಿದೆ. ಇನ್ನು ಪಂಜಾಬ್ ಇತರ ಭಾಗಗಳಲ್ಲಿ ಜೂನ್ 21ಕ್ಕೆ ಮಳೆ ಅಬ್ಬರ ಆರಂಭಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ