ಕೇಂದ್ರ ಸಂಪುಟ ಸೇರಿದ 43 ಸಚಿವರಿಗೆ ಖಾತೆ ಹಂಚಿಕೆ ಹೊಸದಾಗಿ ರಚಿಸಿದ ಸಹಕಾರ ಸಚಿವಾಲಯ ಅಮಿತ್ ಶಾ ಹೆಗಲಿಗೆ ಕರ್ನಾಟಕದ ನಾಲ್ವರಿಗೆ ಪ್ರಮುಖ ಖಾತೆ
ನವದೆಹಲಿ(ಜು.07): ಕೇಂದ್ರ ಸಚಿವ ಸಂಪುಟ ಪುನಾರಚನೆ, ಪ್ರಮಾಣ ವಚನ ಹಾಗೂ ಖಾತೆ ಹಂಚಿಕೆ ಸೂಪರ್ ಫಾಸ್ಟ್ ರೀತಿಯಲ್ಲಿ ನಡೆದಿದೆ. ಇಂದು ಸಂಜೆ ಮೋದಿ ಸಂಪುಟ ಸೇರಲಿರುವ 43 ನೂತನ ಸಚಿವರ ಪಟ್ಟಿ ಬಿಡುಗಡೆಯಾಗಿತ್ತು. ಇನ್ನು 6 ಗಂಟೆಗೆ ಪ್ರಮಾಣ ವಚನ ಸ್ವೀಕಾರವೂ ನಡೆದಿತ್ತು. ಇದೀಗ ನೂತನ ಸಚಿವರಿಗೆ ಖಾತೆ ಹಂಚಿಕೆಯೂ ನಡೆದಿದೆ. ವಿಶೇಷ ಅಂದರೆ ಹೊಸದಾಗಿ ರಚಿಸಲಾದ ಸಹಕಾರ ಸಚಿವಾಲಯ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೆಗಲಿಗೆ ಬಿದ್ದಿದೆ.
ಕರ್ನಾಟಕದ ನಾಲ್ವರು ಸಚಿವರ ಖಾತೆ(ಮಿನಿಸ್ಟರ್ ಆಫ್ ಸ್ಟೇಟ್) : ರಾಜೀವ್ ಚಂದ್ರಶೇಕರ್: ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ರಾಜ್ಯ ಸಚಿವರು, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ರಾಜ್ಯ ಸಚಿವ
ಶೋಭಾ ಕರಂದ್ಲಾಜೆ: ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ರಾಜ್ಯ ಸಚಿವರು
ಎ ನಾರಾಯಣಸ್ವಾಮಿ: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ರಾಜ್ಯ ಸಚಿವ
ಭಗವಂತ್ ಖೂಬಾ: ನವೀಕರಿಸಬಹುದಾದ ಇಂಧನ ಸಚಿವಾಲಯದಲ್ಲಿ ರಾಜ್ಯ ಸಚಿವ,ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದಲ್ಲಿ ರಾಜ್ಯ ಸಚಿವರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ