Dharchula Bridge ಭಾರತ ನೇಪಾಳ ಸಂಬಂಧ ಮತ್ತಷ್ಟು ಗಟ್ಟಿ, ಮಹಾಕಾಳಿ ನದಿಗೆ ಸೇತುವೆ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ!

By Suvarna NewsFirst Published Jan 6, 2022, 8:46 PM IST
Highlights
  • ಮಹಾಕಾಳಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣಕ್ಕೆ ಭಾರತ ಗ್ರೀನ್ ಸಿಗ್ನಲ್
  • ಭಾರತ ಮತ್ತು ನೇಪಾಳದ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ
  • ಭಾರತ ನೇಪಾಳ  ರಾಜತಾಂತ್ರಿಕ ಸಂಬಂಧ ಮತ್ತಷ್ಟು ಸುಧಾರಣೆ

ನವದೆಹಲಿ(ಜ.06): ಭಾರತ ಹಾಗೂ ನೇಪಾಳ(India Nepal) ನಡುವಿನ ಸಂಬಂಧ ಮತ್ತಷ್ಟು ಗಟ್ಟಿಗೊಳಿಸಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಭಾರತ ಹಾಗೂ ನೇಪಾಳ ಗಡಿಯಲ್ಲಿ ಹರಿಯುವ ಮಹಾಕಾಳಿ(Mahakali River) ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಲು ಕೇಂದ್ರ ಸಚಿವ ಸಂಪುಟ ಸಭೆ ಅನುಮತಿ ನೀಡಿದೆ. UPA ನೇತೃತ್ವದ ಕಾಂಗ್ರೆಸ್(Congres) ಸರ್ಕಾರ ಅಸಡ್ಡೆ ಹಾಗೂ ರಾಜಕೀಯ ಇಚ್ಚಾಶಕ್ತಿ ಕೊರತೆಯಿಂದ ಯೋಜನೆಗಳು ನೆನೆಗುದಿಗೆ ಬಿದ್ದಿತ್ತು. ಸಂಬಂಧ ಹಳಸಿತ್ತು. ಆದರೆ ಇದೀಗ ಮಹಾಕಾಳಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸುವ ಭಾರತ ಮತ್ತು ನೇಪಾಳ ನಡುವಿನ ತಿಳಿವಳಿಕೆ ಒಪ್ಪಂದಕ್ಕೆ ಪ್ರಧಾನಿ ನರೇಂದ್ರ ಮೋದಿ(PM Narendra Modi) ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ(Cabinet) ಅನುಮೋದನೆ  ನೀಡಲಾಗಿದೆ.

ಮಹಾಕಾಳಿ ನದಿಗೆ ಧರ್ಚುಲಾದಲ್ಲಿ(Dharchula Bridge) ಸೇತುವೆ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ.  ಈ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕುವುದರೊಂದಿಗೆ, ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಮತ್ತಷ್ಟು ಸುಧಾರಿಸಲಿದೆ. ಈ ಸೇತುವೆಯಿಂದ ಉತ್ತರಖಂಡದ ದರ್ಚುಲಾ ಜನರು ಹಾಗೂ ನೇಪಾಳದ ಗಡಿ ಜನರಿಗೆ ನೇರವಾದ ಅನುಕೂಲಗಳಾಗಳಿವೆ. ಇದರ ಜೊತೆಗೆ ನೇಪಾಳ ಜೊತೆಗಿನ ವ್ಯಾಪಾರ ವಹಿವಾಟು ಸೇರಿದಂತೆ ಉತ್ತಮ ಸಂಬಂಧಕ್ಕೂ ಭದ್ರ ಬುನಾದಿಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Bipin Rawat Death ಗೌರವಾರ್ಥ ಸೂಚನೆಯಾಗಿ ಅಂತ್ಯಕ್ರಿಯೆಗೆ ಸೇನಾ ಮುಖ್ಯಸ್ಥರ ಕಳುಹಿಸಲಿದೆ ಶ್ರೀಲಂಕಾ, ಭೂತಾನ್, ನೇಪಾಳ!

ಭಾರತ ತನ್ನ ನೆರೆಯ ರಾಷ್ಟ್ರ ನೇಪಾಳ ಜೊತೆ ಉತ್ತಮ ಸಂಬಂಧ ಹೊಂದಿದೆ.  ಭಾರತ ಮತ್ತು ನೇಪಾಳಗಳು ಮುಕ್ತ ಗಡಿ(Border) ಮತ್ತು ಆಳವಾಗಿ ಬೇರೂರಿರುವ ಜನರ ನಡುವಿನ ಸಂಬಂಧ ಮತ್ತು ಸಂಸ್ಕೃತಿಯ ಸಂಪರ್ಕಗಳಿಂದ ನಿರೂಪಿಸಲ್ಪಟ್ಟಿದೆ.  ಸ್ನೇಹ ಮತ್ತು ಸಹಕಾರದ ವಿಶಿಷ್ಟ ಬಾಂಧವ್ಯ ಹಂಚಿಕೊಂಡಿವೆ.  ಭಾರತ ಮತ್ತು ನೇಪಾಳ ಎರಡೂ ವಿವಿಧ ಪ್ರಾದೇಶಿಕ ವೇದಿಕೆಗಳಲ್ಲಿ ಅಂದರೆ  ಸಾರ್ಕ್, ಬಿಮ್ ಸ್ಟೆಕ್ ಮತ್ತು ಜಾಗತಿಕ ವೇದಿಕೆಗಳಲ್ಲಿ ಒಟ್ಟಾಗಿ ಶ್ರಮಿಸುತ್ತಿವೆ.

ಮಹಾಕಾಳಿ ನದಿಗೆ ತಟದಲ್ಲಿನ ಹಲವು ಅಭಿವೃದ್ಧಿ ಯೋಜನೆಗಳ ಒಪ್ಪಂದ ಈ ಹಿಂದೆಯೋ ನಡೆದಿದೆ. ಇದೀಗ ಇದೇ ಒಪ್ಪಂದದ ಅಡಿಯಲ್ಲಿ ಕೇಂದ್ರ ಸರ್ಕಾರ ಮತ್ತೊಂದು ಹೆಜ್ಜೆ ಇಟ್ಟಿದೆ. ಸೇತುವ ನಿರ್ಮಾಣಕ್ಕೂ ಮುಂದಾಗಿದೆ. 1996ರಲ್ಲಿ ಮಹಾಕಾಳಿ ನದಿಯ ಸಮಗ್ರ ಅಭಿವೃದ್ಧಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ನೇಪಾಳ ಪ್ರಧಾನಿ ಹಾಗೂ ಭಾರತದ ಪ್ರಧಾನಿ ಮಾಡಿಕೊಂಡ ಒಪ್ಪಂದ 1997ರಲ್ಲಿ ಜಾರಿಗೆ ಬಂದಿತ್ತು. 

ನೇಪಾಳಕ್ಕೆ ವೆಂಟಿಲೇಟರ್ ಸಹಿತ 39 ಆಂಬುಲೆನ್ಸ್, 6 ಸ್ಕೂಲ್ ಬಸ್ ಗಿಫ್ಟ್ ಮಾಡಿದ ಭಾರತ

ಉತ್ತರ ಪ್ರದೇಶ, ಉತ್ತರಖಂಡ ರಾಜ್ಯದ ಮೂಲಕ ಹರಿಯುವ ಮಹಾಕಾಳಿ  ಭಾರತದಲ್ಲಿ ಶಾರದ ನದಿಯಾಗಿ ಭಾರತೀಯರ ಜೀವನದಿಯಾಗಿದೆ. ಭಾರತ ಹಾಗೂ ನೇಪಾಳ ಗಡಿಯಲ್ಲಿ ಈ ನದಿ ಮಹಾಕಾಳಿಯಾಗಿ ಹರಿಯುತ್ತಿದೆ. ಇದೇ ಮಹಾಕಾಳಿ ನದಿಗೆ ಅಡ್ಡಲಾಗಿ ಭಾರತ ಹಾಗೂ ನೇಪಾಳ ಈಗಾಗಲೇ ಪಂಚೇಶ್ವರ ಅಣೆಕಟ್ಟು ನೀರಾವರಿ ಹಾಗೂ ಜಲ ವಿದ್ಯುತ್ ಉತ್ಪಾದನೆ ಯೋಜನೆಯನ್ನು 1995ರಲ್ಲಿ ಪ್ರಸ್ತಾಪಿಸಲಾಗಿದೆ. 2013ರಲ್ಲಿ ಮತ್ತೆ ಇದೇ ಯೋಜನೆ ಮುನ್ನಲೆಗೆ ಬಂದಿತ್ತು. ಆದರೆ  ಯುಪಿಎ ನೇತೃತ್ವದ ಕಾಂಗ್ರೆಸ್ ಸರ್ಕಾರದ ರಾಜಕೀಯ ಇಚ್ಚಾಶಕ್ತಿ ಕೊರತೆಯಿಂದ ಭಾರತ ನೇಪಾಳ ಯೋಜನೆಗಳು ನೆನೆಗುದಿಗೆ ಬಿದ್ದಿತ್ತು. ಮಾತುಕತೆ ಮೂಲಕ ಯೋಜನೆ ಪರಿಹರಿಸಲು ಕಾಂಗ್ರೆಸ್ ಮುಂದಾಗಲಿಲ್ಲ. ಇತ್ತ ಯುಪಿ ಸರ್ಕಾರ ಯೋಜನೆಯನ್ನು ಭ್ರಷ್ಟಾರವಿಲ್ಲದ ಮಾಡಿ ಮುಗಿಸುವ ಭರವಸೆಯೂ ನೇಪಾಳ ಸರ್ಕಾರಕ್ಕೆ ಇರಲಿಲ್ಲ. ಹೀಗಾಗಿ ನೇಪಾಳ ಕೂಡ ಆಸಕ್ತಿ ತೋರಲಿಲ್ಲ. ಆದರೆ ಇದೀಗ ನರೇಂದ್ರ ಮೋದಿ ಸರ್ಕಾರ ನೇಪಾಳ ಜೊತೆ ಮಾತುಕತೆ ನಡೆಸಿ ಯೋಜನೆ ಜಾರಿಗೊಳಿಸುವಲ್ಲಿ ಯಶಸ್ವಿಯಾಗಿದೆ.  ಈ ಒಡಂಬಡಿಕೆ ಅಡಿಯಲ್ಲಿ ಇದೀಗ ಸೇತುವೆ ನಿರ್ಮಾಣಕ್ಕೆ ಅನುನೋದನೆ ನೀಡಿದೆ. 

click me!