
ನವದೆಹಲಿ(ಏ.17): ನಿತ್ಯವೂ 60000 ಕೇಸುಗಳ ಮೂಲಕ ಆತಂಕ ಹುಟ್ಟುಹಾಕಿರುವ ಮಹಾರಾಷ್ಟ್ರದಲ್ಲಿ ಕೊರೋನಾ 2ನೇ ಅಲೆ ತನ್ನ ಗರಿಷ್ಠ ಮಟ್ಟಮುಟ್ಟಿರಬಹುದು ಎಂದು ತಜ್ಞರು ವಿಶ್ಲೇಷಿಸಿದ್ದಾರೆ. 3 ವಾರದ ಹಿಂದೆ ಮಹಾರಾಷ್ಟ್ರವು ಒಟ್ಟಾರೆ ಸೋಂಕಿನಲ್ಲಿ ಶೇ.60 ಪಾಲು ಹೊಂದಿತ್ತು. ಅದು ಈಗ ಶೇ.30ಕ್ಕೆ ಇಳಿದಿದೆ. ಇಷ್ಟುಕನಿಷ್ಠ ಕಳೆದ 2 ತಿಂಗಳಲ್ಲೇ ಮೊದಲು. ಆದರೆ ಇದೇ 3 ವಾರದ ಅವಧಿಯಲ್ಲಿ ದೇಶದಲ್ಲಿನ ದೈನಂದಿನ ಸೋಂಕು ಈ ಅವಧಿಯಲ್ಲಿ 52 ಸಾವಿರದಿಂದ 2.17 ಲಕ್ಷಕ್ಕೆ ಏರಿದೆ. ಅಂದರೆ 4 ಪಟ್ಟು ಹೆಚ್ಚಿದೆ.
ಮತ್ತೊಂದು ವಿಚಾರವೆಂದರೆ ಈ 3 ವಾರದ ಅವಧಿಯಲ್ಲಿ ಮಹಾರಾಷ್ಟ್ರದ ಕೇಸು 30 ಸಾವಿರದಿಂದ 60 ಸಾವಿರಕ್ಕೆ ಹೆಚ್ಚಿದೆ. ಅಂದರೆ 2 ಪಟ್ಟು ಮಾತ್ರ. ಜೊತೆಗೆ ಕಳೆದ 10 ದಿನಗಳಿಂದ ಒಟ್ಟಾರೆ ಪ್ರಕರಣಗಳ ಸಂಖ್ಯೆ 60000ದ ಆಸುಪಾಸಿನಲ್ಲೇ ಇದ್ದು, ಸ್ಥಿರವಾಗಿರುವ ಲಕ್ಷಣ ಕಂಡುಬರುತ್ತಿದೆ. ಇದೆಲ್ಲಾ ಸೋಂಕು ಗರಿಷ್ಠ ಮಟ್ಟಮುಟ್ಟಿರಬಹುದಾದ ಲಕ್ಷಣಗಳು ಎಂದು ಐಐಟಿ-ಕಾನ್ಪುರ ಪ್ರಾಧ್ಯಾಪಕ ಮಣಿಂದರ್ ಅಗರ್‌ವಾಲ್ ಹೇಳಿದ್ದಾರೆ. ದೆಹಲಿ ಮತ್ತು ಛತ್ತೀಸ್‌ಗಢದಲ್ಲಿ ಮುಂದಿನ 7-10 ದಿನಗಳಲ್ಲಿ ಸೋಂಕು ಇಳಿ ಮುಖವಾಗಲಿದೆ. ಜೊತೆಗೆ ಈಗಿನ ಲೆಕ್ಕಾಚಾರದ ಅನ್ವಯ ಏ.25ರ ಹೊತ್ತಿಗೆ ದೇಶದಲ್ಲಿ ಸೋಂಕು ತಾರಕಕ್ಕೇರಿ ನಂತರ ಇಳಿಕೆ ಆಗಬುಹುದು ಎಂದು ಅಗರ್‌ವಾಲ್ ವಿಶ್ಲೇಷಿಸಿದ್ದಾರೆ.
ಐಐಟಿ-ಕಾನ್ಪುರದ ತಜ್ಞರು ಕಂಪ್ಯೂಟರ್ ಮಾಡೆಲ್ ಬಳಸಿ ಅಕ್ಟೋಬರ್‌ನಿಂದ ಫೆಬ್ರವರಿವರೆಗಿನ ಸೋಂಕು ಅಂದಾಜಿಸಿದ್ದರು. ಅದು ಬಹುತೇಕ ನಿಜವಾಗಿತ್ತು. ಏಪ್ರಿಲ್ ವೇಳೆ 2ನೇ ಅಲೆ ಏಳಬಹುದು ಎಂದು ಅವರು ಅಂದಾಜಿಸಿದ್ದರೂ ಇಷ್ಟೊಂದು ಪ್ರಮಾಣದಲ್ಲಿ ಏರಿಕೆ ಆಗಲಿದೆ ಎಂದು ಅಂದುಕೊಂಡಿರಲಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ