2100ರ ಸುಮಾರಿಗೆ ಭಾರತದ ಜನಸಾಂದ್ರತೆ ಚ.ಕಿ.ಮೀ.ಗೆ 335ಕ್ಕೆ ಇಳಿಯಲಿದೆ. ಕುಸಿತವು ಊಹೆಗಿಂತ ಅಧಿಕ
ನವದೆಹಲಿ(ಜು.24): ಪ್ರಸ್ತುತ ವಿಶ್ವದ 2ನೇ ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶವಾಗಿರುವ ಭಾರತದ ಜನಸಂಖ್ಯೆ ಮುಂದಿನ 78 ವರ್ಷಗಳಲ್ಲಿ, ಈಗಿನ 41 ಕೋಟಿಯಷ್ಟುಕುಸಿತ ಕಾಣಲಿದೆ ಎಂದು ಸ್ಟ್ಯಾನ್‌ಫೋರ್ಡ್‌ನ ಅಧ್ಯಯನ ವರದಿ ತಿಳಿಸಿದೆ. ಅಂದರೆ 2022ರಲ್ಲಿ ಇರುವ 141.2 ಕೋಟಿ ಜನಸಂಖ್ಯೆ, 2100ರಲ್ಲಿ 100.3 ಕೋಟಿಗೆ ಇಳಿಯಲಿದೆ. ಈಗ ಭಾರತದಲ್ಲಿ ಒಂದು ಚದರ ಕಿ.ಮೀ. ವಿಸ್ತೀರ್ಣದಲ್ಲಿ 476 ಜನರು ವಾಸಿಸುತ್ತಿದ್ದಾರೆ. ಅದೇ ಚೀನಾದಲ್ಲಿ ಈ ಪ್ರಮಾಣ 148ರಷ್ಟಿದೆ. 2100ರ ಸುಮಾರಿಗೆ ಭಾರತದ ಜನಸಾಂದ್ರತೆ ಚ.ಕಿ.ಮೀ.ಗೆ 335ಕ್ಕೆ ಇಳಿಯಲಿದೆ. ಕುಸಿತವು ಊಹೆಗಿಂತ ಅಧಿಕವಾಗಲಿದೆ ಎಂದಿದೆ.
ಭಾರತ ಮಾತ್ರವಲ್ಲ ಚೀನಾ, ಅಮೆರಿಕ ಮತ್ತು ಇತರ ದೇಶಗಳಲ್ಲೂ ಸಹ ಇದೇ ಸ್ಥಿತಿ ಮುಂದುವರೆಯಲಿದೆ. ಚೀನಾದಲ್ಲಿ ಜನಂಖ್ಯೆ 93 ಕೋಟಿಯಷ್ಟುಕುಸಿದು 49 ಕೋಟಿಗೆ ಇಳಿಯಬಹುದು ಎಂದೂ ವರದಿ ತಿಳಿಸಿದೆ.
ಮುಂದಿನ ವರ್ಷ ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಲಿದೆ ಭಾರತ, ವಿಶ್ವಸಂಸ್ಥೆ ವರದಿ ಬಹಿರಂಗ
ಕುಸಿತ ಏಕೆ?:
ಫಲವತ್ತತೆ (ಸಂತಾನೋತ್ಪತ್ತಿ) ದರದಲ್ಲಿನ ಕುಸಿತದಿಂದಾಗಿ ದೇಶದಲ್ಲಿ ಜನಸಂಖ್ಯೆಯ ಪ್ರಮಾಣ ಕುಸಿತ ಕಾಣಲಿದೆ. ಭಾರತದಲ್ಲಿ ಮಹಿಳೆಯರು ಜನ್ಮ ನೀಡುವ ಶಿಶುವಿನ ಪ್ರಮಾಣ (ಒಬ್ಬ ಮಹಿಳೆಗೆ) ಪ್ರಸ್ತುತ 1.76ರಷ್ಟಿದೆ. ಇದು 2032ರಲ್ಲಿ 1.39ಗೆ, 2052ರಲ್ಲಿ 1.28ಗೆ, 2082ರಲ್ಲಿ 1.2ಗೆ ಮತ್ತು 2100ರಲ್ಲಿ 1.19ಗೆ ಇಳಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಹಾಗಾಗಿ 2100ರ ವೇಳೆಗೆ ಭಾರತದಲ್ಲಿ ಜನಸಂಖ್ಯೆಯ ಪ್ರಮಾಣ ಕುಸಿತವಾಗಲಿದೆ ಎಂದು ಅಧ್ಯಯನ ವರದಿ ತಿಳಿಸಿದೆ.
ಇಸವಿ ಜನಸಂಖ್ಯೆ
2022 141 ಕೋಟಿ
2100 100 ಕೋಟಿ