ಮೋದಿ ಮಂಗಳೂರು ಸಮಾವೇಶಕ್ಕೆ ಎಂಟ್ರಿ ಕೊಡಲು ಉದ್ಯಮಿ ಬಿ ಆರ್‌ ಶೆಟ್ಟಿ ಹರಸಾಹಸ

By Manjunath NayakFirst Published Sep 2, 2022, 8:51 PM IST
Highlights

PM Modi Karnataka Visit: ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಎಂಟ್ರಿಯಾಗಲು ಉದ್ಯಮಿ ಬಿ ಆರ್ ಶೆಟ್ಟಿ ಹರಸಾಹಸ ಪಡುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ

ಮಂಗಳೂರು (ಸೆ. 02): ‌ ಸರ್ಕಾರದ ಅಧಿಕೃತ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು (ಸೆ. 02) ಮಂಗಳೂರಿಗೆ ಆಗಮಿಸಿದ್ದರು. ಮಂಗಳೂರಿನ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ರಾಜ್ಯಪಾಲ ಠಾವರ್‌ ಚಂದ್‌ ಗೆಹ್ಲೋಟ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್‌ ಜೋಶಿ ಸೇರಿದಂತೆ ಜಿಲ್ಲೆಯ ಶಾಸಕರು, ಪರಿಷತ್‌ ಸದಸ್ಯರು ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಆದರೆ ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಪ್ರವೇಶ ಪಡೆಯಲು ಉದ್ಯಮಿ ಬಿ ಆರ್ ಶೆಟ್ಟಿ (B R Shetty) ಮಾತ್ರ ಹರಸಾಹಸ ಪಡಬೇಕಾಯಿತು. 

ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಎಂಟ್ರಿಯಾಗಲು ಉದ್ಯಮಿ ಬಿ ಆರ್ ಶೆಟ್ಟಿ ಹರಸಾಹಸ ಪಡುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್‌ ಆಗಿದೆ. ಕಾರ್ಯಕ್ರಮದ ಕೆಲವೇ ನಿಮಿಷ ಮೊದಲು ವಿಐಪಿ ಗ್ಯಾಲರಿ ಎಂಟ್ರಿಯಾಗಲು ಬಿ‌ ಆರ್ ಶೆಟ್ಟಿ ಬಂದಿದ್ದರು. ಆದರೆ  ಪಾಸ್ ಇಲ್ಲದ ಕಾರಣ ಪೊಲೀಸರು ಬಿ ಆರ್‌ ಶೆಟ್ಟಿ ಅವರಿಗೆ ಒಳಗೆ ಹೋಗಲು ಅವಕಾಶ ನೀಡಿಲ್ಲ. 

ಈ ವೇಳೆ ಸ್ಥಳದಲ್ಲಿದ್ದ ಕೆಲವರು ಪೊಲೀಸರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.  'ನಮ್ಮನ್ನ ಬಿಡದಿದ್ದರೂ ಪರವಾಗಿಲ್ಲ, ಅವರನ್ನು ಒಳಗೆ ಬಿಡಿ, ಪ್ರಧಾನಿ ಮೋದಿಯನ್ನ ದುಬೈ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದ ಬಿ.ಆರ್.ಶೆಟ್ಟಿಗೆ ಒಳಗೆ ಬಿಡದಿದ್ರೆ ಹೇಗೆ? ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಪಂಚೆ, ಶರ್ಟ್ ಧರಿಸಿ ಕೇರಳಕ್ಕೆ ಆಗಮಿಸಿದ ಪ್ರಧಾನಿ ಮೋದಿ ವಸ್ತ್ರಕ್ಕೆ ಮಾರು ಹೋದ ಜನ!

ಕೊನೆಗೂ ಬಿ.ಆರ್.ಶೆಟ್ಟಿ ಎಂಟ್ರಿಗೆ ಪೊಲೀಸರು ಅವಕಾಶ ಕೊಟ್ಟಿದ್ದಾರೆ.  ಸದ್ಯ ಆರ್ಥಿಕ ಕುಸಿತಕ್ಕೆ ಒಳಗಾಗಿ ಸಾಲದ ಹೊರೆಯಲ್ಲಿರುವ ಬಿ.ಆರ್.ಶೆಟ್ಟಿ ವರ್ಷಗಳ ಹಿಂದೆ ಪ್ರಧಾನಿ ಮೋದಿ ದುಬೈ ಕಾರ್ಯಕ್ರಮ ಆಯೋಜಿಸಿದ್ದರು. 

ಮಂಗಳೂರಲ್ಲಿ ಬೃಹತ್‌ ಕಾರ್ಯಕ್ರಮ: ನವಮಂಗಳೂರು ಬಂದರು ಪ್ರಾಧಿಕಾರ (ಎನ್‌ಎಂಪಿಎ) ಮತ್ತು ಎಂಆರ್‌ಪಿಎಲ್‌ನ ಸುಮಾರು 3,800 ಕೋಟಿ ರೂ. ಗಳ 8 ವಿವಿಧ ಅಭಿವೃದ್ಧಿ ಯೋಜನೆಗಳ ಲೋಕಾರ್ಪಣೆ ಮತ್ತು ಶಿಲಾನ್ಯಾಸವನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ನೆರವೇರಿಸಿದ್ದಾರೆ.  ಇನ್ನು ಸಮಾವೇಶದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಸುಮಾರು ಒಂದು ಲಕ್ಷ ಮಂದಿ ಫಲಾನುಭವಿಗಳು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗಿಯಾಗಿದ್ದರು. 

click me!