Attack On Owaisi : ಓವೈಸಿ ದೀರ್ಘ ಆಯಸ್ಸಿಗಾಗಿ 101 ಮೇಕೆಗಳ ಬಲಿಕೊಟ್ಟ ಉದ್ಯಮಿ!

By Suvarna NewsFirst Published Feb 6, 2022, 11:59 PM IST
Highlights

ಅಸಾದುದ್ದೀನ್ ಓವೈಸಿ ಮೇಲೆ ಗುಂಡಿನ ದಾಳಿ
ಓವೈಸಿ ದೀರ್ಘ ಆಯಸ್ಸು ಭದ್ರತೆಗಾಗಿ ಹೈದರಾಬಾದ್ ಉದ್ಯಮಿಯ ಸೇವೆ
101 ಮೇಕೆಗಳನ್ನು ಬಲಿಕೊಟ್ಟ ಹೈದರಾಬಾದ್ ಉದ್ಯಮಿ

ಹೈದರಾಬಾದ್ (ಫೆ. 6): ಲೋಕಸಭಾ ಸದಸ್ಯ ಅಸಾದುದ್ದೀನ್ ಓವೈಸಿ (Asaduddin Owaisi) ಅವರ ಸುರಕ್ಷತೆ ಮತ್ತು ದೀರ್ಘಾಯುಷ್ಯಕ್ಕಾಗಿ ಹಾರೈಸಿ ಭಾನುವಾರ ಹೈದರಾಬಾದ್‌ನ (Hyderabad ) ಬಾಗ್-ಎ-ಜಹನಾರಾದಲ್ಲಿ (Bagh-e-Jahanara) 101 ಮೇಕೆಗಳನ್ನು ಬಲಿ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಮಲಕಪೇಟೆ ಶಾಸಕ ಹಾಗೂ ಎಐಎಂಐಎಂ ಮುಖಂಡ ಅಹ್ಮದ್ ಬಲಾಲ (Malakpet MLA and AIMIM leader Ahmed Balala) ಉಪಸ್ಥಿತರಿದ್ದರು. ಉತ್ತರಪ್ರದೇಶದಲ್ಲಿ ಚುನಾವಣಾ ಪ್ರಚಾರದಲ್ಲಿ ವ್ಯಸ್ತರಾಗಿರುವ ಅಸಾದುದ್ದೀನ್ ಓವೈಸಿ, ಇತ್ತೀಚೆಗೆ ಉತ್ತರಪ್ರದೇಶದ ಮೀರತ್ ನಿಂದ ದೆಹಲಿಗೆ ತೆರಳುವ ವೇಳೆ ಟೋಲ್ ಪ್ಲಾಜಾ ಬಳಿ ಅವರ ಕಾರಿನ ಮೇಲೆ ಗುಂಡಿನ ದಾಳಿ ನಡೆದಿತ್ತು. 3-4 ಸುತ್ತು ಗುಂಡಿನ ದಾಳಿ ನಡೆದರೂ, ಓವೈಸಿ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದರು.

ಫೆಬ್ರವರಿ 3 ರಂದು ನಡೆದ ದಾಳಿಯ ನಂತರ, ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (All India Majlis-E-Ittehadul Muslimeen ) ಮುಖ್ಯಸ್ಥ ಓವೈಸಿಯ ಬೆಂಬಲಿಗರು ಅವರ ಸುರಕ್ಷತೆ ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ದಾಳಿಯ ನಂತರ ಕೇಂದ್ರ ಗೃಹ ಸಚಿವಾಲಯವು ಅಸಾದುದ್ದೀನ್ ಓವೈಸಿಗೆ Z- ವರ್ಗದ ಭದ್ರತೆಯನ್ನು ಅನುಮೋದಿಸಿತು. ಆದರೆ, ಅವರು ಅದನ್ನು ತಿರಸ್ಕರಿಸಿದ್ದಾರೆ.

ಬಾಗ್‌ಪತ್‌ನ ಛಪ್ರೌಲಿಯಲ್ಲಿ (Baghpat's Chhaprauli) ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಓವೈಸಿ, "ನನ್ನ ಕಾರಿನ ಮೇಲೆ ದಾಳಿ ಮಾಡಲಾಯಿತು, ನಾಲ್ಕು ಗುಂಡು ಹಾರಿಸಲಾಯಿತು, ಗುಂಡು ಹಾರಿಸಿದವರು (ವಾಹನದ ಮೇಲೆ) ಯಾರೆಂದರೆ, ಗಾಂಧೀಜಿಯನ್ನು ಗುಂಡು ಹಾಕಿ ಕೊಂದವರು. ನಾನು ಜನರ ಹಕ್ಕುಗಳ ಬಗ್ಗೆ ಮಾತನಾಡುತ್ತೇನೆ, ಹಾಗಾಗಿ ನನ್ನ ಮೇಲೆ ಬುಲೆಟ್ ಹಾರಿಸಲಾಗಿದೆ.ನಾನು ಮುಸಲ್ಮಾನರ ಕುರಿತು ಮಾತನಾಡುತ್ತೇನೆ, ಆದ್ದರಿಂದ ಗುಂಡು ಹಾರಿಸಲಾಗಿದೆ, ನಾನು ಸಂವಿಧಾನದ ವ್ಯಾಪ್ತಿಯಲ್ಲಿ ಮಾತನಾಡಿದಾಗ, ದುಷ್ಕರ್ಮಿಗಳು ಅದನ್ನು ಸಹಿಸುವುದಿಲ್ಲ, ಅವರ ಗುಂಡುಗಳು ನನ್ನ ಧ್ವನಿಯನ್ನು ಮೌನಗೊಳಿಸುತ್ತವೆ ಎಂದು ಈ ಮೂರ್ಖರು ಭಾವಿಸುತ್ತಾರೆ, ಒಬ್ಬ ಓವೈಸಿ ಸತ್ತರೆ , ಲಕ್ಷಗಟ್ಟಲೆ ಓವೈಸಿಯನ್ನು ಹುಟ್ಟತ್ತಾರೆ ಎನ್ನುವುದನ್ನು ನಾನೀಗಲೇ ಬರೆದುಕೊಡುತ್ತೇನೆ' ಎಂದು ಓವೈಸಿ ಹೇಳಿದ್ದರು.

ಝಡ್ ಕೆಟಗರಿ ಭದ್ರತೆ ಒದಗಿಸುವ ಕೇಂದ್ರದ ನಿರ್ಧಾರವನ್ನು ಉಲ್ಲೇಖಿಸಿದ ಅವರು, ತಾವು ಝಡ್ ಭದ್ರತೆಯನ್ನು ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದರು, ಬಡವರಿಗೆ ರಕ್ಷಣೆ ದೊರೆತರೆ ಅದೇ ನನ್ನ ಭದ್ರತೆ ಎಂದು ಹೇಳಿದರು. "ನನಗೆ ಭದ್ರತೆ ಬೇಡ, ನನಗೆ ಪಾಲು ಬೇಕು. ಭಾರತದ ಮುಸ್ಲಿಮರು ಮತ್ತು ಬಡವರನ್ನು ಎ ವರ್ಗದ ನಾಗರಿಕರನ್ನಾಗಿ ಮಾಡಿ" ಎಂದು ಅವರು ಹೇಳಿದರು.

Attack On Owaisi: ಅಸಾದುದ್ದೀನ್ ಓವೈಸಿ ಕಾರಿನ ಮೇಲೆ ಗುಂಡಿನ ದಾಳಿ!
ಪೌರತ್ವ ತಿದ್ದುಪಡಿ ಮಸೂದೆ ಬಗ್ಗೆ ಮೌನ ವಹಿಸಿದ್ದಕ್ಕಾಗಿ ಓವೈಸಿ ಸಮಾಜವಾದಿ ಪಕ್ಷ (ಎಸ್‌ಪಿ), ಬಹುಜನ ಸಮಾಜ ಪಕ್ಷ ಮತ್ತು ರಾಷ್ಟ್ರೀಯ ಲೋಕದಳವನ್ನೂ ಟೀಕೆ ಮಾಡಿದರು. ಎಸ್‌ಪಿ ಮುಖ್ಯಸ್ಥ ಅಖಿಲೇಶ್‌ ಯಾದವ್‌ ವಿರುದ್ಧ ವಾಗ್ದಾಳಿ ನಡೆಸಿದ ಅವರು, "ಎಲ್ಲೂ ಟಿಕೆಟ್‌ ಸಿಗದ ಅಲ್ಪಸಂಖ್ಯಾತ ನಾಯಕರಿಗೆ ಅಖಿಲೇಶ್‌ ಎಂಎಲ್‌ಸಿ ಮತ್ತು ರಾಜ್ಯಸಭೆಯ ಲಾಲಿಪಾಪ್‌ ತೋರಿಸುತ್ತಿದ್ದಾರೆ, ಅಖಿಲೇಶ್ ಯಾದವ್ ದ್ರೋಹ ಮಾಡುತ್ತಾರೆ ಎಂದು ನಾನು ಆ ನಾಯಕರಿಗೆ ಎಚ್ಚರಿಕೆ ನೀಡುತ್ತಿದ್ದೇನೆ" ಎಂದರು.

ಬುಲೆಟ್‌ಗೆ ಬ್ಯಾಲೆಟ್‌ ಮೂಲಕ ಉತ್ತರ, ಒವೈಸಿಯಿಂದ Z Category ಭದ್ರತೆ ತಿರಸ್ಕಾರ!
ಗುರುವಾರ ಚುನಾವಣಾ ಪ್ರಚಾರ ಮುಗಿಸಿ ಮೀರತ್‌ನ ಕಿತೌಧ್ ಪ್ರದೇಶದಿಂದ ದೆಹಲಿಗೆ ತೆರಳುತ್ತಿದ್ದ ಅಸಾದುದ್ದೀನ್ ಓವೈಸಿ ಅವರ ಬೆಂಗಾವಲು ವಾಹನದ ಮೇಲೆ ಗುಂಡು ಹಾರಿಸಿದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ. ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಚುನಾವಣಾ ಪ್ರಚಾರಕ್ಕಾಗಿ ಉತ್ತರ ಪ್ರದೇಶದ ಮೀರತ್ ಪ್ರವಾಸದಲ್ಲಿದ್ದರು. ದಾಳಿಯ ನಂತರ, ಕೇಂದ್ರ ಸರ್ಕಾರವು ಎಐಎಂಐಎಂ ಮುಖ್ಯಸ್ಥರ ಭದ್ರತೆಯನ್ನು ಪರಿಶೀಲಿಸಿತು ಮತ್ತು ತಕ್ಷಣವೇ ಜಾರಿಗೆ ಬರುವಂತೆ ಅವರಿಗೆ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ನ ಝಡ್ ಭದ್ರತೆಯನ್ನು ಒದಗಿಸಿತ್ತು. ಆದರೆ, ಅದನ್ನು ಪಡೆಯಲು ಓವೈಸಿ ನಿರಾಕರಿಸಿದ್ದರು. ಉತ್ತರ ಪ್ರದೇಶದ 403 ಅಸೆಂಬ್ಲಿ ಸ್ಥಾನಗಳಿಗೆ ಫೆಬ್ರವರಿ 10 ರಿಂದ ಮಾರ್ಚ್ 7 ರವರೆಗೆ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮತಗಳ ಎಣಿಕೆ ಮಾರ್ಚ್ 10 ರಂದು ನಡೆಯಲಿದೆ.

click me!