
ಮುಂಬೈ: ಮೂಗಿಗಿಂತ ಮೂಗುತಿ ಭಾರ ಅನ್ನೋ ಗಾದೆ ಇದೆ. ಅದನ್ನು ಆಂಧ್ರಪ್ರದೇಶದ ವ್ಯಕ್ತಿಯೊಬ್ಬರು ಸಾಬೀತುಪಡಿಸಿದ್ದಾರೆ. ಇತ್ತೀಚೆಗೆ ತಾವು ಖರೀದಿಸಿದ್ದ 7 ಲಕ್ಷ ರು.ಮೌಲ್ಯದ ಹೊಸ ಮಾರುತಿ ಇಗ್ನಿಸ್ ಕಾರಿಗೆ ಭರ್ಜರಿ 2.08 ಕೋಟಿ ರು. ಕೊಟ್ಟು ಹೊಸ ನಂಬರ್ ಖರೀದಿ ಮಾಡಿದ್ದಾರೆ. ಇದು ದೇಶದಲ್ಲೇ ಅತ್ಯಂತ ದುಬಾರಿ ಮೊತ್ತದ ವಾಹನ ನೋಂದಣಿ ಸಂಖ್ಯೆ ಎಂಬ ದಾಖಲೆಗೆ ಪಾತ್ರವಾಗಿದೆ.
ಬಿಗ್‌ಬಾಯ್ಸ್ ಟಾಯ್ ಎಂಬ ಕಂಪನಿ ಮಾಲೀಕ ಜತಿನ್ ಅಹುಜಾ ಎಂಬುವವರ ಬಳಿ ಇದುವರೆಗೂ ‘ಡಿಡಿಸಿ 001’ ಎಂಬ ನಂಬರ್ ಇತ್ತು. ಅವರು ತಮ್ಮ ಕಾರಿಗೆ ಆ ನಂಬರ್ ನೋಂದಣಿ ಮಾಡಿಸಿದ್ದರು. ಇತ್ತೀಚೆಗೆ ಆ ನಂಬರ್ ಅನ್ನು ಅವರು ಹರಾಜು ಹಾಕಿದ್ದು, ಈ ವೇಳೆ ಆಂಧ್ರಪ್ರದೇಶದ ಕಿರಣ್ ಕೊಲ್ಪಕುಲ ಎಂಬ ಉದ್ಯಮಿ 2.08 ಕೋಟಿ ರು. ಹರಾಜು ಕೂಗಿ ಖರೀದಿಸಿದ್ದಾರೆ.
ಇಲ್ಲಿವರೆಗೆ ದೇಶದ ಅತಿ ದುಬಾರಿ ನಂಬರ್ ಪ್ಲೇಟ್ ಖ್ಯಾತಿಯು ‘ಎಚ್‌ಆರ್88ಬಿ8888’ಗೆ ಸೇರಿತ್ತು. ಕಳೆದ ವರ್ಷ ನವೆಂಬರ್‌ನಲ್ಲಿ 1.17 ಕೋಟಿ ರು.ಗೆ ನಂಬರ್ ಪ್ಲೇಟ್ ಹರಾಜಾಗಿತ್ತು. ಆ ದಾಖಲೆಯನ್ನು ಇದೀಗ ‘ಡಿಡಿಸಿ 001’ ಮುರಿದಿದೆ.
ಯಾವುದೇ ಮಾಲೀಕರು ತಮ್ಮ ವಾಹನಕ್ಕೆ ಮಾಡಿಸಿದ ನಂಬರ್ ಅನ್ನು ಕಾನೂನು ಬದ್ಧವಾಗಿ ಮಾರಾಟ ಮಾಡಬಹುದು. ಆದರೆ ಇದಕ್ಕೆ ನಿಯಮಗಳಿಗೆ. ಅದೇ ರೀತಿ ಮೇಲ್ಕಂಡ ಪ್ರಕರಣದಲ್ಲೂ ನಂಬರ್ ಹರಾಜು ಹಾಕಲಾಗಿದೆ.
ಇದು ಕೂಡಾ ಬಿಸಿನೆಸ್:
ಕೆಲವರು ಫ್ಯಾಷನ್‌ಗಾಗಿ, ಇನ್ನು ಕೆಲವರು ಸಂಖ್ಯಾಶಾಸ್ತ್ರ ಕಾರಣ ಕೆಲವು ವಿಶೇಷ ಸಂಖ್ಯೆ ಇರುವ ನಂಬರ್ ಖರೀದಿಗೆ ಒಲವು ಹೊಂದಿರುತ್ತಾರೆ. ಹೀಗಾಗಿ ಇತ್ತೀಚಿನ ವರ್ಷಗಳಲ್ಲಿ ವಾಹನ ಸಂಖ್ಯೆ ಖರೀದಿ, ಮಾರಾಟ, ಸಂಗ್ರಹ ಕೂಡಾ ಒಂದು ಬಿಸಿನೆಸ್ ಆಗಿ ಹೊರಹೊಮ್ಮಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ