Accident Case: 22 ಸಾವಿಗೆ ಕಾರಣವಾದ ಬಸ್‌ ಚಾಲಕನಿಗೆ 190 ವರ್ಷ ಜೈಲು!

By Kannadaprabha NewsFirst Published Jan 3, 2022, 8:20 AM IST
Highlights

ಅತಿ ವೇಗದ ಬಸ್‌ ಚಾಲನೆಯಿಂದ 22 ಜನರ ಸಾವಿಗೆ ಕಾರಣವಾಗಿದ್ದ ಚಾಲಕ ಶಂಸುದ್ದೀನ್‌ ಎಂಬಾತನಿಗೆ ಮಧ್ಯಪ್ರದೇಶದ ಸ್ಥಳೀಯ ವಿಶೇಷ ನ್ಯಾಯಾಲಯವೊಂದು, ಒಂದಲ್ಲ ಎರಡಲ್ಲ 190 ವರ್ಷಗಳ ಜೈಲು ಶಿಕ್ಷೆ. ಅಂದರೆ 19 ಪ್ರತ್ಯೇಕ ಪ್ರಕರಣಗಳಲ್ಲಿ ತಲಾ 10 ವರ್ಷದಂತೆ ಈ ಸಜೆ ವಿಧಿಸಿ ಆದೇಶಿಸಿದೆ.

ಭೋಪಾಲ್‌ (ಜ.03): ಅತಿ ವೇಗದ ಬಸ್‌ ಚಾಲನೆಯಿಂದ 22 ಜನರ ಸಾವಿಗೆ ಕಾರಣವಾಗಿದ್ದ ಚಾಲಕ ಶಂಸುದ್ದೀನ್‌ (Shamshuddin) ಎಂಬಾತನಿಗೆ ಮಧ್ಯಪ್ರದೇಶದ ಸ್ಥಳೀಯ ವಿಶೇಷ ನ್ಯಾಯಾಲಯವೊಂದು, ಒಂದಲ್ಲ ಎರಡಲ್ಲ 190 ವರ್ಷಗಳ ಜೈಲು ಶಿಕ್ಷೆ. ಅಂದರೆ 19 ಪ್ರತ್ಯೇಕ ಪ್ರಕರಣಗಳಲ್ಲಿ ತಲಾ 10 ವರ್ಷದಂತೆ ಈ ಸಜೆ ವಿಧಿಸಿ ಆದೇಶಿಸಿದೆ.

ಗಮನಾರ್ಹ ವಿಚಾರವೆಂದರೆ ಎಲ್ಲ ಶಿಕ್ಷೆಗಳನ್ನೂ ಪ್ರತ್ಯೇಕವಾಗಿ ಅನುಭವಿಸಬೇಕು ಎಂದು ಕೋರ್ಟ್‌ ಆದೇಶಿಸಿರುವ ಕಾರಣ, ಚಾಲಕ ಶಂಸುದ್ದೀನ್‌ ತಲಾ 10 ವರ್ಷದ 19 ಶಿಕ್ಷೆಗಳನ್ನು 190 ವರ್ಷ ಕಾಲ ಅನುಭವಿಸಬೇಕಾಗುತ್ತದೆ. ಹೀಗಾಗಿ ಒಂದರ್ಥದಲ್ಲಿ ಇದನ್ನು ‘ಸಾಯುವವರೆಗೂ ಜೈಲುಸಜೆ’ ಎನ್ನಬಹುದಾಗಿದೆ. ಅಪಘಾತ ಪ್ರಕರಣಗಳಲ್ಲಿ ಬಹುಶಃ ಇಂಥ ಶಿಕ್ಷೆ ಇದೇ ಮೊದಲು ಎಂದು ಹೇಳಬಹುದಾಗಿದೆ, ಇದೇ ವೇಳೆ, ಬಸ್‌ ಮಾಲಿಕನಿಗೂ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ.

Terror Funding: ಮಂಗಳೂರು ದಂಪತಿಗೆ 10 ವರ್ಷ ಜೈಲು!

ಏನಿದು ಪ್ರಕರಣ?: ಮೇ.4, 2015ರಂದು ಖಾಸಗಿ ಬಸ್‌ ಚಾಲಕ ಶಂಸುದ್ದೀನ್‌ (47) ಅತಿ ವೇಗವಾಗಿ ಬಸ್‌ ಚಾಲನೆ ಮಾಡಿದ ಪರಿಣಾಮ, ನಾಲೆಗೆ ಬಸ್‌ ಬಿದ್ದು ಬೆಂಕಿ ಹೊತ್ತಿಕೊಂಡಿತ್ತು. ಬಸ್‌ನಲ್ಲಿದ್ದ 65 ಜನರಲ್ಲಿ 22 ಜನರು ಸ್ಥಳದಲ್ಲೇ ಸಾವನ್ನಪ್ಪಿದರೆ, ಅನೇಕರು ಗಾಯಗೊಂಡಿದ್ದರು. ಈ ಬಸ್‌ನಲ್ಲಿದ್ದ ತುರ್ತು ನಿರ್ಗಮನ ದ್ವಾರವನ್ನು ಸಹಾ ಕಬ್ಬಿಣದ ರಾಡ್‌ಗಳಿಂದ ಬಂದ್‌ ಮಾಡಿ ಹೆಚ್ಚುವರಿ ಸೀಟ್‌ ಅಳವಡಿಸಲಾಗಿತ್ತು. ಇದರಿಂದಾಗಿ ಜನರಿಗೆ ಬಸ್ಸಿನಿಂದ ಹೊರ ಬರುವುದು ಕಷ್ಟವಾಗಿತ್ತು.

ಇದಕ್ಕೆ ಬಸ್‌ ಚಾಲಕ ಅತಿ ವೇಗವಾಗಿ ಬಸ್‌ ಚಾಲನೆ ಮಾಡಿದ್ದೆ ಕಾರಣ. ಬಸ್ಸಿನಲ್ಲಿ ಕೂಡ ಸಾಕಷ್ಟುಸುರಕ್ಷತಾ ಲೋಪಗಳಿವೆ ಎಂದು ಆರೋಪಿಸಿ ಪೊಲೀಸರು, ನಿರ್ಲಕ್ಷ್ಯದ ಚಾಲನೆ, ಉದ್ದೇಶಪೂರ್ವಕವಲ್ಲದ ಕೊಲೆ, ಅತಿವೇಗದ ಚಾಲನೆಯಿಂದ ಸಾವು- ಎಂಬ ಪರಿಚ್ಛೇದಗಳಡಿ ಪ್ರಕರಣ ದಾಖಲಿಸಿದ್ದರು.

24 ವರ್ಷ ಹಿಂದಿನ ಪ್ರಕರಣ, ಸಾಕ್ಷ್ಯ ತಿರುಚಿದ ಉದ್ಯಮಿಗಳಿಗೆ 7 ವರ್ಷ ಜೈಲು!: ಉಪಹಾರ ಅಗ್ನಿ ಅವಘಡ ಪ್ರಕರಣ ಕುರಿತು ದೆಹಲಿಯ ಪಟಿಯಾಲ ಕೋರ್ಟ್ ತೀರ್ಪು ನೀಡಿದೆ. ಸಾಕ್ಷ್ಯ ತಿರುಚಿದ ಕಾರಣಕ್ಕೆ ಉದ್ಯಮಿಗಳಾದ ಸುಶೀಲ್ ಅನ್ಸಾಲ್ ಹಾಗೂ ಗೋಪಾಲ್ ಅನ್ಸಾಲ್ ಸೇರಿ ಇತರರಿಗೆ ಕೋರ್ಟ್ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಜೊತೆಗೆ 2.25 ಕೋಟಿ ರೂಪಾಯಿ ದಂಡ ವಿಧಿಸಿದೆ. ಇದರ ಜೊತೆಗೆ ಸಾಕ್ಷ್ಯ ತಿರುಚಲು ಸಹಕರಿಸಿದ ನ್ಯಾಯಾಲಯದ ಮಾಜಿ ಉದ್ಯೋಗಿ ದಿನೇಶ್ ಚಂದ್ ಶರ್ಮಾಗೂ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

Uphaar Fire Tragedy: 24 ವರ್ಷ ಹಿಂದಿನ ಪ್ರಕರಣ, ಸಾಕ್ಷ್ಯ ತಿರುಚಿದ ಉದ್ಯಮಿಗಳಿಗೆ 7 ವರ್ಷ ಜೈಲು!

ಉಪಹಾರ್ ಅಗ್ನಿ ಅವಘಡದಲ್ಲಿ ಸಾಕ್ಷ್ಯ ತಿರುಚಿದ ಕಾರಣ ಕಳೆದ ತಿಂಗಳು ಪಟಿಯಾಲಾ ಕೋರ್ಟ್ ರಿಯಲ್ ಎಸ್ಟೇಟ್ ಉದ್ಯಮಿಗಳಾದ ಸುಶೀಲ್ ಅನ್ಸಾಲ್ ಹಾಗೂ ಗೋಪಾಲ್ ಅನ್ಸಾಲ್  ದೋಷಿಗಳೆಂದು ಪಟಿಯಾಲ್ ಕೋರ್ಟ್ ತೀರ್ಪು ನೀಡಿತ್ತು. ಇದೀಗ ಶಿಕ್ಷೆ ಪ್ರಕಟಿಸಿದೆ. ಈಗಾಗಲೇ 2 ವರ್ಷಗಳ ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿರುವ ಸುಶೀಲ್ ಅನ್ಸಾಲ್ ಹಾಗೂ ಗೋಪಾಲ್ ಅನ್ಸಾಲ್ ಇದೀಗ 7 ವರ್ಷಗಳ ಶಿಕ್ಷೆ ಅನುಭವಿಸಬೇಕಾಗಿದೆ.

click me!