Covid 19 Spike: 27,553 ಕೇಸ್‌: 2 ತಿಂಗಳ ಗರಿಷ್ಠ

By Suvarna News  |  First Published Jan 3, 2022, 5:30 AM IST
  • ಸಕ್ರಿಯ ಕೇಸ್‌ 1.22 ಲಕ್ಷಕ್ಕೆ ಏರಿಕೆ
  • 284 ಮಂದಿ ಸಾವು, ಭಾನುವಾರ 1525 ಒಮಿಕ್ರೋನ್‌ ಪತ್ತೆ, 1500ರ ಗಡಿಪಾರು

ನವದೆಹಲಿ(ಜ.03): ಭಾರತದಲ್ಲಿ ಭಾನುವಾರ ಬೆಳಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ 27,553 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಇದು ಕಳೆದ 2021ರ ಅಕ್ಟೋಬರ್‌ 1 ನಂತರದ (2 ತಿಂಗಳ) ಗರಿಷ್ಠ ಸಂಖ್ಯೆಯಾಗಿದೆ. ಇದೇ ವೇಳೆ ಸೋಂಕಿಗೆ 284 ಮಂದಿ (ಕೇರಳದ 241 ಹಳೆಯ ಸಾವು) ಸೋಂಕಿಗೆ ಬಲಿಯಾಗಿದ್ದಾರೆ. ಹೊಸ ಸೋಂಕಿತರೂ ಸೇರಿ ಸಕ್ರಿಯ ಸೋಂಕಿನ ಪ್ರಮಾಣ 1.22 ಲಕ್ಷಕ್ಕೆ ಹೆಚ್ಚಿದೆ. ಚೇತರಿಕೆ ಪ್ರಮಾಣ ಶೇ.98.27ರಷ್ಟಿದೆ. ದೈನಂದಿನ ಸೋಂಕಿನ ಪ್ರಮಾಣ ಶೇ.2.55ಕ್ಕೆ ಏರಿಕೆಯಾಗಿದೆ.

ಭಾನುವಾರದ ಸಂಖ್ಯೆಯೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 3.48 ಕೋಟಿಗೆ ಏರಿಕೆಯಾಗಿದೆ. ಒಟ್ಟು ಸಾವಿಗೀಡಾದವರ ಸಂಖ್ಯೆ 4,81,770ಕ್ಕೆ ತಲುಪಿದೆ. ಒಟ್ಟು ಸೋಂಕಿತರ ಪೈಕಿ 3.42 ಕೋಟಿ ಮಂದಿ ಗುಣಮುಖರಾಗಿದ್ದಾರೆ. ಈ ನಡುವೆ ಒಟ್ಟು 145 ಕೋಟಿ ಡೋಸ್‌ ಲಸಿಕೆ ವಿತರಣೆ ಮಾಡಲಾಗಿದೆ.

Tap to resize

Latest Videos

ಒಂದೇ ದಿನ ​94 ಒಮಿಕ್ರೋನ್‌ ಪತ್ತೆ

ನವದೆಹಲಿ: ಪಾಶ್ಚಿಮಾತ್ಯ ರಾಷ್ಟ್ರಗಳಂತೆ ಭಾರತದಲ್ಲೂ ದಿನದಿಂದ ದಿನಕ್ಕೆ ಒಮಿಕ್ರೋನ್‌ ಹೊಸ ರೂಪಾಂತರಿ ಸೋಂಕಿನ ಆರ್ಭಟ ಅತಿಯಾಗುತ್ತಿದೆ. ದೇಶದಲ್ಲಿ ಭಾನುವಾರ 94 ಪ್ರಕರಣ ಪತ್ತೆಯಾಗಿದ್ದು ಒಟ್ಟು ಒಮಿಕ್ರೋನ್‌ ಸೋಂಕಿತರ ಸಂಖ್ಯೆ 1525ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರ ರಾಜ್ಯವೊಂದರಲ್ಲಿಯೇ 460 ಮಂದಿಯಲ್ಲಿ ಈ ಸೋಂಕು ದೃಢಪಟ್ಟಿದೆ. ನಂತರ ದೆಹಲಿಯಲ್ಲಿ 351, ಗುಜರಾತಲ್ಲಿ 136, ತಮಿಳುನಾಡಲ್ಲಿ 117 ಮತ್ತು ಕೇರಳದಲ್ಲಿ 109 ಕೇಸ್‌ ಪತ್ತೆಯಾಗಿವೆ.

ಮಹಾರಾಷ್ಟ್ರದಲ್ಲಿ 11837 ಕೇಸ್‌:

ಮಹಾರಾಷ್ಟ್ರದಲ್ಲಿ ನಿನ್ನೆ ಒಂದೇ ದಿನ 11837 ಮಂದಿಗೆ ಹೊಸದಾಗಿ ಸೋಂಕು ಪತ್ತೆಯಾಗಿದ್ದು, 9 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟಾರೆ ಕೇಸ್‌ಗಳ ಪೈಕಿ ಮುಂಬೈನಲ್ಲಿ 8067 ಕೇಸ್‌ಗಳು ದೃಢಪಟ್ಟಿದೆ. ಶನಿವಾರಕ್ಕೆ ಹೋಲಿಸಿದರೆ ಮುಂಬೈನಲ್ಲಿ ಕೋವಿಡ್‌ ಶೇ.27 ಪ್ರಮಾಣದಷ್ಟುಹೆಚ್ಚಾಗಿದೆ. ಆದಾಗ್ಯೂ, ಕಳೆದ 24 ಗಂಟೆಯಲ್ಲಿ ಮುಂಬೈನಲ್ಲಿ ಕೋವಿಡ್‌ನಿಂದ ಒಂದೇ ಒಂದು ಸಾವು ಸಂಭವಿಸಿಲ್ಲ ಎಂಬುದು ಸಮಾಧಾನಕರ.

ಬಂಗಾಳದಲ್ಲಿ 6153 ಕೇಸು:

ಪಶ್ಚಿಮ ಬಂಗಾಳದಲ್ಲಿ ಭಾನುವಾರ 6153 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 9 ಸಾವು ಸಂಭವಿಸಿದೆ. ಒಟ್ಟಾರೆ ಕೇಸ್‌ನಲ್ಲಿ ಕೋಲ್ಕತಾದ ಪಾಲು 3194 ಆಗಿದೆ.

ಕೇರಳದಲ್ಲಿ ನಾಗಾಲೋಟ:

ಅದೇ ರೀತಿ ಕೇರಳದಲ್ಲಿ 2802 ಮಂದಿಗೆ ಹೊಸದಾಗಿ ಸೋಂಕು ದೃಢಪಟ್ಟಿದ್ದು, ಹಳೇ ಸಾವು ಸೇರಿದಂತೆ 78 ಸಾವು ಸಂಭವಿಸಿದೆ. ಇದರೊಂದಿಗೆ ಕೇರಳದಲ್ಲಿ ಈವರೆಗೆ ಈ ವ್ಯಾಧಿಗೆ 48,113 ಬಲಿಯಾದಂತಾಗಿದೆ.

click me!