ಚಿತ್ತೂರು (ಆಂಧ್ರಪ್ರದೇಶ):ನಿಶ್ಚಿತಾರ್ಥಕ್ಕೆ ಹೋಗುವವರನ್ನು ಕರೆದೊಯ್ಯುತ್ತಿದ್ದ ಬಸ್ಸೊಂದು ಕಂದಕಕ್ಕೆ ಉರುಳಿದ ಪರಿಣಾಮ 8 ಜನರು ದಾರುಣವಾಗಿ ಸಾವನ್ನಪ್ಪಿ, 45ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಆಂಧ್ರಪ್ರದೇಶದ (Andhra Pradesh) ಚಿತ್ತೂರು (Chittoor) ಜಿಲ್ಲೆಯ ಭಾಕರಪೇಟ ಕನುಮಾ (Bhakarapeta Kanuma)ಎಂಬಲ್ಲಿ ಮದನಪಲ್ಲಿ-ತಿರುಪತಿ ಹೆದ್ದಾರಿಯಲ್ಲಿ (Madanapalle-Tirupati highway) ಈ ದುರ್ಘಟನೆ ಸಂಭವಿಸಿದೆ. ಖಾಸಗಿ ಬಸ್ ಕಣಿವೆಗೆ ಉರುಳಿದ ಪರಿಣಾಮ ಮಗು, ಮಹಿಳೆ ಸೇರಿದಂತೆ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಸುಮಾರು 63 ಮಂದಿ ಈ ಬಸ್‌ನಲ್ಲಿದ್ದರು ಎಂದು ತಿಳಿದು ಬಂದಿದೆ. ಬಸ್ ಚಾಲಕನ ಅತಿವೇಗದ ಚಾಲನೆಯೇ ಈ ಅವಘಢಕ್ಕೆ ಕಾರಣ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಅಪಘಾತದ ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ರಕ್ಷಣಾ ತಂಡ ಈಗಾಗಲೇ ಸ್ತಳದಿಂದ ಆರು ಮೃತದೇಹಗಳನ್ನು ಹೊರತೆಗೆದಿದೆ. ಘಟನೆಯಲ್ಲಿ ಗಾಯಗೊಂಡಿದ್ದವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ನಾರಾವರಿಪಲ್ಲಿಯ (Naravaripalli) ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಒಂದು ಮಗು ಸಾವನ್ನಪ್ಪಿದೆ. ನಿಶ್ಚಿತಾರ್ಥವಾಗಬೇಕಿದ್ದ ವರನಿಗೂ ದುರಂತದಲ್ಲಿ ಗಾಯಗಳಾಗಿವೆ. ಮೃತರನ್ನು 60 ವರ್ಷದ ಮಾಲಿಶೆಟ್ಟಿ ವೆಂಗಪ್ಪ(Malishetti Vengappa), 45 ವರ್ಷದ ಮಾಲಿಶೆಟ್ಟಿ ಮುರಳಿ ( Malishetti Murali), 40 ವರ್ಷದ ಕಾಂತಮ್ಮ (Kanthamma), 40 ವರ್ಷದ ಮಾಲಿಶೆಟ್ಟಿ ಗಣೇಶ್ (Malishetti Ganesh), 8 ವರ್ಷದ ಜೆ.ಯಶಸ್ವಿನಿ (J.Yashaswini) ಹಾಗೂ ಚಾಲಕ ಹಾಗೂ ಕ್ಲೀನರ್ ಆಗಿ ಕಾರ್ಯನಿರ್ವಹಿಸುತ್ತಿದ್ ನಬಿ ರಸೂಲ್ (Nabi Rasool) ಎಂದು ಗುರುತಿಸಲಾಗಿದೆ. ಗಾಯಗೊಂಡವರಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಗಾಯಾಳುಗಳನ್ನು ತಿರುಪತಿ ರೂಯಾ (Tirupati Ruia) ಮತ್ತು ಸ್ವಿಮ್ಸ್ (Swims) ಆಸ್ಪತ್ರೆಗೆ ರವಾನಿಸಲಾಗಿದೆ.
Road Accident: ಮರಣದ ಮನೆಗೆ ಹೋಗಿದ್ದವರೆ ಮಸಣಕೆ.. ಬೆಳ್ತಂಗಡಿ ಭೀಕರ ಅಪಘಾತ, ಸಹೋದರರ ದುರ್ಮರಣ
ಅನಂತಪುರ (Anantapur) ಜಿಲ್ಲೆಯ ಧರ್ಮಾವರಂನ (Dharmavaram) ರಾಜೇಂದ್ರ ನಗರದ (Rajendra Nagar) ವೇಣು (Venu) ಅವರಿಗೆ ಚಿತ್ತೂರು (Chittoor) ಜಿಲ್ಲೆಯ ನಾರಾಯಣವನಂ (Narayanavanam) ಪ್ರದೇಶದ ಯುವತಿಯೊಂದಿಗೆ ಮದುವೆ ನಿಗದಿಯಾಗಿತ್ತು. ಹೀಗಾಗಿ ಭಾನುವಾರ ಬೆಳಗ್ಗೆ ತಿರುಚಾನೂರಿನಲ್ಲಿ (Thiruchanur) ನಿಶ್ಚಿತಾರ್ಥ ಏರ್ಪಡಿಸಲಾಗಿತ್ತು. ವರ ವೇಣುವಿನ ಕುಟುಂಬದವರು ಇತರ 63 ಮಂದಿಯೊಂದಿಗೆ ಖಾಸಗಿ ಬಸ್‌ನಲ್ಲಿ ಮಧ್ಯಾಹ್ನ 3.30 ಕ್ಕೆ ಧರ್ಮವರಂನಿಂದ ಹೊರಟಿದ್ದರು. ದಾರಿಮಧ್ಯೆ ಚಿತ್ತೂರು ಜಿಲ್ಲೆಯ ಪೀಲೇರು (Peeleru) ಎಂಬಲ್ಲಿ ರಾತ್ರಿ 8 ಗಂಟೆಗೆ ಡಾಬಾದಲ್ಲಿ ಎಲ್ಲರೂ ಊಟ ಮಾಡಿ, ಮತ್ತೆ ಪ್ರಯಾಣ ಆರಂಭಿಸಿ ಭಾಕರಪೇಟ ಘಾಟ್ (Bhakarapeta Ghat) ತಲುಪಿದರು. ಇಲ್ಲಿ ತಿರುವು ತೆಗೆದುಕೊಳ್ಳುವಾಗ ಚಾಲಕ ಸ್ಟೇರಿಂಗ್ ಮೇಲೆ ನಿಯಂತ್ರಣ ಕಳೆದುಕೊಂಡಿದ್ದು, ಬಸ್ ಕಣಿವೆಗೆ ಧುಮುಕಿದೆ.
Road Accident: ಐವರು ವಿದ್ಯಾರ್ಥಿಗಳ ಜೀವ ತೆಗೆದ ಬಸ್.. ಹಾಸನಲ್ಲಿ ಭೀಕರ ಅಪಘಾತ
ಅಪಘಾತದ ಮಾಹಿತಿ ಪಡೆದ ಶಾಸಕ ಚೇವಿರೆಡ್ಡಿ ಭಾಸ್ಕರ್ ರೆಡ್ಡಿ ಅವರು ತಿರುಪತಿ ರುಯಾ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು. ಈ ಅಪಘಾತ ಸಂಭವಿಸಿದ ವೇಳೆ ಕತ್ತಲಾಗಿದ್ದರಿಂದ, ಘಾಟ್ ರಸ್ತೆಯಾದ್ದರಿಂದ, ಘಟನೆಯನ್ನು ಯಾರೂ ಗಮನಿಸಲಿಲ್ಲ, ಆದರೆ ಗಾಯಾಳುಗಳ ಕಿರುಚಾಟವನ್ನು ಕೇಳಿದ ಕೆಲವು ವಾಹನ ಚಾಲಕರು ರಾತ್ರಿ 10:30 ರ ವೇಳೆಗೆ ತಮ್ಮ ಬೈಕ್‌ಗಳನ್ನು ನಿಲ್ಲಿಸಿ ನೋಡಿದಾಗ ಬಸ್ ಕಣಿವೆಗೆ ಬಿದ್ದಿದ್ದು ಗೊತ್ತಾಗಿದೆ. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮತ್ತೊಂದೆಡೆ, ವಾಹನ ಸವಾರರು ಮತ್ತು ಪೊಲೀಸರು ಗಾಯಾಳುಗಳನ್ನು ರಕ್ಷಿಸಲು ಪ್ರಯತ್ನಿಸಿದರು. ಅಪಘಾತದ ಮಾಹಿತಿ ಪಡೆದ ತಕ್ಷಣ ಜಿಲ್ಲಾಧಿಕಾರಿ ಎಂ ಹರಿನಾರಾಯಣನ್ ಮತ್ತು ತಿರುಪತಿ ನಗರ ಎಸ್ಪಿ ವೆಂಕಟ ಅಪ್ಪಲನಾಯ್ಡು ಅವರು ಸ್ಥಳಕ್ಕೆ ಧಾವಿಸಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು.