2.5 ಲಕ್ಷ ಮೌಲ್ಯದ ಬಂಗಾರದ ಸರ ನುಂಗಿದ ಎಮ್ಮೆ: ಚಿನ್ನಕ್ಕಾಗಿ ಹೊಟ್ಟೆಯನ್ನೇ ಸೀಳಿದ ಮಾಲೀಕರು!

By Sathish Kumar KH  |  First Published Oct 1, 2023, 7:17 PM IST

ಮನೆಯಲ್ಲಿ ಸಾಕಣೆ ಮಾಡಿದ್ದ ಎಮ್ಮೆಗೆ ತರಕಾರಿ ಸಿಪ್ಪೆ ತಿನ್ನಿಸುವಾಗ ಮಹಿಳೆಯ ಕತ್ತಿನಲ್ಲಿದ್ದ 2.5 ಲಕ್ಷ ಮೌಲ್ಯದ ಚಿನ್ನದ ಸರವನ್ನೂ ನುಂಗಿಬಿಟ್ಟದೆ.


ಮಹಾರಾಷ್ಟ್ರ (ಅ.01): ಮನೆಯಲ್ಲಿ ಸಾಕಣೆ ಮಾಡಿದ್ದ ಎಮ್ಮೆಗೆ ತರಕಾರಿ ಸಿಪ್ಪೆಯನ್ನು ತಿನ್ನಿಸುವಾಗ ಮಾಲಕಿಯ ಸುಮಾರು 35 ಗ್ರಾಂನ 2.5 ಲಕ್ಷ ರೂ. ಮೌಲ್ಯದ ಚಿನ್ನದ ಸರ ತುಂಡಾಗಿ ಬಿದ್ದಿದ್ದು ಅದನ್ನು ಎಮ್ಮೆ ನುಂಗಿಬಿಟ್ಟಿದೆ. ಆದರೆ, ಚಿನ್ನದ ಸರದ ಆಸೆಗೆ ಎಮ್ಮೆಯ ಹೊಟ್ಟೆಯನ್ನೇ ಕೊಯ್ದ ಘಟನೆ ನಡೆದಿದೆ. 

ಹೌದು, ನಾವು ಮನೆಯಲ್ಲಿ ಸಾಕಣೆ ಮಾಡುವ ಹಸು, ಎಮ್ಮೆ, ಬೆಕ್ಕಿ ಹಾಗೂ ನಾಯಿಗಳಿಂದ ಮಾಲೀಕರಿ ಕೆಲವು ಸಂಕಷ್ಟಕ್ಕೆ ಒಳಗಾಗುವುದು ಸಾಮಾನ್ಯವಾಗಿದೆ. ಅದೇ ರೀತಿ ಮಹಾರಾಷ್ಟ್ರದ ಮಂಗ್ರುಲ್ಪಿರ್ (ವಾಶಿಂ) ನಲ್ಲಿರುವ ಸರ್ಸಿ ಗ್ರಾಮದಲ್ಲಿ ಎಮ್ಮೆಯೊಂದು 3.5 ತೊಲ ತೂಕದ ಅಂದಾಜು 2.5 ಲಕ್ಷ ರೂ. ಮೌಲ್ಯದ ಚಿನ್ನದ ಸರವನ್ನು ಎಮ್ಮೆ ನುಂಗಿದೆ. ಇನ್ನು ಮನೆಯ ಮಾಲಕಿಯು ತಮ್ಮ ಎಮ್ಮೆಗೆ ಆಹಾರವಾಗಿ ಸೋಯಾಬೀನ್ ಸಿಪ್ಪೆಯನ್ನು ತಿನ್ನಿಸುವಾಗ ಆಕೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವು ಆಕಸ್ಮಿಕವಾಗಿ ಕಳಚಿ ಬಿದ್ದಿದೆ. ಆದರೆ, ಇದನ್ನು ನೋಡಿಕೊಳ್ಳದ ಕಾರಣ ಎಮ್ಮೆಗೆ ತಿನ್ನಿಸಿದ ಆಹಾರದಲ್ಲಿ ಚಿನ್ನದ ಸರವೂ ಎಮ್ಮೆಯ ಹೊಟ್ಟೆಯನ್ನು ಸೇರಿದೆ. 

Tap to resize

Latest Videos

ಇನ್ನು ಸರ ಕಳೆದುಕೊಂಡ ಮಹಿಳೆ ಎಷ್ಟೇ ಹುಡುಕಾಡಿದರೂ ಸರ ಸಿಗದ ಹಿನ್ನೆಲೆಯಲ್ಲಿ ಗಂಡನಿಗೆ ತಿಳಿಸಿದ್ದಾರೆ. ಆಗ ಮನೆಯಲ್ಲಿ ಎಲ್ಲರೂ ಹುಡಕಾಡಿದ್ದಾರೆ. ಎಲ್ಲೆಲ್ಲಿ ಹೋಗಿದ್ದೆ, ಏನು ಕೆಲಸ ಮಾಡಿದ್ದೆ ಎಂದು ಗಂಡ ವಿಚಾರಿಸಿದಾಗ ಎಮ್ಮೆಗೆ ತರಕಾರಿ ಸಿಪ್ಪೆ ತಿನ್ನಿಸಿದ ಬಗ್ಗೆಯೂ ತಿಳಿಸಿದ್ದಾಳೆ. ಇನ್ನು ಚಿನ್ನದ ಸರ ಎಲ್ಲೂ ಸಿಗದಿದ್ದಾಗ ಎಮ್ಮೆಯೇ ಸರವನ್ನು ನುಂಗಿರಬೇಕು ಎಂದು ತಿಳಿದು ವೈದ್ಯರ ಬಳಿ ಎಮ್ಮೆಯನ್ನು ಕರೆದೊಯ್ದಿದ್ದಾರೆ. ಆದರೆ, ಸ್ಥಳೀಯವಾಗಿ ಎಮ್ಮೆಯ ಹೊಟ್ಟೆಯಲ್ಲಿರುವ ಚಿನ್ನದ ಸರ ಹೊರಗೆ ತೆಗೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದಾದ ನಂತರ ಎಮ್ಮೆಯನ್ನು ಪಟ್ಟಣ ಪ್ರದೇಶ ಮಾವಾಶಿಮ್‌ಗೆ ಕೊಂಡೊಯ್ಯಲು ಎಮ್ಮೆ ಮಾಲೀಕ ಭೋಯರ್‌ಗೆ ಹೇಳಿದ್ದಾರೆ. ಅಲ್ಲಿ ಅನುಭವಿ ಪಶುವೈದ್ಯರು ಎಮ್ಮೆಯ ಹೊಟ್ಟೆಯನ್ನು ಪರೀಕ್ಷಿಸಿದರು.

Bengaluru ಬರ್ತಡೇ ಪಾರ್ಟಿಗೆ ತರಿಸಿದ್ದ ಹೀಲಿಯಂ ಬಲೂನ್‌ ಬ್ಲಾಸ್ಟ್‌: ನಾಲ್ವರು ಮಕ್ಕಳು ಸೇರಿ ಐವರ ಸ್ಥಿತಿ ಗಂಭೀರ

ಇನ್ನು ಮಾವಾಶಿಮ್‌ನ ಹಿರಿಯತ ಪಶು ವೈದ್ಯಾಧಿಕಾರಿ ಎಮ್ಮೆಯ ದೇಹದಲ್ಲಿ ಯಾವುದಾದರೂ ಲೋಹದ ವಸ್ತುವಿದೆಯೇ ಎಂದು ಪರೀಕ್ಷೆ ಮಾಡಲು ಮುಂದಾಗಿದ್ದಾರೆ. ಇದರಿಂದಾಗಿ ಲೋಹ ಶೋಧಕ ಯಂತ್ರವನ್ನು ಬಳಸಿ ಚಿನ್ನದ ಸರ ಎಮ್ಮೆಯ ಹೊಟ್ಟೆಯಲ್ಲಿರುವುದರ ಬಗ್ಗೆ ಖಚಿತ ಮಾಹಿತಿ ತಿಳಿದುಕೊಂಡಿದ್ದಾರೆ. ಎಮ್ಮೆಯಿಂದ ಚಿನ್ನದ ಸರವನ್ನು ಹೊರ ತೆಗೆಯುವುದಕ್ಕೆ ಪ್ರಯತ್ನ ಮಾಡಿದ್ದಾರೆ. ಇನ್ನು ಮಲದಿಂದ (ಸಗಣಿ) ಹೊರಗೆ ಬರುವ ಸಾಧ್ಯತೆಯ ಬಗ್ಗೆಯೂ ಕಾದು ನೋಡಿದ್ದಾರೆ. ಆದರೆ, ಎಮ್ಮೆಯ ಹೊಟ್ಟೆಯಿಂದ ತಂತಾನೆ ಸರ ಹೊರಗೆ ಬರುವುದಿಲ್ಲ ಎಂದು ಎಮ್ಮೆಯ ಮಾಲೀಕರಿಗೆ ವೈದ್ಯರು ತಿಳಿಸಿದ್ದಾರೆ.

ಎಮ್ಮೆಯ ಹೊಟ್ಟೆ ಕೊಯ್ಯಲು ನಿರ್ಧಾರ: ಎಮ್ಮೆಯ ಹೊಟ್ಟೆಯಲ್ಲಿದ್ದ ಚಿನ್ನದ ಸರವನ್ನು ತೆಗೆಯಲು ಅದರ ಹೊಟ್ಟೆಯನ್ನು ಕೊಯ್ದು ಶಸ್ತ್ರಚಿಕಿತ್ಸೆ ಮಾಡಿ ಹೊರಗೆ ತೆಗೆಯಬೇಕು ಎಂದು ವೈದ್ಯರು ತಿಳಿದಿದ್ದಾರೆ. ಇದಕ್ಕೆ ಮಾಲೀಕರು ಕೂಡ ಅನುಮತಿ ನೀಡಿದ್ದರಿಂದ ಎಮ್ಮೆಯ ಹೊಟ್ಟೆಯಲ್ಲಿ ಸರವಿದ್ದ ಸ್ಥಳದ ನಿಖರ ಮಾಹಿತಿಗಾಗಿ ಸೋನೋಗ್ರಫಿಯನ್ನು ಮಾಡಿದ್ದಾರೆ. ನಂತರ ಎಮ್ಮೆಯ ಹೊಟ್ಟೆಗೆ ಶಸ್ತ್ರಚಿಕಿತ್ಸೆ ಮಾಡಿ ಚಿನ್ನದ ಸರವನ್ನು ಹೊರ ತೆಗೆದಿದ್ದಾರೆ. ಸರ ಸಿಕ್ಕಿರುವುದಕ್ಕೆ ಮಾಲೀಕ ಸಂತಸ ವ್ಯಕ್ತಪಡಿಸಿದ್ದು, ಎಮ್ಮೆಯ ಆರೋಗ್ಯಕ್ಕಾಗಿ ವೈದ್ಯರ ಬಳಿ ಮನವಿ ಮಾಡಿದ್ದಾರೆ. ಎಮ್ಮೆಗೆ ಶಸ್ತ್ರಚಿಕಿತ್ಸೆ ಮಾಡಿದ್ದರಿಂದ ಯಾವುದೇ ಪ್ರಾಣಾಪಾಯ ಆಗದೇ ಆರಾಮವಾಗಿದ್ದು, ಗಾಯ ಗುಣವಾಗುವವರೆಗೆ ಚಿಕಿತ್ಸೆ ಮುಂದುವರೆಸುವಂತೆ ವೈದ್ಯರು ತಿಳಿಸಿದ್ದಾರೆ.

ಸ್ಯಾಂಡಲ್‌ವುಡ್‌ ನಟ ನಾಗಭೂಷಣ್‌ ಸ್ಟೇಷನ್‌ ಬೇಲ್‌ ಮೇಲೆ ಬಿಡುಗಡೆ

ಎಮ್ಮೆಯ ಶಸ್ತ್ರಚಿಕಿತ್ಸೆ ಮಾಡಿದ ಬಗ್ಗೆ ಮಾತನಾಡಿದ ಡಾ.ಕೌಂಡಿನ್ಯ ಅವರು, ನಗರ ಪ್ರದೇಶಗಳಲ್ಲಿ ಪ್ಲಾಸ್ಟಿಕ್, ಲೋಹ, ನಾಣ್ಯ ಸೇರಿದಂತೆ ಹಲವು ಅಪಾಯಕಾರಿ ವಸ್ತುಗಳನ್ನು ತಿಂದಾಗ ಹಸುಗಳಿಗೆ ಶಸ್ತ್ರ ಚಿಕಿತ್ಸೆ ಮಾಡಿ ದೇಹದಲ್ಲಿರುವ ಅಪಾಯಕಾರಿ ವಸ್ತುಗಳನ್ನು ತೆಗೆಯುತ್ತಿದ್ದೆವು. ಇಂದು ನಾವು 2.5 ಲಕ್ಷ ಮೌಲ್ಯದ ಚಿನ್ನದ ಸವರನ್ನು ನುಂಗಿದ ಎಮ್ಮೆಯನ್ನು ಶಸ್ತ್ರಚಿಕಿತ್ಸೆ ಮಾಡಿರುವುದು ಇದೇ ಮೊದಲ ಪ್ರಕರಣವಾಗಿದೆ. ಇನ್ನು ಎಮ್ಮೆ ಕೂಡ ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. 

click me!