ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್ ಹೊಸ ಭಾರತವನ್ನು ಮತ್ತಷ್ಟು ಸಶಕ್ತಗೊಳಿಸಿದೆ. ಕೊರೋನಾ ಸವಾಲು ಮೆಟ್ಟಿನಿಂತ ಭಾರತ ಇದೀಗ ಅಭಿದ್ಧಿಯತ್ತ ಸಾಗುತ್ತಿದೆ. ಕೇಂದ್ರ ಬಜೆಟ್ ಕುರಿತು ರಾಜ್ಯಸಭಾ ಸದಸ್ಯ, ಬಿಜೆಪಿ ರಾಷ್ಟ್ರೀಯ ವಕ್ತಾರ ರಾಜೀವ್ ಚಂದ್ರಶೇಖರ್ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.
ನವದೆಹಲಿ(ಫೆ.01): ನರೇಂದ್ರ ಮೋದಿ ಸರ್ಕಾರ 2021-22ರ ಸಾಲಿನ ಬಜೆಟ್ ಮಂಡಿಸಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಭಾರತದ ಆರ್ಥಿಕತೆ ಹಾಗೂ ಪುನಶ್ಚೇತನಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಕೊರೋನಾ ವೈರಸ್ ಕಾರಣ ಭಾರತ ಎದುರಿಸಿದ ಶತಮಾನದ ಆರ್ಥಿಕ ಸವಾಲನ್ನು ಶಕ್ತವಾಗಿ ಮೆಟ್ಟಿನಿಂತು ಮುನ್ನುಗ್ಗಿದೆ. ಇದು ಮಹತ್ವದ ಮೊದಲ ಸಂದೇಶ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ಎರಡನೇ ಸಂದೇಶ ಎಂದರೆ, ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಕೇಂದ್ರ ಸರ್ಕಾರ ದೇಶ ಚೇತರಿಸಿಕೊಳ್ಳುವಂತ ಹಾಗೂ ಕೊರೋನಾ ಹೊಡೆದೋಡಿಸಬಲ್ಲ ನಿರ್ಧಾರಗಳನ್ನು ಕೈಗೊಂಡಿದೆ. ಕಳೆದ 10 ತಿಂಗಳಲ್ಲಿ ಭಾರತ ಬಹು ದೂರ ಪ್ರಯಾಣಿಸಿದೆ. ಈ ಸಂಕಷ್ಟದ ಸಮಯದಲ್ಲೂ ದಣಿವರಿಯದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಎಲ್ಲಾ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ವಿಶ್ವವೇ ಭಾರತದತ್ತ ತಿರುಗಿನೋಡುವಂತೆ ಮಾಡಿದ್ದಾರೆ ಎಂದ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
undefined
ಡಿಮಾನಿಟೈಸೇಶನ್‌ನಿಂದ ಭ್ರಷ್ಟಚಾರ, ಕಪ್ಪು ಹಣಕ್ಕೆ ಬ್ರೇಕ್; ರಾಜೀವ್ ಚಂದ್ರಶೇಖರ್!.
ಕಳೆದ 10 ತಿಂಗಳು ಭಾರತದ ಎದುರಿಸಿದ ಪ್ರಮುಖ ಸವಾಲುಗಳಾದ ಕೊರೋನಾ ವೈರಸ್ ಹರಡುವಿಕೆ, ವೈರಸ್ ತ್ವರಿತಗತಿಯಲ್ಲಿ ಹರಡುವಿಕೆಯಿಂದ ನಿರ್ಮಾಣವಾದ ಆರೋಗ್ಯ ಪರಿಸ್ಥಿತಿ, ಕೊರೋನಾ ಟೆಸ್ಟ್ ಕೇಂದ್ರದ ಕೊರತೆ, ಪಿಪಿಇ ಕಿಟ್ ಸೇರಿದಂತೆ ವೈದ್ಯಕೀಯ ಉಪಕರಣದ ಕೊರತೆ, ಚೀನಾ ಗಡಿ ತಂಟೆ, ತಪ್ಪಿದ ಬೇಡಿಕೆ ಹಾಗೂ ಪೂರೈಕೆ ಚೈನ್, ಲಾಕ್‌ಡೌನ್ ಕಾರಣ ಆರ್ಥಿಕತೆ ಮೇಲೆ ಬಿದ್ದ ಹೊಡೆತ, ಲಸಿಕೆ ಅಭಿವೃದ್ಧಿ, ವಿತರಣೆ ಸೇರಿದಂತೆ ಒಂದರ ಮೇಲೊಂದರಂತೆ ಸವಾಲುಗಳನ್ನು ಭಾರತ ಎದುರಿಸಿದೆ.
ದಿಟ್ಟ ನಿರ್ಧಾರಗಳಿಂದ ಕೊರೋನಾ ಸಂಕ್ರಾಮಿಕ ರೋಗದ ನಡುವೆ ಹಲವು ಜೀವಗಳನ್ನು ಉಳಿಸುವಲ್ಲಿ ಭಾರತ ಯಶಸ್ವಿಯಾಗಿದೆ.ರಚನಾತ್ಮಕ ಸುಧಾರಣೆಗಳ ಮೂಲಕ ಭಾರತದ ಆರ್ಥಿಕತೆಯನ್ನು ಪುನಶ್ಚೇತನಗೊಳಿಸಲು ದಿಟ್ಟ ಹೆಜ್ಜೆ ಇಡಲಾಗಿದೆ. ರಾಷ್ಟ್ರೀಯ ಮೂಲಸೌಕರ್ಯ ಯೋಜನೆಯಡಿ 1.20 ಲಕ್ಷ ಕೋಟಿ ವೆಚ್ಚದಲ್ಲಿ 217 ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ. ಈ ಯೋಜನೆಗಳನ್ನು 2019ರಲ್ಲಿ ಆರಂಭಿಸಲಾಗಿತ್ತು ಎಂದು ಬಜೆಟ್ ಕುರಿತು ರಾಜೀವ್ ಚಂದ್ರಶೇಖರ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಈ ಎಲ್ಲಾ ಸವಾಲುಗಳನ್ನು ನಾವು ಎದುರಿಸಿದ್ದೇವೆ. ಸಂಕಷ್ಟದ ಸಮಯದಲ್ಲೂ ಜೊತೆಯಾಗಿ ನಿಂತಿದ್ದೇವೆ. ಹೀಗಾಗಿ ನಾವು ಶೀಘ್ರವಾಗಿ ಚೇತರಿಸಿಕೊಳ್ಳಲು ಸಾಧ್ಯವಾಗಿದೆ. ಇದರಿಂದ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ದೇಶವಾಗಿ ಹೊರಹೊಮ್ಮುತ್ತಿದೆ. ಈ ಎಲ್ಲಾ ಸವಾಲುಗಳನ್ನು ಅವಕಾಶಗಳಾಗಿ ಸೃಷ್ಟಿಸಿದ ನರೇಂದ್ರ ಮೋದಿ, ಆತ್ಮನಿರ್ಭರ್ ಭಾರತ್ ಪರಿಕಲ್ಪನೆಯೊಂದಿಗೆ ದೇಶವನ್ನು ಮತ್ತಷ್ಟು ಜಾಗೃತಿಗೊಳಿಸಿ, ಆರ್ಥಿಕ ಪುನಶ್ಚೇತನಕ್ಕೆ ದಾರಿ ದೀಪವಾದರು ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ಕೊರೋನೊತ್ತರ ಜಗತ್ತಿಗೆ ಪ್ರಸ್ತುತ ಪಡಿಸಿರುವ ಆತ್ಮನಿರ್ಭರ್ ಭಾರತ ಹೊಸ ದಾರಿ ತೋರಿದೆ. ಈ ಭಾರಿಯ ಬಜೆಟ್‌ನಲ್ಲಿ ಭಾರತದ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಶಿಕ್ಷಣದ ಜೊತೆಗೆ ಆತ್ಮನಿರ್ಭಾರಭಾರತಕ್ಕೆ ಸಾಮಾಜಿಕ ಬಂಡವಾಳ ಅಡಿಪಾಯವನ್ನು ರೂಪಿಸುವ ಆಧಾರವಾಗಿದೆ. ಕೊರೋನಾ ವಕ್ಕರಿಸಿದ ಬಳಿಕ ಜೀವನ ಶೈಲಿ, ಜೀವನೋಪಾಯ ಸೇರಿದಂತೆ ಹಲವು ಕಠಿಣ ಆಯ್ಕೆಗಳನ್ನು ಮುಂದಿಟ್ಟಿತು. ಆರೈಕೆ ಸೌಲಭ್ಯಗಳನ್ನು ರಚಿಸುವ ಮೂಲಸೌಕರ್ಯ ವಿಸ್ತರಣೆ, ಪ್ರತಿ ರಾಜ್ಯದ ಪರೀಕ್ಷಾ ಪ್ರಯೋಗಾಲಯಗಳು ಮತ್ತು ನಾಲ್ಕು ಪ್ರದೇಶಗಳಲ್ಲಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಸೇರಿದಂತೆ ಹಲವು ಅಭಿವೃದ್ಧಿ ಪಥದತ್ತ ಸಾಗುತ್ತಿರುವ ಭಾರತದ ಚಿತ್ರಣವೇ ಇದೀಗ ಬದಲಾಗಿದೆ. ಇದು ಭಾರತದಲ್ಲಿ ಆರೋಗ್ಯ ರಕ್ಷಣೆಯ ಸಾಮರ್ಥ್ಯದ ಅಭೂತಪೂರ್ವ ವಿಸ್ತರಣೆಯಾಗಿದೆ. ಕೊರೋನಾ ನಡುವೆ ನರೇಂದ್ರ ಮೋದಿ ಸರ್ಕಾರದ ನಿರ್ಧಾರಗಳಿಂದ ಭಾರತದ ಕೋಟ್ಯಾಂತರ ಜೀವಗಳು ಹೊಸ ಬದುಕು ಕಂಡುಕೊಂಡಿದೆ.
ಭಾರತದ ಆರ್ಥಿಕ ಬೆಳೆವಣಿಗೆ ವೇಗ ಹೆಚ್ಚಿಸಲು ಅಳೆದು ತೂಗಿ ಭಾರತದ ಬಜೆಟ್ ರೂಪಿಸಲಾಗಿದೆ. 700 ಕ್ಕೂ ಹೆಚ್ಚು ಯೋಜನೆಗಳ ಮೂಲಸೌಕರ್ಯ ಪೈಪ್‌ಲೈನ್. ಅತೀ ದೊಡ್ಡ ಜವಳಿ ರಫ್ತು ಉದ್ಯಾನವನಗಳ ಸ್ಥಾಪನೆಯಿಂದ ಉತ್ಪಾದನೆ ಕ್ಷೇತ್ರವನ್ನು ಮತ್ತಷ್ಟು ವಿಸ್ತರಿಸುವ ಯೋಜನೆಯನ್ನು ಬಜೆಟ್‌ನಲ್ಲಿ ಮಂಡಿಸಲಾಗಿದೆ. ಆತ್ಮನಿರ್ಭರ್ ಭಾರತದಿಂದ ಲಾಜಿಸ್ಚಿಕ್ ಆಧುನೀಕರಣಗೊಳಿಸುವ ಹಾಗೂ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಪರಿಹರಿಸುವ ನಿಟ್ಟಿನಲ್ಲಿ ಹೆಜ್ಜೆ ಇಡಲಾಗಿದೆ. ಇದರಿಂದ ಚೀನಾಗೆ ಪರ್ಯಾಯವಾಗಿ ಹಾಗೂ ಪ್ರತಿಸ್ಪರ್ಧಿಯಾಗಿ ಭಾರತವೂ ಬೆಳೆಯುತ್ತಿದೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ರೈತರು ಹಾಗೂ ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ಹಣಕಾಸು ಸಚಿವೆ ಮಂಡಿಸಿದ ಬಜೆಟ್ ಅತ್ಯುತ್ತಮವಾಗಿದೆ. ಈ ಕುರಿತ ನನಗೆ ಅತೀವ ಸಂತಸವಾಗಿದೆ. ಕನಿಷ್ಠ ಬೆಂಬಲ ಬೆಲೆ ಹೆಚ್ಚಳ, ಕೃಷಿ ಮೂಲ ಸೌಕರ್ಯ ಬಂಡವಾಳ ಕಲ್ಪನೆಯು ರೈತರ ಆದಾಯವನ್ನು ದ್ವಿಗುಣಗೊಳಿಸುವ ಮತ್ತು ಹೆಚ್ಚಿಸುವ ಸರ್ಕಾರದ ಬದ್ಧತೆಯನ್ನು ಮತ್ತಷ್ಟು ವಿಸ್ತರಿಸುತ್ತದೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ದೇಶದ ಅಭಿವೃದ್ಧಿ ಹಾಗೂ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು, ಅದರ ಖರ್ಚು ಸಾಮರ್ಥ್ಯದ ಬಗ್ಗೆ ಸರ್ಕಾರವು ವಿಶ್ವಾಸ ಹೊಂದಿದೆ. ಕೊರೋನಾ ಸೇರಿದಂತೆ ಹಲವು ಸವಾಲುಗಳ ನಡುವೆ ಕೇಂದ್ರದ ಬಜೆಟ್ ಶೇಕಡಾ 11 ರಷ್ಟು ಬೆಳವಣಿಗೆಯನ್ನು ಸೂಚಿಸುತ್ತಿದೆ. ದಿಟ್ಟ ಹಾಗೂ ದೇಶಕ್ಕಾಗಿ ದುಡಿಯ ನಾಯಕನಿಂದ ಭಾರತೀಯ ಆರ್ಥಿಕತೆ ಪುನರ್ ರಚನೆಯಾಗುತ್ತಿದೆ. ಇದು ಆತ್ಮನಿರ್ಭರ್ ಭಾರತ್ ಸೇರಿದಂತೆ ಹಲವು ಯೋಜನೆಗಳೇ ಇದಕ್ಕೆ ಸಾಕ್ಷಿಯಾಗಿದೆ. ಕೊರೋನಾ ಬಳಿಕ ರೂಪುಗೊಳ್ಳುತ್ತಿರುವ ಜಗತ್ತಿನಲ್ಲಿ ಭಾರತದ ಪಾತ್ರವೇ ಪ್ರಮುಖವಾಗುತ್ತಿದೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.