ಬೆಂಬಲ ಬೆಲೆ ಹೆಚ್ಚಳ, ಆಹಾರ ಧಾನ್ಯ ಖರೀದಿಗೆ 1.72 ಲಕ್ಷ ಕೋಟಿ; ಕೃಷಿಗೆ ಖುಷಿ ನೀಡಿದ ಬಜೆಟ್!

By Suvarna News  |  First Published Feb 1, 2021, 5:38 PM IST

ಕಳೆದೆರಡು ತಿಂಗಳಿನಿಂದ ನಡೆಯುತ್ತಿರುವ ಕೃಷಿ ಕಾಯ್ದೆ ವಿರುದ್ಧದ ಹೋರಾಟದಿಂದ ಈ ಬಾರಿಯ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಕೂಡುಗೆಯನ್ನು ನಿರೀಕ್ಷೆ ಮಾಡಲಾಗಿತ್ತು. ನಿರೀಕ್ಷೆಗೆ ತಕ್ಕಂತೆ ನಿರ್ಮಲಾ ಸೀತಾರಾಮಾನ್ ಕೃಷಿ ಕ್ಷೇತ್ರಕ್ಕೆ ಬಂಪರ್ ಕೂಡುಗೆ ನೀಡಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ಸಿಕ್ಕಿದ್ದೇನು?


ನವದೆಹಲಿ(ಫೆ.01): ಕೃಷಿ ಕಾಯ್ದೆ ವಿರುದ್ಧ ಹೋರಾಟ, ಟ್ರಾಕ್ಟರ್ ರ್ಯಾಲಿ ಸೇರಿದಂತೆ ಕಳೆದರಡು ತಿಂಗಳು ಭಾರತೀಯರು ರೈತರು ವಿಶ್ವದೆಲ್ಲೆಡೆ ಚರ್ಚಾ ವಸ್ತುವಾಗಿದ್ದಾರೆ. ಹೀಗಾಗಿ ಕೇಂದ್ರ ಬಜೆಟ್‌, ಕೃಷಿ ಕ್ಷೇತ್ರಕ್ಕೆ ನೀಡಲು ಸೌಲಭ್ಯಗಳ ಕುರಿತು ನಿರೀಕ್ಷೆ ಹೆಚ್ಚಾಗಿತ್ತು. ಕೃಷಿಕರನ್ನು ಸಂತೃಪ್ತಿಗೊಳಿಸಲು ಹಲವು ಯೋಜನೆಗಳು ಘೋಷಣೆಯಾಗಲಿದೆ ಅನ್ನೋ ಮಾತುಗಳು ಕೇಳಿ ಬಂದಿತ್ತು. ಇದೀಗ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ನಲ್ಲಿ ಕೃಷಿ  ಕ್ಷೇತ್ರಕ್ಕೆ ಬಂಪರ್ ಕೂಡುಗೆ ನೀಡಲಾಗಿದೆ.

ಗೃಹ ಸಾಲ, ತೆರಿಗೆ ವಿನಾಯ್ತಿ; ಮನೆ ಖರೀದಿಸುವವರಿಗೆ ಬಿಗ್ ರಿಲೀಫ್ ನೀಡಿದ ಬಜೆಟ್!.

Tap to resize

Latest Videos

undefined

ಕೃಷಿ ಉತ್ಪನ್ನ ಖರೀದಿಗೆ 1.72 ಲಕ್ಷ ಕೋಟಿ ರೂಪಾಯಿ
ಆಹಾರ ಧಾನ್ಯ ಸೇರಿದಂತೆ ಕೃಷಿ ಉತ್ಪನ್ನ ಖರೀದಿಗೆ ಬರೋಬ್ಬರಿ 1.72 ಲಕ್ಷ ಕೋಟಿ ರೂಪಾಯಿ ಮೀಸಲಿಡಲಾಗಿದೆ. ಇದರಲ್ಲಿ ಪ್ರಮುಖವಾಗಿ ಕೃಷಿ ಕಾಯ್ದೆ ವಿರೋಧಿಸಿ ಹೋರಾಡುತ್ತಿರುವ ಪಂಜಾಬ್ ಹಾಗೂ ಹರ್ಯಾಣ ರೈತರಿಗೆ ಮತ್ತೊಂದು ಸಿಹಿ ಸುದ್ದಿ ಇದೆ. 1.72 ಲಕ್ಷ ಕೋಟಿ ರೂಪಾಯಿ ಹಣದಲ್ಲಿ ಹೆಚ್ಚಿನ ಹಣವನ್ನು ಭತ್ತ ಮತ್ತು ಗೋಧಿ ಖರೀದಿಗೆ ಮೀಸಲಿಡಲಾಗಿದೆ.

ಕೇಂದ್ರ ಬಜೆಟ್ 2021: ಯಾವುದು ದುಬಾರಿ? ಯಾವುದರ ಬೆಲೆ ಇಳಿಕೆ; ಇಲ್ಲಿದೆ ಫುಲ್ ಲಿಸ್ಟ್!..

ಆಹಾರ ಧಾನ್ಯ ಖರೀದಿಗೆ 1.41 ಲಕ್ಷ ಕೋಟಿ ರೂಪಾಯಿ, ಗೋಧಿ ಖರೀದಿಗೆ 33 ಸಾವಿರ ಕೋಟಿ ರೂಪಾಯಿ, ಬೇಳೆಕಾಳುಗಳ ಖರೀದಿಗೆ 10.05 ಕೋಟಿ ರೂಪಾಯಿ ಮೀಸಲಿಡಲಾಗಿದೆ.

ಬೆಂಬಲ ಬೆಲೆ:
ಬೆಂಬಲ ಬೆಲೆ ಕುರಿತು ನಡೆಯುತ್ತಿರುವ ಹೋರಾಟ ಇನ್ನು ನಿಂತಿಲ್ಲ. ಇದೀಗ ಕನಿಷ್ಠ ಬೆಂಬಲ ಬೆಲೆ ಏರಿಕೆ ಮಾಡುತ್ತಿರುವುದಾಗಿ ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ ಮಂಡನೆ ವೇಳೆ ಹೇಳಿದ್ದಾರೆ. ಈ ನಿರ್ಧಾರ ಸದ್ಯ ಪ್ರತಿಭಟನಾ ನಿರತ ರೈತರಿಗೆ ಕೊಂಚ ಸಮಾಧಾನ ನೀಡಲಿದೆ.

ಕೃಷಿ ಸಾಲ:
ಕೃಷಿ ಸಾಲದ ಮೊತ್ತವನ್ನು 16.5 ಲಕ್ಷ ಕೋಟಿಗೆ ರೂಪಾಯಿಗೆ ವಿಸ್ತರಿಸಲಾಗಿದೆ. ಈ ಮೂಲಕ ಕೃಷಿಕರಿಗೆ ಸುಲಭ ಹಾಗೂ ಕಡಿಮೆ ಬಡ್ಡಿ ಸಾಲಕ್ಕೆ  ಯಾವುದೇ ಅಡಚಣೆಯಾಗದಂತೆ ನೋಡಿಕೊಳ್ಳಲಾಗಿದೆ.

ಕೃಷಿ ನಿರಾವರಿ-ಬೆಳೆ ವಿಮೆ
ಕೃಷಿ ಎದುರಿಸುತ್ತಿರುವ ಬಹುದೊಡ್ಡ ಸಮಸ್ಯೆಗಳಲ್ಲಿ ನೀರಾವರಿ ಸಮಸ್ಯೆ ಹಾಗೂ ಫಸಲು ಕೂಡ ಒಂದಾಗಿದೆ. ಹೀಗಾಗಿ ಕೃಷಿ ನೀರಾವರಿಗೆ ಹೆಚ್ಚುವರಿಯಾಗಿ 5,000 ಕೋಟಿ ರೂಪಾಯಿ ತೆಗೆದಿಡಲಾಗಿದೆ. ಇನ್ನು ಬೆಳೆದ ಫಲಸು ಪ್ರವಾಹ ಸೇರಿದಂತೆ ಹಲವು ಕಾರಣಗಳಿಂದ ನಷ್ಟವಾಗುತ್ತಿರುವುದನ್ನು ಸಾಮಾನ್ಯವಾಗಿ ಕಾಣುತ್ತಿದ್ದೇವೆ. ಹೀಗಾಗಿ ಬೆಳೆ ವಿಮೆ ಯೋಜನೆಯನ್ನು ವಿಸ್ತರಿಸಲಾಗಿದೆ.

ಪಶುಸಂಗೋಪನೆ ಹಾಗೂ ಮೀನುಗಾರಿಕೆಗೆ 40,000 ಕೋಟಿ ರೂಪಾಯಿ ತೆಗೆದಿಡಲಾಗಿದೆ. ದೇಶದ 5 ಮೀನುಗಾರಿಕಾ ಬಂದರನ್ನು ಅಭಿವೃದ್ಧಿಗೊಳಿಸುವುದಾಗಿ ಘೋಷಿಸಲಾಗಿದೆ. ಕೃಷಿಕರ ಆರ್ಥಿಕ ಸಬೀಲಕರಣಕ್ಕೆ ನೀತಿ ರೂಪಿಸಲಾಗಿದೆ. 

click me!