ಮನೆ ಕಳೆದುಕೊಂಡ ಯೋಧ ಮೊಹಮ್ಮದ್ ಅನೀಸ್‌ ನೆರವಿಗೆ ನಿಂತ ಬಿಎಸ್‌ಎಫ್‌

By Kannadaprabha NewsFirst Published Mar 1, 2020, 10:49 AM IST
Highlights

ಉದ್ರಿಕ್ತರು ಹಚ್ಚಿದ್ದ ಬೆಂಕಿಗೆ ಮನೆ ಕಳೆದುಕೊಂಡ ಯೋಧ ಮೊಹಮ್ಮದ್‌ ಅನೀಸ್‌ಗೆ ಮನೆ ನಿರ್ಮಿಸಿ ಕೊಡಲಾಗುವುದು ಎಂದು ಬಿಎಸ್‌ಎಫ್‌ ತಿಳಿಸಿದೆ

ನವದೆಹಲಿ (ಮಾ.01): ಗಲಭೆ ವೇಳೆ ‘ಇಲ್ಲಿ ಬಾ ಪಾಕಿಸ್ತಾನಿ, ನಾವು ನಿಮಗೆ ಪೌರತ್ವ ನೀಡುತ್ತೇವೆ’ ಎಂದು ಕೂಗಿ ಉದ್ರಿಕ್ತರು ಹಚ್ಚಿದ್ದ ಬೆಂಕಿಗೆ ಮನೆ ಕಳೆದುಕೊಂಡ ಯೋಧ ಮೊಹಮ್ಮದ್‌ ಅನೀಸ್‌ಗೆ ಮನೆ ನಿರ್ಮಿಸಿ ಕೊಡಲಾಗುವುದು ಎಂದು ಬಿಎಸ್‌ಎಫ್‌ ತಿಳಿಸಿದೆ.

ಏಪ್ರಿಲ್‌ನಲ್ಲಿ ಅನೀಸ್‌ಗೆ ಮದುವೆ ನಿಶ್ಚಯವಾಗಿದ್ದು, ಆ ವೇಳೆಗೆ ಮನೆ ನಿರ್ಮಾಣ ಮಾಡಿ ಅವರಿಗೆ ಮದುವೆ ಉಡುಗೊರೆ ನೀಡಲಾಗುತ್ತದೆ. ಜತೆಗೆ ಮದುವೆ ತಯಾರಿಗೆ ಶೀಘ್ರವೇ ಅವರನ್ನು ದೆಹಲಿಗೆ ವರ್ಗಾವಣೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪುಲ್ವಾಮ ದಾಳಿಕೋರಗೆ ಆಶ್ರಯ ಕೊಟ್ಟಿದ್ದವ ಅರೆಸ್ಟ್‌...

ಮಾಧ್ಯಮ ವರದಿಗಳ ಮೂಲಕ ಅನೀಸ್‌ ಅವರ ಮನೆ ಧ್ವಂಸದ ವಿಚಾರ ಬಿಎಸ್‌ಎಫ್‌ ಅಧಿಕಾರಿಗಳಿಗೆ ಗೊತ್ತಾಗಿದ್ದು, ಅವರ ಮನೆಗೆ ಭೇಟಿ ನೀಡಿ ಎಲ್ಲಾ ಸಹಾಯ ಮಾಡುವ ಭರವಸೆಯನ್ನು ನೀಡಿದ್ದಾರೆ. ನಾವು ಯೋಧನ ಕಟುಂಬಕ್ಕೆ ಸಹಾಯ ಮಾಡಲು ನಿರ್ಧರಿಸಿದ್ದು, ನಮ್ಮ ಕಲ್ಯಾಣ ನಿಧಿಯಿಂದ ಹತ್ತು ಲಕ್ಷ ರುಪಾಯಿ ನೀಡಲು ತೀರ್ಮಾನಿಸಿದ್ದೇವೆ. ನಮ್ಮ ಎಂಜಿನಿಯರಿಂಗ್‌ ವಿಭಾಗ ಹದಿನೈದು ದಿನದೊಳಗೆ ಮನೆಯನ್ನು ಮರು ನಿರ್ಮಾಣ ಮಾಡಿ ಕೊಡಲಿದೆ ಎಂದು ಬಿಎಸ್‌ಎಫ್‌ ಡಿಐಜಿ ಪುಷ್ಪೇಂದ್ರ ರಾಥೋಡ್‌ ಹೇಳಿದ್ದಾರೆ.

2013ರ ಬ್ಯಾಚ್‌ನ ಯೋಧರಾಗಿರುವ ಅನೀಸ್‌, ಪಶ್ಚಿಮ ಬಂಗಾಳದಲ್ಲಿ ಹಾಗೂ ಒಡಿಶಾದಲ್ಲಿ ನಕ್ಸಲ್‌ ವಿರೋಧಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಗಲಭೆಯಲ್ಲಿ ಮನೆ ಧ್ವಂಸವಾಗಿದ್ದರೂ ಕೂಡ ಇದರ ಬಗ್ಗೆ ಒಂದೇ ಇಂದು ಮಾತನ್ನು ನಮ್ಮ ಬಳಿ ಹೇಳಿರಲಿಲ್ಲ.

click me!