ಕೇದಾರನಾಥದಲ್ಲಿ ಅಣ್ಣ ತಮ್ಮನ ಸಮಾಗಮ: ಮುಖಾಮುಖಿಯಾದ ರಾಹುಲ್, ವರುಣ್ ಗಾಂಧಿ !

By Kannadaprabha NewsFirst Published Nov 8, 2023, 11:21 AM IST
Highlights

ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಹಾಗೂ ಅವರ ಸಹೋದರ ಸಂಬಂಧಿ, ಬಿಜೆಪಿ ಸಂಸದ ವರುಣ್ ಗಾಂಧಿ ಮಂಗಳವಾರ ಕೇದಾರನಾಥ ದೇವಸ್ಥಾನದಲ್ಲಿ ಪರಸ್ಪರ ಭೇಟಿಯಾಗಿದ್ದಾರೆ. ಪರಸ್ಪರ ಅಷ್ಟೇನೂ ಉತ್ತಮ ಬಾಂಧವ್ಯ ಹೊಂದಿರದ ಇಬ್ಬರೂ ನಾಯಕರು ದೇವಸ್ಥಾನಕ್ಕೆಂದು ಬಂದಿದ್ದಾಗ ಮುಖಾಮುಖಿಯಾಗಿದ್ದಾರೆ.

ಕೇದಾರನಾಥ್: ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಹಾಗೂ ಅವರ ಸಹೋದರ ಸಂಬಂಧಿ, ಬಿಜೆಪಿ ಸಂಸದ ವರುಣ್ ಗಾಂಧಿ ಮಂಗಳವಾರ ಕೇದಾರನಾಥ ದೇವಸ್ಥಾನದಲ್ಲಿ ಪರಸ್ಪರ ಭೇಟಿಯಾಗಿದ್ದಾರೆ. ಪರಸ್ಪರ ಅಷ್ಟೇನೂ ಉತ್ತಮ ಬಾಂಧವ್ಯ ಹೊಂದಿರದ ಇಬ್ಬರೂ ನಾಯಕರು ದೇವಸ್ಥಾನಕ್ಕೆಂದು ಬಂದಿದ್ದಾಗ ಮುಖಾಮುಖಿಯಾಗಿದ್ದಾರೆ.

ಈ ವೇಳೆ ಅವರು ಉಭಯ ಕುಶಲೋಪರಿ ವಿಚಾರಿಸಿಕೊಂಡಿದ್ದಾರೆ ಹಾಗೂ ರಾಜಕೀಯ ಚರ್ಚೆ ನಡೆಸಿಲ್ಲ. ಬದಲಾಗಿ ವರುಣ್ ( Varun Gandhi) ಮಗಳ ಬಗ್ಗೆ ರಾಹುಲ್ ಪ್ರಶಂಸೆಯ ಮಾತುಗಳಾಡಿದರು ಎಂದು ಮೂಲಗಳು ಹೇಳಿವೆ. ಆದರೆ ಇತ್ತೀಚೆಗೆ ವರುಣ್, ಬಿಜೆಪಿ ಸಭೆಗಳಲ್ಲಿ ಕಾಣಿಸಿಕೊಂಡಿಲ್ಲ ಹಾಗೂ ಅವರು ಪಕ್ಷದೊಂದಿಗೆ ಕೆಲ ವಿಚಾರದಲ್ಲಿ ಭಿನ್ನಾಭಿಪ್ರಾಯ ಹೊಂದಿದ್ದಾರೆ ಎಂಬ ಕಾರಣಕ್ಕೆ ಈ ಭೇಟಿ ಊಹಾಪೋಹಗಳಿಗೆ ಕಾರಣವಾಗಿವೆ.

Latest Videos

2 ರಾಜ್ಯಗಳಲ್ಲಿ ಭರ್ಜರಿ ಮತದಾನ: ಛತ್ತೀಸ್‌ಗಢದಲ್ಲಿ ಶೇ.71, ಮಿಜೋರಂನಲ್ಲಿ ಶೇ.77 ಮತದಾನ

ಅಲಿಗಢ ಹೆಸರು ಹರಿಗಢ ಎಂದು ಬದಲಿಸಲು ಸರ್ಕಾರಕ್ಕೆ ಶಿಫಾರಸು

ಲಖನೌ: ಅಲಹಾಬಾದ್‌ ಹಾಗೂ ಫೈಜಾಬಾದ್ ಬಳಿಕ ನಗರಗಳ ಹೆಸರು ಬದಲಾಯಿಸುವಿಕೆ ಉತ್ತರ ಪ್ರದೇಶದಲ್ಲಿ ಮುಂದುವರೆದಿದ್ದು, ಇದೀಗ ಅಲಿಗಢ ನಗರದ ಹೆಸರನ್ನು 'ಹರಿಗಢ' (Harigarh) ಎಂದು ಬದಲಿಸಬೇಕೆಂದು ಅಲಿಗಢ ( Aligarh) ಮಹಾನಗರಪಾಲಿಕೆ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಸೋಮವಾರ ನಡೆದ ಸಭೆಯಲ್ಲಿ ನಗರದ ಮೇಯರ್ ಸಲ್ಲಿಸಿದ ಪ್ರಸ್ತಾವನೆಗೆ ಎಲ್ಲ ಕಾರ್ಪೋರೇಟರ್‌ಗಳು ಸಮ್ಮತಿ ನೀಡಿದ್ದಾರೆ. ಸರ್ಕಾರ ಒಪ್ಪಿದರೆ ನಗರದ ಮರುನಾಮಕರಣ ಯಶಸ್ವಿಯಾಗಲಿದೆ. 

ಬಿಹಾರದಲ್ಲಿ 64% ಕುಟುಂಬಗಳ ಆದಾಯ 10 ಸಾವಿರಕ್ಕಿಂತ ಕಮ್ಮಿ: ಮೀಸಲು ಮಿತಿ ಶೇ.65ಕ್ಕೆ ಹೆಚ್ಚಿಸಲು ನಿತೀಶ್‌ ಒಲವು

ಈ ಮುಂಚೆ ಅಲಿಗಢಕ್ಕೆ ರಾಮಗಢ ಎಂದು ಹೆಸರಿತ್ತು ಎಂದು ಇತಿಹಾಸ ಹೇಳುತ್ತದೆ. 1700ರಲ್ಲಿ ಮುಸ್ಲಿಂ ಅರಸರ ಅಳ್ವಿಕೆ ವೇಳೆ ನಗರದ ಹೆಸರು ಅಲಿಗಢ ಎಂದು ಬದಲಾಗಿತ್ತು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ಬಳಿಕ 2019ರಲ್ಲಿ ಅಲಹಾಬಾದ್ ಹೆಸರನ್ನು ಪ್ರಯಾಗ್‌ರಾಜ್
ಎಂದು ಮರುನಾಮಕರಣ ಮಾಡಿತ್ತು.

ಸಂಸದೆ ಮಹುವಾರಿಂದ ಬೆದರಿಕೆ: ವಕೀಲ ದೇಹದ್ರಾಯ್ ದೂರು

ನವದೆಹಲಿ: ಪ್ರಶ್ನೆಗಾಗಿ ಲಂಚ ಪ್ರಕರಣದ ಆರೋಪಿ ಟಿಎಂಸಿ ಸಂಸದೆ ಮಹುವಾ ಮೊಯಿತಾ ನ.5 ಹಾಗೂ 6ರಂದು ಅಕ್ರಮವಾಗಿ ತನ್ನ ಮನೆಗೆ ಪ್ರವೇಶಿಸಿ, ಮನೆಯ ಸಿಬ್ಬಂದಿಗೆ ಬೆದರಿಕೆ ಒಡ್ಡಿದ್ದಾರೆ ಎಂದು ಸುಪ್ರೀಂಕೋರ್ಟ್ ವಕೀಲ ಜೈಅನಂತ್‌ ದೇಹದ್ರಾಯ್ ದಿಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಮಹುವಾ ಅವರು ಉದ್ಯಮಿ ದರ್ಶನ್ ಹೀರಾನಂದಾನಿ ಅವರಿಂದ ಲಂಚ ಪಡೆದುಕೊಂಡಿದ್ದಾರೆ ಎಂದು ದೇಹದ್ರಾಯ್ ಹಾಗೂ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಆರೋಪಿಸಿದ್ದರು. ಜೈ ಅನಂತ್ ಅವರು ಮಹುವಾ ಅವರ ಮಾಜಿ ಪ್ರಿಯಕರ ಕೂಡ ಹೌದು. ಈ ನಡುವೆ, ಇಂದು ಸಂಸತ್ತಿನ ನೈತಿಕ ಸಮಿತಿ ಸಭೆ ಸೇರಿ ಮಹುವಾ ವಿರುದ್ಧ ಕ್ರಮಕ್ಕೆ ಸ್ಪೀಕರ್‌ಗೆ ಶಿಫಾರಸು ಮಾಡುವ ಸಾಧ್ಯತೆ ಇದೆ.

2018ರ ಪಟಾಕಿ ನಿಷೇಧ ಇಡೀ ದೇಶಕ್ಕೆ ಅನ್ವಯ: ಸುಪ್ರೀಂಕೋರ್ಟ್‌

click me!