ಭೋಪಾಲ್(ಮಾ.20): ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ ತಲೆತಗ್ಗಿಸುವ ಘಟನೆ ನಡೆದಿದೆ. ಇಲ್ಲಿ ಸೋದರ ಸಂಬಂಧಿ ಮಹಿಳೆಗೆ ಕಿರುಕುಳ ನೀಡಿದ್ದಾರೆ. ಸಹೋದರಿ ಪ್ರತಿಭಟಿಸಿದಾಗ, ಸಹೋದರರು ಅವಳನ್ನು ತೀವ್ರವಾಗಿ ಥಳಿಸಿದ್ದಾರೆ. ಅಕೆಗೆ ಕಪಾಳಮೋಕ್ಷ ಮಾಡಿ, ಕೋಲಿನಿಂದ ಬಾರಿಸಿ ಮತ್ತು ಬೂಟುಗಳಿಂದ ಒದ್ದಿದ್ದಾರೆ. ಅಷ್ಟೇ ಅಲ್ಲ ಯುವಕರು ಆಕೆಯನ್ನು ರಸ್ತೆಯಲ್ಲಿ ಎಳೆದೊಯ್ದು ಬಟ್ಟೆ ಹರಿದಿದ್ದಾರೆ. ಮಹಿಳೆ ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಘಟನೆಯ ವಿಡಿಯೋ ವೈರಲ್ ಆಗಿದೆ.
ಮಾಹಿತಿ ಪ್ರಕಾರ, ಈ ಘಟನೆ ನರವಾರ ಪೇಟೆಯಲ್ಲಿ ನಡೆದಿದೆ. ಮಹಿಳೆ ಶನಿವಾರ ಮೇಕೆ ಮೇಯಿಸಲು ಕಾಡಿಗೆ ಹೋಗುತ್ತಿದ್ದಳು. ದಾರಿಯಲ್ಲಿ ಆಕೆಗೆ ತನ್ನ ಸಂಬಂಧಿಕರಾದ ಜಿತೇಂದ್ರ ಮತ್ತು ರಮೇಶ್ ಕುಶ್ವಾಹ ಕಾಣಿಸಿದ್ದಾರೆ. ಇಬ್ಬರೂ ತಂಗಿಯ ಮೇಲೆ ಬಹಳ ದಿನಗಳಿಂದ ಕೆಟ್ಟ ಕಣ್ಣು ಇಟ್ಟಿದ್ದರು. ಶನಿವಾರ ಆಕೆ ಒಬ್ಬಂಟಿಯಾಗಿರುವುದನ್ನು ನೋಡಿ ಇಬ್ಬರಿಗೂ ಕಿರುಕುಳ ನೀಡುವ ಅವಕಾಶ ಸಿಕ್ಕಿದೆ. ನಡುರಸ್ತೆಯಲ್ಲೇ ಆಕೆಗೆ ಕಿರುಕುಳ ನೀಡಲಾರಂಭಿಸಿದ್ದಾರೆ. ಮಹಿಳೆ ತುಂಬಾ ಹೆದರಿ ಹೇಗೋ ಪ್ರಾಣ ಉಳಿಸಿಕೊಳ್ಳಲು ಓಡಿದ್ದಾಳೆ.
Sexual Assault: ಪುರುಷ ಅಂಗವನ್ನು ಉಜ್ಜುವುದು ಅತ್ಯಾಚಾರಕ್ಕೆ ಸಮವೆಂದ ಮೇಘಾಲಯ ಕೋರ್ಟ್
ಪೊಲೀಸರ ಬಳಿ ಹೋಗದಂತೆ ಬೆದರಿಕೆ
ಸ್ವಲ್ಪ ಸಮಯದ ನಂತರ ಮಹಿಳೆ ಚೇತರಿಸಿಕೊಂಡಾಗ, ಪೊಲೀಸರಿಗೆ ದೂರು ನೀಡಲು ಯೋಚಿಸಿದಳು. ಆಕೆ ಪೊಲೀಸ್ ಠಾಣೆಗೆ ತೆರಳುತ್ತಿದ್ದಾಗ ದಾರಿಯಲ್ಲಿ ಮತ್ತೆ ಆರೋಪಿಗಳು ಆಕೆಯನ್ನು ಸುತ್ತುವರಿದಿದ್ದಾರೆ. ಈ ವೇಳೆ ಆರೋಪಿಯ ತಾಯಿಯೂ ಜತೆಗಿದ್ದರು. ಮೂವರು ಸಂತ್ರಸ್ತೆಗೆ ಬೆದರಿಕೆ ಹಾಕಿದ್ದಾರೆ ಮತ್ತು ಪೊಲೀಸರನ್ನು ಸಂಪರ್ಕಿಸದಂತೆ ಕೇಳಿಕೊಂಡಿದ್ದಾರೆ. ಆಕೆ ಒಪ್ಪದಿದ್ದಾಗ ಆರೋಪಿ ಯುವಕ ಆಕೆಯ ಮೇಲೆ ಮುಗಿಬಿದ್ದಿದ್ದಾನೆ. ಆಕೆಗೆ ಕಪಾಳಮೋಕ್ಷ ಮಾಡಿ, ಒದ್ದಿದ್ದಾರೆ ಮತ್ತು ಕೋಲುಗಳಿಂದ ಹೊಡೆದು, ರಸ್ತೆಯಲ್ಲಿ ಎಳೆದೊಯ್ದು ಬಟ್ಟೆ ಹರಿದಿದ್ದಾರೆ. ಈ ವೇಳೆ ಆರೋಪಿಯ ತಾಯಿಯೂ ತನ್ನ ಮಗಳಿಗೆ ಕಪಾಳಮೋಕ್ಷ ಮಾಡಿದ್ದಾಳೆ.
Sexual Harassment: ಕನ್ನಡ ಚಿತ್ರರಂಗದ ಖ್ಯಾತ ನಟಿಯ ಸಹೋದರನ ವಿರುದ್ಧ ರೇಪ್ ಕೇಸ್ ದಾಖಲು
ಯಾರೂ ರಕ್ಷಣೆಗೆ ಧಾವಿಸಲಿಲ್ಲ
ಆಸುಪಾಸಿನಲ್ಲಿದ್ದ ಜನ ನಡುರಸ್ತೆಯಲ್ಲಿ ನಡೆಯುತ್ತಿದ್ದ ಈ ಜಗಳವನ್ನು ನೋಡುತ್ತಲೇ ಇದ್ದರು. ಯುವಕರಿಂದ ಮಹಿಳೆಯನ್ನು ಯಾರೂ ರಕ್ಷಿಸಲಿಲ್ಲ. ಇದಾದ ಬಳಿಕ ಮತ್ತೆ ಮಹಿಳೆ ಪ್ರಾಣ ಉಳಿಸಿಕೊಂಡು ಠಾಣೆಗೆ ಬಂದು ಆರೋಪಿಗಳ ವಿರುದ್ಧ ದೂರು ನೀಡಿದ್ದಾಳೆ. ಮಹಿಳೆಯ ದೂರಿನ ಮೇರೆಗೆ ಪೊಲೀಸರು ಆರೋಪಿ ಸಹೋದರರ ವಿರುದ್ಧ ಕಿರುಕುಳ, ದೌರ್ಜನ್ಯ, ಹಲ್ಲೆ ಮತ್ತು ಕೊಲೆ ಬೆದರಿಕೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ