ಭಾರತ-ಚೀನಾ ಗಡಿ ಬಳಿ ಲಾರಿ ಚಲಿಸುತ್ತಿದ್ದ ವೇಳೆ ಸೇತುವೆ ಕುಸಿತ; ಮೂವರು ಗಂಭೀರ ಗಾಯ!

By Suvarna News  |  First Published Jun 22, 2020, 11:05 PM IST

ಚೀನಾ ಗಡಿ ಬಳಿ ಸೇತುವೆ ಕುಸಿದ ಕಾರಣ ಜೆಸಿಬಿ ಹೊತ್ತ ಲಾರಿ ಪಾತಾಳಕ್ಕೆ ಬಿದ್ದಿದೆ. ಈ ಅಪಘಾತದಿಂದ ಮೂವರು ಗಂಭೀರಗಾಯಗೊಂಡಿದ್ದಾರೆ. ಬೆಚ್ಚಿ ಬೀಳಿಸುವ ಸೇತುವೆ ಕುಸಿತದ ವಿಡಿಯೋ ವೈರಲ್ ಆಗಿದೆ.


ಉತ್ತರಖಂಡ(ಜೂ.22): ಭಾರತ ಹಾಗೂ ಚೀನಾ ಗಡಿ ಬಳಿಯ ಸೇತುವೆ ಮೇಲೆ ಭಾರಿ ಗಾತ್ರದ ಲಾರಿಯೊಂದು ದಾಟುವ ಪ್ರಯತ್ನ ಮಾಡಿದೆ. ಇನ್ನೇನು ದಡ ಸೇರಬೇಕು ಅನ್ನುವಷ್ಟರಲ್ಲೇ ಭಾರ ತಡೆಯಲಾರದೆ ಸೇತುವೆ ಕುಸಿದಿದೆ. ಇದರಿಂದ ಮೂವರು ಗಂಭೀರ ಗಾಯಗೊಂಡಿದ್ದಾರೆ. ಸ್ಥಳೀಯರು ಮೂವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ದ್ವೀಪ ನಮ್ಮದೆಂದು ಶಿಪ್ ಕಳಿಸಿದ ಚೀನಾಕ್ಕೆ ಜಪಾನ್ ಕೊಟ್ಟ 'ಬಹುಮಾನ'!..

Tap to resize

Latest Videos

ಉತ್ತರಖಂಡದ ಬಳಿ ಚೀನಾ ಜೊತೆ ಗಡಿ ಹಂಚಿಕೊಂಡಿರುವ ಲೀಲಂ ಜೋಹರ್ ವ್ಯಾಲಿಯ ಮಿಲಂ ರೋಡ್‌ನಲ್ಲಿ ಈ ಅಪಘಾತ ನಡೆದಿದೆ. ಕಾಮಗಾರಿಗಾಗಿ ಜೆಸಿಬಿ ಹೊತ್ತ ಲಾರಿ ಸೇತುವೆ ಬಳಿ ನಿಧಾನವಾಗಿ ದಾಟಲು ಪ್ರಯತ್ನ ಮಾಡಿದೆ. ಬಹುತೇಕ ಸೇತುವೆ ದಾಟಿದ ಲಾರಿ, ಇನ್ನೊಂದು ನಿಮಿಷದಲ್ಲಿ ಸಂಪೂರ್ಣ ಸೇತುವೆ ದಾಟಿ ದಡ ಸೇರುತ್ತಿತ್ತು. ಆದರೆ ಭಾರ ತಡೆಯಲಾಗದೆ ಸೇತುವೆ ಕುಸಿದಿದೆ.

 

:-On June 22, ~9:00am, imp bridge in Pithoragrah on Munsyari-Milam road COLLAPSED when driver of heavy trala truck carrying poclain machine tried to cross Sanergad despite warning. pic.twitter.com/XuQqvsoCl0

— SANDRP (@Indian_Rivers)

ಘಟನೆಯಲ್ಲಿ ಲಾರಿ ಚಾಲಕ, ಲಾರಿ ಕ್ಲೀನರ್ ಹಾಗೂ ಲಾರಿ ಹಿಂಬಾಗದಲ್ಲಿ ನಡೆದುಕೊಂಡು ಬಂದ ಲಾರಿ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸೇತುವೆ ಕುಸಿದ ಕಾರಣ ಲಾರಿ ಕಂದಕ್ಕೆ ಉರುಳಿದೆ. ಸ್ಥಳೀಯರು ತಕ್ಷಣವೇ ನೆರವಿಗೆ ಧಾವಿಸಿದ್ದಾರೆ. ಹೀಗಾಗಿ ಗಂಭೀರ ಗಾಯಗೊಂಡ ಮೂವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

click me!