ಕೊರೋನಾ ಕಾರಣಕ್ಕೆ ಈ ಸಂಶೋಧನೆ/ ಸೆನ್ಸಾರ್ ಅಳವಡಿಕೆ ಮಾಡಿ ಘಂಟೆ ನಾದ /ಮಂಡಸೂರ್ ದೇವಾಲಯದಲ್ಲಿ ವಿಶಿಷ್ಟ ತಂತ್ರಜ್ಞಾನ/ ಮುಸ್ಲಿಂ ತಂತ್ರಜ್ಞನಿಂದ ಹಿಂದು ದೇವಾಲಯಕ್ಕೆ ಕೊಡುಗೆ
ಭೋಪಾಲ್(ಜು. 22) ಕೊರೋನಾ ವೈರಸ್ ಆವರಿಸಿಕೊಂಡ ಮೇಲೆ ಹೊಸ ಹೊಸ ಸಂಶೋಧನೆಗಳು ಗೊತ್ತಿಲ್ಲದೇ ಆಗುತ್ತಿವೆ. ದೇವಾಲಯದಲ್ಲಿ ತೀರ್ಥ ವಿತರಣೆಗೂ ಸೆನ್ಸಾರ್ ಅಳವಡಿಕೆ ಮಾಡಿದ್ದು ಸುದ್ದಿಯಾಗಿತ್ತು. ಈ ವರದಿ ಮಧ್ಯ ಪ್ರದೇಶದಿಂದ ಬಂದಿದೆ.
ದೇವಾಲಯಗಳಿಗೆ ಶಬ್ದರಹಿತ ಜನರೇಟರ್ ಗಳನ್ನು ತಯಾರಿಸಿಕೊಡುತ್ತಿದ್ದ ಮುಸ್ಲಿಂ ಮೆಕಾನಿಕ್ ನಹ್ರು ಖಾನ್ ಮಧ್ಯಪ್ರದೇಶದ ಮಂಡಸೂರ್ ನ ಪ್ರಮುಖ ಶಿವ ದೇವಾಲಯಕ್ಕೆ ಸಂಪರ್ಕ ರಹಿತ (ಕಾಂಟ್ಯಾಕ್ಟ್ ಲೆಸ್) ಘಂಟೆಯೊಂದನ್ನು ಸಿದ್ಧ ಮಾಡಿ ನೀಡಿದ್ದಾರೆ.
ಕೊರೋನಾ ಕಾರಣಕ್ಕೆ ದೇವಾಲಯದಲ್ಲಿ ಕೈ ಮುಟ್ಟಿ ಘಂಟೆ ಬಾರಿಸುವಂತೆ ಇಲ್ಲ ಎಂಬ ನಿಯಮ ಹಾಕಲಾಗಿದೆ. ಹಾಗಾಗಿ ಇಲ್ಲಿ ಘಂಟೆಯನ್ನು ಮುಟ್ಟದೆಯೇ ನಾದ ಹೊರಡಿಸುವ ವ್ಯವಸ್ಥೆಯಾಗಿದೆ. ಈ ತಂತ್ರಜ್ಞಾನದ ಹಿಂದೆ ಇರುವುದು 62 ವರ್ಷದ ನಹ್ರು ಖಾನ್.
ಮಧ್ಯಪ್ರದೇಶದ ಪಶುಪತಿನಾಥ್ ದೇವಾಲಯದಲ್ಲಿ ಈ ಘಂಟೆ ಕಾಣಬಹುದು. ಎಲೆಕ್ಟ್ರಿಕ್ ಸೆನ್ಸಾರ್ ಅಳವಡಿಕೆ ಮಾಡಿರುವುದು ಘಂಟೆ ಮುಟ್ಟದೆನೆಯೇ ಬಾರಿಸಲು ನೆರವಾಗಿದೆ.
ಭಕ್ತರು ಘಂಟೆ ಇರುವ ಭಾಗದಿಂದ ಅರ್ಧ ಅಥವಾ ಒಂದು ಅಡಿಯಲ್ಲಿ ನಿಂತು ಕೈ ತೋರಿಸಿದರೂ ನಾದ ತನ್ನಿಂದ ತಾನೇ ಹೊರಹೊಮ್ಮುತ್ತದೆ. ಇದಕ್ಕೆ ಭಾರತವನ್ನು ವೈವಿಧ್ಯತೆಯಲ್ಲಿ ಏಕತೆಯ ದೇಶ ಎಂದು ಕರೆದಿರುವುದು.