ಸುತ್ತಲೂ ಕೃಷಿ ಜಮೀನು, 3 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಸೇತುವೆಗೆ ರಸ್ತೆಯೇ ಇಲ್ಲ

By Mahmad Rafik  |  First Published Aug 8, 2024, 1:10 PM IST

ಮುಖ್ಯಮಂತ್ರಿಗಳ ಗ್ರಾಮೀಣ ಸಡಕ್ ಯೋಜನೆಯಡಿ 3 ಕೋಟಿ ಕಿಲೋಮೀಟರ್ ಉದ್ದದ ರಸ್ತೆಯಡಿ ಸೇತುವೆ ನಿರ್ಮಾಣಗೊಂಡಿದೆ. ಸೇತುವೆ ನಿರ್ಮಾಣವಾಗಿದ್ದು, ಆದ್ರೆ ಯಾವುದೇ ರಸ್ತೆ ನಿರ್ಮಿಸಿಲ್ಲ. 


ಪಟನಾ: ಮಾನ್ಸೂನು ಆರಂಭವಾಗುತ್ತಿದ್ದಂತೆ ಬಿಹಾರದಲ್ಲಿ ಸಾಲು ಸಾಲು ಸೇತುವೆಗಳು ಧರಶಾಹಿಯಾದವು. ಒಂದಾದರ ನಂತರ ಮತ್ತೊಂದು ಎಂಬಂತೆ 12ಕ್ಕೂ ಅಧಿಕ ಸೇತುವೆಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದವು. ಕೆಲವು ಕಾಮಗಾರಿ ಹಂತದಲ್ಲಿದ್ರೆ, ಮತ್ತೊಂದು ಸೇತುವೆ ಉದ್ಘಾಟನೆಗೂ ಮುನ್ನವೇ ನೆಲ ಕಚ್ಚಿತ್ತು. ಇದೀಗ ರಸ್ತೆಯೇ ಇಲ್ಲದ ಜಾಗದಲ್ಲಿ ಸರ್ಕಾರ ಬರೋಬ್ಬರಿ ಮೂರು ಕೋಟಿ ರೂಪಾಯಿ ಖರ್ಚು ಮಾಡಿ ಸೇತುವೆ ನಿರ್ಮಿಸಲಾಗಿದೆ. ಇದೀಗ ಈ ಸೇತುವೆ ಫೋಟೋಗಳು ವೈರಲ್ ಆಗಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಬಿಹಾರ ರಾಜ್ಯದ ಅರಾರಿ ಜಿಲ್ಲೆಯ ಪರಮಾನಂದಪುರ ಗ್ರಾಮದ ವ್ಯಾಪ್ತಿಯಲ್ಲಿ ಈ ಸೇತುವೆಯನ್ನು ನಿರ್ಮಿಸಲಾಗಿದೆ. ಮುಖ್ಯಮಂತ್ರಿಗಳ ಗ್ರಾಮೀಣ ಸಡಕ್ ಯೋಜನೆಯಡಿ 3 ಕೋಟಿ ಕಿಲೋಮೀಟರ್ ಉದ್ದದ ರಸ್ತೆಯಡಿ ಸೇತುವೆ ನಿರ್ಮಾಣಗೊಂಡಿದೆ. ಸೇತುವೆ ನಿರ್ಮಾಣವಾಗಿದ್ದು, ಆದ್ರೆ ಯಾವುದೇ ರಸ್ತೆ ನಿರ್ಮಿಸಿಲ್ಲ. 

ಈ ಕುರಿತು ಪ್ರತಿಕ್ರಿಯಿಸಿರುವ ಪರಮಾನಂದಪುರದ ಗ್ರಾಮಸ್ಥರು, ಇಲ್ಲೊಂದು ನದಿ ಮಳೆಗಾಲದಲ್ಲಿ ಮಾತ್ರ ಹರಿಯುತ್ತಿದೆ. ಇನ್ನುಳಿದ ದಿನಗಳಲ್ಲಿ ಇಲ್ಲಿ ನೀರು ಸಹ ಇರಲ್ಲ. ಮಳೆಗಾಲದಲ್ಲಿ ಸಹಾಯವಾಗಲಿದೆ ಸೇತುವೆ ನಿರ್ಮಿಸಲಾಗಿದೆ. ಅದಕ್ಕೆ ಬೇಕಾದಷ್ಟು ಜಾಗವನ್ನು ಮಾತ್ರ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಆದ್ರೆ ರಸ್ತೆಗೆ ಬೇಕಾದ ಭೂಮಿಯನ್ನು ವಶಪಡಿಸಿಕೊಳ್ಳದ ಕಾರಣ ಬಿತ್ತನೆ ಮಾಡಲಾಗಿದೆ ಎಂದು ಹೇಳಿದ್ದಾರೆ. 

Tap to resize

Latest Videos

ಅರಾರಿಯಾ ಜಿಲ್ಲಾಧಿಕಾರಿ ಇನಾಯತ್ ಖಾನ್, ಈ ವಿಷಯ ನನ್ನ ಗಮನಕ್ಕೂ ಬಂದಿದ್ದು, ಸೇತುವೆ ನಿರ್ಮಾಣದ ಕುರಿತು ಮುಖ್ಯ ಕಾರ್ಯನಿರ್ವಾಹಕ ಇಂಜಿನೀಯರ್‌ ಅವರಿಂದ ವರದಿ ಕೇಳಿದ್ದೇನೆ. ಸಬ್ ಡಿವಿಷನಲ್ ಆಫಿಸರ್, ಸರ್ಕಲ್ ಆಫಿಸರ್ ಹಾಗೂ ಸಂಬಂಧಿಸಿದ ಇಂಜಿನೀಯರ್‌ಗಳಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ವಸ್ತುಚಿತ್ರಣದ ವರದಿ ನೀಡುವಂತೆ ಸೂಚಿಸಲಾಗಿದೆ. ವರದಿ ಬಂದ ಬಳಿಕ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಬಿಹಾರ ಸೇತುವೆ ವಿನ್ಯಾಸದಲ್ಲಿಯೇ ದೋಷ, ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಿತೀಶ್‌ ಕುಮಾರ್‌!

ರಸ್ತೆಗೆ ಭೂಮಿ ಪಡೆಯದೇ ಕೃಷಿ ಜಮೀನಿನಲ್ಲಿ ಹೇಗೆ ಸೇತುವೆ ನಿರ್ಮಾಣಕ್ಕೆ ಹೇಗೆ ಅನುಮತಿ ಹಾಗೂ ಅನುದಾನ ಬಿಡುಗಡೆ ಮಾಡಲಾಯ್ತು ಎಂಬುದರ ಕುರಿತು ಮಾಹಿತಿ ಪಡೆದುಕೊಂಡು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಇನಾಯತ್ ಖಾನ್ ಹೇಳಿದ್ದಾರೆ.

ಬಿಹಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಈ ಸೇತುವೆ ಸಾಕ್ಷಿಯಾಗಿದೆ. ಗುತ್ತಿಗೆದಾರರು, ಅಧಿಕಾರಿಗಳು ಸೇರಿದಂತೆ ಸ್ಥಳೀಯ ರಾಜಕೀಯ ಮುಖಂಡರು ಭಾಗಿಯಾಗಿರುವ ಸಾಧ್ಯತೆ ಇರುತ್ತದೆ. ಹಾಗಾಗಿ ಈ ಸಂಬಂಧ ತನಿಖೆ ನಡೆಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಎರಡು ವಾರದಲ್ಲಿ 12 ಸೇತುವೆ ಕುಸಿತ, 15 ಇಂಜಿನಿಯರ್‌ಗಳ ಸಸ್ಪೆಂಡ್ ಮಾಡಿದ ಬಿಹಾರ ಸರ್ಕಾರ!

click me!