ಕುದುರೆ ಇಲ್ಲದಿದ್ರೇನಂತೆ... ಕತ್ತೆ ಮೇಲೆ ದಿಬ್ಬಣ ಬಂದ ಮದುಮಗ

Published : Oct 28, 2022, 09:10 PM IST
ಕುದುರೆ ಇಲ್ಲದಿದ್ರೇನಂತೆ... ಕತ್ತೆ ಮೇಲೆ ದಿಬ್ಬಣ ಬಂದ ಮದುಮಗ

ಸಾರಾಂಶ

ಇಲ್ಲೊಂದು ಕಡೆ ವರ ಮದುವೆ ಮನೆಗೆ ಕತ್ತೆಯ ಮೇಲೇರಿ ಬರುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನವದೆಹಲಿ: ಭಾರತೀಯ ಮದುವೆ ಅಂದರೆ ಅಲ್ಲಿ ನೂರೆಂಟು ಸಂಪ್ರದಾಯಗಳಿರುತ್ತವೆ. ನಮ್ಮ ದೇಶ ಹೇಗೆ ವೈವಿಧ್ಯಮಯವೋ ಹಾಗೆ ಇಲ್ಲಿನ ಸಂಸ್ಕೃತಿ ಆಚಾರ ವಿಚಾರಗಳು ಕೂಡ ಒಂದು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನ ವಿಭಿನ್ನ, ಉತ್ತರದಲ್ಲಿರುವ ಮದುವೆ ಆಚರಣೆ ದಕ್ಷಿಣದಲ್ಲಿಲ್ಲ. ಹಾಗೆಯೇ ಪೂರ್ವದಲ್ಲಿರುವ ಆಚರಣೆ ಈಶಾನ್ಯದಲ್ಲಿಲ್ಲ. ಹೀಗಾಗಿ ಬೇರೆ ಬೇರೆ ಭಾಗದ ಮದುವೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ವೈರಲ್ ಆಗುತ್ತಿರುತ್ತವೆ. ಅದೇ ರೀತಿ ಇಲ್ಲೊಂದು ಕಡೆ ವರ ಮದುವೆ ಮನೆಗೆ ಕತ್ತೆಯ ಮೇಲೇರಿ ಬರುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಾಮಾನ್ಯವಾಗಿ ಉತ್ತರ ಭಾರತದ ಮದುವೆಗಳಲ್ಲಿ(Indian Wedding) ಮದುಮಗ ಕುದುರೆ ಮೇಲೆ ಬರುವುದು ಸಂಪ್ರದಾಯ. ಅದೊಂದು ಹೆಮ್ಮೆಯ ಸಂಕೇತವೂ ಹೌದಯ, ಆದರೆ ಇತ್ತೀಚೆಗೆ ಮದುವೆ ಮನೆಗೆ ಮದುಮಕ್ಕಳು ಹೇಗೆ ಬರುತ್ತಾರೆ ಎಂಬ ವಿಚಾರವೇ ಸಾಕಷ್ಟು ಟ್ರೆಂಡ್‌ಗೆ ಕಾರಣವಾಗಿದೆ. ಇದೇ ಕಾರಣಕ್ಕೆ ಒಬ್ಬೊಬ್ಬರು ಒಂದೊಂದು ರೀತಿಯ ಕ್ರಿಯೇಟಿವಿಟಿ ಪ್ರದರ್ಶಿಸುತ್ತಾರೆ.  ದುಡ್ಡಿದ್ದವರು ಹೆಲಿಕಾಪ್ಟರ್ (Helicopter) ಮೇಲೇರಿ ಮದುವೆ ಮನೆಗೆ ಬಂದರೆ ಇಲ್ಲದವರು ಸೈಕಲ್ (Cycle) ಮೇಲೇರಿ ಮದುವೆ ಮನೆಗೆ ಬಂದು ವಿಭಿನ್ನತೆ ಪ್ರದರ್ಶಿಸುತ್ತಾರೆ. ಕೆಲ ದಿನಗಳ ಹಿಂದೆ ಉತ್ತರಾಖಂಡ್‌ನ ವರನೋರ್ವ ಜೆಸಿಬಿ (JCB) ಮೂಲಕ ಮದುವೆ ಮನೆಗೆ ಬಂದ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. 

 

ಅದೇ ರೀತಿ ವಧುವೊಬ್ಬರು ಕುದುರೆಯೇರಿ ಬಂದು ವರ ಮಾತ್ರ ಕುದುರೆ (Horse) ಏರಿ ಬರುವ ಟ್ರೆಂಡ್‌ ಬ್ರೇಕ್ ಮಾಡಿದ್ದರು. ಹಾಗೆಯೇ ಈಗ ಕುದುರೆ ಏರಿ ಬರಬೇಕಾದ ವರ ಕತ್ತೆ ಏರಿ ಬಂದು ಸಂಪ್ರದಾಯ ಮುರಿದಿದ್ದಾರೆ. ಫನ್‌ಟಾಪ್ ಎಂಬ ಇನ್ಸ್ಟಾಗ್ರಾಮ್ (Instagram) ಪೇಜ್‌ನಿಂದ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. 

ಮಳೆಯನ್ನು ಲೆಕ್ಕಿಸದೇ ದಿಬ್ಬಣ ಹೊರಟವರ ಸಖತ್‌ ಸ್ಟೆಪ್... ಮದುವೆ ವಿಡಿಯೋ ವೈರಲ್‌

ಈ ವಿಡಿಯೋದ ಹಿನ್ನೆಲೆಯಲ್ಲಿ ಸಲ್ಮಾನ್ ಖಾನ್ ಅಭಿನಯದ ಬಾಲಿವುಡ್ ಸಿನಿಮಾ ಸಲ್ಮಾನ್-ಇ- ಇಷ್ಕ್ ಸಿನಿಮಾದ ತೇನು ಲೆಕೆ ಹಾಡು ಕೇಳಿ ಬರುತ್ತಿದೆ. ಅಲ್ಲದೇ 'ಗೋಡಿ ನಹಿ ತೋ ಗಡಿ ಸಹಿ' ಎಂದು ಈ ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ. 40 ಸಾವಿರಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಈ ವಿಡಿಯೋವನ್ನು ಹಿಂದಿ ಸಿನಿಮಾದ ಕೆಲ ಸೀನ್‌ಗಳನ್ನು ಸೇರಿಸಿ ಎಡಿಟ್ ಮಾಡಿ ಹಾಕಲಾಗಿದೆ. ವಿಡಿಯೋದ ಕೊನೆಯಲ್ಲಿ ಜಾಲಿ ಎಲ್‌ಎಲ್‌ಬಿ 2 ಸಿನಿಮಾದಲ್ಲಿ ಅರ್ಷದ್ ವರ್ಸಿಯ ಡೈಲಾಗ್ ಭಾಗ, 'ಯಾರು ಈ ಜನಗಳು, ಎಲ್ಲಿಂದ ಬಂದಿದ್ದಾರೆ' ಎಂದು ಕೇಳುವ ದೃಶ್ಯವನ್ನು ಸೇರಿಸಲಾಗಿದೆ. 

ಜೀವಂತ ಹಾವಿನೊಂದಿಗೆ ಮದುವೆ ದಿಬ್ಬಣ ಬಂದವರ ನಾಗಿಣಿ ಡಾನ್ಸ್ : ವಿಡಿಯೋ ವೈರಲ್‌

ಇತ್ತ ಕತ್ತೆ ಏರಿ ಬಂದ ವರನ ಮುಂದೆ ನೆಂಟರಿಷ್ಟರು ಕುಣಿಯುತ್ತಿದ್ದು, ಕೆಲವರು ಈ ದೃಶ್ಯವನ್ನು ತಮ್ಮ ಮೊಬೈಲ್‌ಗಳಲ್ಲಿ ಸೆರೆ ಹಿಡಿದರೆ ಮತ್ತೆ ಕೆಲವರು ವರನ ತಲೆಯ ಸುತ್ತ ಹಣವನ್ನು ಸುತ್ತಿ ದೃಷ್ಟಿ ತೆಗೆಯುತ್ತಿದ್ದಾರೆ. ಈ ವಿಡಿಯೋ ನೋಡಿದ ಕೆಲವರು ಎಂತೆಂಥಾ ಜನಗಳೆಲ್ಲಾ ಇದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು
ಮನೆ ಮುಂದೆ ದನ ಸೆಗಣಿ ಹಾಕಿದ್ದಕ್ಕೆ ಯುವಕನ ಕೊಲೆ