ಮದುವೆ ಮನೆ ಕೊರೋನಾ ಹಾಟ್‌ಸ್ಪಾಟ್‌ , ವಧು-ವರ ಸೇರಿ 43 ಜನ ಪಾಸಿಟಿವ್

Published : Jul 26, 2020, 06:58 PM ISTUpdated : Jul 26, 2020, 06:59 PM IST
ಮದುವೆ ಮನೆ ಕೊರೋನಾ ಹಾಟ್‌ಸ್ಪಾಟ್‌ , ವಧು-ವರ ಸೇರಿ 43 ಜನ ಪಾಸಿಟಿವ್

ಸಾರಾಂಶ

ಮದುವೆಮನೆಯಲ್ಲಿ ಪಾಲ್ಗೊಂಡವರಿಗೆಲ್ಲ ಕೊರೋನಾ/ ವಧು-ವರ ಸೇರಿ 43  ಜನರಿಗೆ ವಕ್ಕರಿಸಿದ ಮಹಾಮಾರಿ/  ಕೊರೋನಾ ಹಾಟ್ ಸ್ಟಾಟ್ ಆದ ಮ್ಯಾರೇಜ್/ ದಯವಿಟ್ಟು ಎಚ್ಚರಿಕೆ ತೆಗೆದುಕೊಳ್ಳಿ

ಕೇರಳ(ಜು. 26) ಮದುವೆ ಸಮಾರಂಭದಲ್ಲಿ ಎಚ್ಚರಿಕೆಯಿಂದ ಭಾಗವಹಿಸಿ ಎಂದು ಸರ್ಕಾರಗಳು ಮೇಲಿಂದ ಮೇಳೆ ಹೇಳಿಕೊಂಡೆ ಬಂದಿವೆ.  ಮದುಮಗ-ಮದುಮಗಳು ಸೇರಿ ಈ ಮದುವೆಯಲ್ಲಿ ಭಾಗವಹಿಸಿದ್ದ 43 ಜನರಿಗೆ ಕೊರೋನಾ ದೃಢವಾಗಿದೆ.

ಕೇರಳದ ಕಾಸರಗೋಡು ಜಿಲ್ಲೆ ಚೆಂಗಾಲಾದ ಮದುವೆ ಕೊರೋನಾ ಹಬ್ಬಲು ಕಾರಣವಾಗಿದೆ.  ಮದುವೆಯಲ್ಲಿ ಭಾಗವಹಿಸಿದ್ದ ಎಲ್ಲರೂ ಕ್ವಾರಂಟೈನ್ ಆಗುವಂತೆ ಕಾಸರಗೋಡು ಡಿಸಿ ತಿಳಿಸಿದ್ದಾರೆ.  ಜುಲೈ 17  ರಂದು ನಡೆದಿದ್ದ ಮದುವೆ ಕೊರೋನಾ ಹಾಟ್ ಸ್ಪಾಟ್ ಆಗಿ ಬದಲಾಗಿದೆ.

ಮಾಸ್ಕ್ ಧರಿಸದವರಿಗೆ ಕಿಮ್ ಶಾಕ್..ಅಬ್ಬಬ್ಬಾ

ಮದುವೆಯಲ್ಲಿ ಒಟ್ಟು ಎಷ್ಟು ಜನ ಭಾಗವಹಿಸಿದ್ದರು ಎಂಬ ಮಾಹಿತಿ ಕಲೆಹಾಕಲಾಗುತ್ತಿದೆ.  50 ಕ್ಕಿಂತ ಹೆಚ್ಚಿನ ಜನರು ಪಾಲ್ಗೊಳ್ಳಬಾರದು ಎಂಬ ನಿಯಮವನ್ನು ಇಲ್ಲಿ ಉಲ್ಲಂಘಿಸಿದಂತೆ ಕಂಡುಬರುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮದುವೆ ಸಮಾರಂಭಕ್ಕೆ ಸಂಬಂಧಿಸಿ ಪ್ರಕರಣ ದಾಖಲಿಸಿ ಮತ್ತು 10  ಸಾವಿರ ರೂ. ದಂಡ ವಿಧಿಸಿ ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದ್ದು ದಯವಿಟ್ಟು ಇಂಥ ಸಮಾರಂಭಗಳನ್ನು ಆದಷ್ಟು ದಿನ ಮುಂದಕ್ಕೆ ಹಾಕಿ ಎಂದು ಕೋರಿಕೊಂಡಿದ್ದಾರೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್