ನವದೆಹಲಿ: ಮದುವೆ ಎಂದರೆ ಅದು ಜೀವನವನ್ನೇ ಬದಲಾಯಿಸುವ ದಿನ. ಆ ದಿನ ವಧು ವರರು ಸಂಭ್ರಮದ ಜೊತೆ ಸೌಂದರ್ಯವೂ ಮುಖದಲ್ಲಿ ಕಳೆಕಟ್ಟಿ ಆಕರ್ಷಣೆಯ ಕೇಂದ್ರಬಿಂದುವಾಗಿರುತ್ತಾರೆ. ಆದರೆ ಇಲ್ಲೊಬ್ಬರು ವಧು ಮದುವೆ ದಿನ ಸಖತ್ ಆಗಿ ರೆಡಿ ಆಗುವುದರ ಜೊತೆ ಮದುವೆ ದಿನವೇ ಫುಶ್‌ಅಪ್ಸ್ ಮಾಡುವ ಮೂಲಕ ತಾನು ಯಾವ ಪುರುಷರಿಗೂ ಕಡಿಮೆ ಇಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ಮದುವೆ ಹೆಣ್ಣು ಫುಶ್‌ಅಪ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನ ತಮಾಷೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.
12 ಸೆಕೆಂಡುಗಳ ಈ ವಿಡಿಯೋದಲ್ಲಿ ಮದುವೆ ಹೆಣ್ಣು ಭಾರಿ ಗಾತ್ರದ ಲೆಹೆಂಗಾ ಧರಿಸಿ ಮಿನುಗುವ ಆಭರಣಗಳನ್ನು ತೊಟ್ಟು ಫುಶ್‌ಅಪ್ಸ್ ಮಾಡುವ ಮೂಲಕ ಎಲ್ಲರನ್ನು ದಂಗು ಬಡಿಸಿದ್ದಾರೆ. ಭಾರಿ ಆಭರಣ ಹಾಗೂ ಭಾರವಾದ ಲೆಹೆಂಗಾ ತಲೆ ಮೇಲೆ ಶಾಲು ಹಾಕಿಕೊಂಡು ಆಕೆ ಫುಶ್ ಅಪ್ ಮಾಡುತ್ತಿದ್ದಾರೆ.12 ಸೆಕೆಂಡುಗಳ ವೀಡಿಯೊವನ್ನು ಕೆಲವೇ ಗಂಟೆಗಳಲ್ಲಿ ಸಾವಿರಾರು ಜನರು ಹಂಚಿಕೊಂಡಿದ್ದಾರೆ.
ರಣಬೀರ್-ಅಲಿಯಾಗೆ ವೈವಾಹಿಕ ಸಲಹೆ ನೀಡಿದ KGF 2 ಅಧೀರ; ಸಂಜಯ್ ದತ್ ಹೇಳಿದ್ದೇನು?
ವಿಡಿಯೋ ನೋಡಿದ ನೆಟ್ಟಿಗರೊಬ್ಬರು ಆಕೆ ತನ್ನ ಅತ್ತೆ ಮಾವ ಸೇರಿದಂತೆ ಪತಿಯ ಕುಟುಂಬದವರಿಗೆ ಎಚ್ಚರಿಕೆ ನೀಡುತ್ತಿರಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಮದುವೆಗಳಲ್ಲಿ ಮೋಜು ಮಸ್ತಿ ಸಾಮಾನ್ಯ. ಮದುವೆ (Marriage) ಮನೆಯಲ್ಲಿ ಡ್ಯಾನ್ಸ್ (Dance0 ಮಾಡೋದು ಇತ್ತೀಚಿನ ಟ್ರೆಂಡ್. ಮದುಮಕ್ಕಳ ಕಸಿನ್ಸ್, ಫ್ರೆಂಡ್ಸ್ ಡ್ಯಾನ್ಸ್ ಫ್ಲೋರ್ ಚಿಂದಿ ಮಾಡ್ತಾರೆ. ಕೆಲವು ಮದುವೆಗಳಲ್ಲಿ ಮದುಮಕ್ಕಳೇ ಭರ್ಜರಿಯಾಗಿ ಡ್ಯಾನ್ಸ್ ಮಾಡ್ತಾರೆ. ಆದ್ರೆ ಈ ಮದುವೆಯಲ್ಲಿ ವಧುವಿನ ತಂದೆ (Father0ಯ ಮಾದಕ ಡ್ಯಾನ್ಸ್ ಎಲ್ಲರ ಗಮನ ಸೆಳೆದಿದ್ದು, ಸೋಷಿಯಲ್ ಮೀಡಿಯಾ (Social Media)ದಲ್ಲಿ ವೈರಲ್ (Viral) ಆಗಿದೆ.
ಹಿಂದಿನ ಕಾಲದಲ್ಲೆಲ್ಲಾ ಮದುವೆ (Marriage0ಯೆಂದ್ರೆ ಶಾಸ್ತ್ರ, ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ನಡೆಯುತ್ತಿತ್ತು. ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರ ಭಾಗವಹಿಸುತ್ತಿದ್ದರು. ಆದರೆ ಈಗ ಹಾಗಲ್ಲ ಕಾಲ ಬದಲಾಗಿದೆ. ಹಿಂದಿನ ಸಂಪ್ರದಾಯಗಳನ್ನು ಪಾಲಿಸುವುದರ ಜತೆಗೆ ಮನರಂಜನೆಗಾಗಿ ಒಂದಷ್ಟು ಮಾರ್ಪಾಡುಗಳನ್ನು ಮಾಡಲಾಗುತ್ತಿದೆ. ಅದ್ಧೂರಿ ಡೆಕೋರೇಷನ್, ಡ್ರೆಸ್ ಕೋಡ್ ಮೊದಲಾದವುಗಳನ್ನು ಮಾಡುತ್ತಾರೆ. ಅದರಲ್ಲೂ ಮದುವೆ ಮನೆಯಲ್ಲಿ ಡ್ಯಾನ್ಸ್ ಇತ್ತೀಚಿಗೆ ಸಾಕಷ್ಟು ಟ್ರೆಂಡ್ (Trend) ಆಗ್ತಿದೆ. ಕಸಿನ್ಸ್, ಫ್ರೆಂಡ್ಸ್ ಗ್ರ್ಯಾಂಡ್ ಡ್ಯಾನ್ಸ್ ಮೂಲಕ ಮದುಮಕ್ಕಳನ್ನು ಸ್ವಾಗತಿಸುತ್ತಾರೆ. ಕೆಲವೊಂದು ಮದುವೆಗಳಲ್ಲಿ ವರ-ವಧು ಸಹ ಡ್ಯಾನ್ಸ್ ಮಾಡಿ ಜನರನ್ನು ರಂಜಿಸುತ್ತಾರೆ. ಆದರೆ ಈ ಮದುವೆಯಲ್ಲಿ ವಧುವಿನ ತಂದೆ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದು ಎಲ್ಲರ ಗಮನ ಸೆಳೆದಿದೆ.
ಮದುವೆ ಮಂಟಪದಲ್ಲೇ ವಧುವರರಿಗೆ ಸಾರಾಯಿ ಕುಡಿಸಿದ ಸ್ನೇಹಿತರು
ಮಗಳ ಮದುವೆ ದಿನಕ್ಕಿಂತ ಅಪ್ಪ ಸಂತೋಷ ಪಡುವ ದಿನ ಬೇರೆ ಇದೆಯೇ? ಪ್ರಪಂಚದಲ್ಲಿರುವ ಪ್ರತಿ ತಂದೆಗೂ ಮಗಳ ಮದುವೆ (Marriage) ಎನ್ನುವುದು ಅತ್ಯಂತ ಸಂಭ್ರಮದ ದಿನ. ಹಾಗೆಯೇ ಇಲ್ಲೊಬ್ಬರು ತಂದೆ ತಮ್ಮ ಮಗಳ ಮದುವೆ ದಿನ ಫುಲ್ ಖುಷಿಯಾಗಿ ಡ್ಯಾನ್ಸ್ (Dance) ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ.
ನವ ವಧುವಿನ ಮದುವೆಯ ಸಂಭ್ರಮದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ Viral) ಆಗಿದೆ. ಮದುವೆಯ ಸಂಭ್ರಮದಲ್ಲಿ ಗಮನ ಸೆಳೆದಿದ್ದು ವಧುವಲ್ಲ, ವಧುವಿನ ತಂದೆ ಎನ್ನುವುದು ಸ್ಪೆಷಲ್ ವಿಚಾರ.ವಧುವಿನ ತಂದೆ ಪುಷ್ಪಾ ಸಿನಿಮಾದ ಊ ಅಂತಾವಾ ಹಾಡಿಗೆ ಡ್ಯಾನ್ಸ್ ಮಾಡಿದ್ದು, ವೀಡಿಯೋ ಎಲ್ಲೆಡೆ ವೈರಲ್ ಆಗಿದೆ. ಅನುಷಾ ವೆಡ್ಡಿಂಗ್ ಕೊರಿಯೋಗ್ರಫಿ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಲಾಗಿದ್ದು, 4 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ