ಮದುವೆ ಮಂಟಪದಲ್ಲೇ ಕುಸಿದು ಬಿದ್ದು ವಧು ಸಾವು

Published : May 12, 2022, 07:26 PM IST
ಮದುವೆ ಮಂಟಪದಲ್ಲೇ ಕುಸಿದು ಬಿದ್ದು ವಧು ಸಾವು

ಸಾರಾಂಶ

ಮದುವೆ ಮಂಟಪದಲ್ಲೇ ಕುಸಿದು ಬಿದ್ದು ವಧು ಸಾವು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಘಟನೆ  ವಿಷ ಸೇವಿಸಿ ಸಾವು ಎಂದ ವೈದ್ಯರು  

ವಿಶಾಖಪಟ್ಟಣಂ: ಆಂಧ್ರಪ್ರದೇಶದ ವಿಶಾಖಪಟ್ಟಣಂ (Visakhapatnam) ಜಿಲ್ಲೆಯಲ್ಲಿ ಮದುವೆಯಾಗಿ ಗಂಡನ ಮನೆ ಸೇರಬೇಕಾದ ವಧುವೊಬ್ಬಳು ಮಂಟಪದಲ್ಲೇ ಕುಸಿದು ಬಿದ್ದು ಪ್ರಾಣ ಬಿಟ್ಟ ಆಘಾತಕಾರಿ ಘಟನೆ ನಡೆದಿದೆ.  ವಧು ಮುಹೂರ್ತದ ಸಮಯಕ್ಕೆ ಸರಿಯಾಗಿ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಬುಧವಾರ ಘೋಷಿಸಿದ್ದಾರೆ. ಸೃಜನಾ ಮೃತಪಟ್ಟ ವಧು. ಆಕೆಯ ಸಾವಿನ ಸುದ್ದಿ ಹೊರಬಿದ್ದ ನಂತರ, ವಧು ಹಾಗೂ ವರ ಎರಡೂ ಕಡೆಯವರು ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರುಗಳನ್ನು ದಾಖಲಿಸಿಕೊಂಡಿದ್ದು, ಆಕೆಯ ಸಾವಿನ ಬಗ್ಗೆ ಪೊಲೀಸರು ತನಿಖೆ ನಡೆಸಲು ಪ್ರೇರೇಪಿಸಿದ್ದಾರೆ. 

ವರದಿಗಳ ಪ್ರಕಾರ ವಧು ಸೃಜನಾ (Srujana) ಅವರಿಗೆ ನಾಗೋತಿ ಶಿವಾಜಿ (Nagothi Sivaji) ಎಂಬುವವರೊಂದಿಗೆ ವಿವಾಹ ನಿಶ್ಚಯವಾಗಿತ್ತು.  ಉಪನಗರದ ಮಧುರವಾಡದಲ್ಲಿ ಬುಧವಾರ ರಾತ್ರಿ ಇವರ ವಿವಾಹ ನಡೆಯಬೇಕಿತ್ತು. ಮದುವೆಯ ಸಂಪ್ರದಾಯದ ಭಾಗವಾಗಿ ವಧು ವರರ ತಲೆಗೆ ಬೆಲ್ಲ ಮತ್ತು ಜೀರಿಗೆ ಪೇಸ್ಟ್ ಬಂಧುಗಳು ಹಾಕಿದರು ಇನ್ನೇನು ತಾಳಿ ಕಟ್ಟುವುದೊಂದು ಬಾಕಿ ಉಳಿದಿತ್ತು. ಆ ಸಮಯದಲ್ಲಿ ಇದ್ದಕ್ಕಿದ್ದಂತೆ ಹುಡುಗಿ ಕುಸಿದು ಬಿದ್ದಳು.

ಕೊರೋನಾಗೆ ಬಲಿಯಾದ ಮಗ, ಸೊಸೆಗೆ ತಾವೇ ಮುಂದೆ ನಿಂತು ಮದುವೆ ಮಾಡಿಸಿದ ಅತ್ತೆ-ಮಾವ, ಬಂಗಲೆ ಗಿಫ್ಟ್‌!
ಕೂಡಲೇ ಆಕೆಯ ಕುಟುಂಬಸ್ಥರು ಆಕೆಗೆ ಪ್ರಥಮ ಚಿಕಿತ್ಸೆ ನೀಡಲು ಪ್ರಯತ್ನಿಸಿದರೂ ಆಕೆ ಸ್ಪಂದಿಸಲಿಲ್ಲ. ಕೂಡಲೇ ಆಕೆಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ವೈದ್ಯರು ಆಕೆ ಅದಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಕಳೆದ ಮೂರು ದಿನಗಳಿಂದ ಮದುವೆ ಸಮಾರಂಭಗಳು ಮತ್ತು ತೀವ್ರವಾದ ಫೋಟೋ ಶೂಟ್‌ಗಳಿಂದಾಗಿ ಆಯಾಸದಿಂದ ಅವಳು ಸಾವನ್ನಪ್ಪಿರಬಹುದು ಎಂದು ಕುಟುಂಬ ಭಾವಿಸಿದೆ. ಆದರೆ ಆಕೆ ವಿಷ ಸೇವಿಸಿ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ತಿಳಿಸಿದಾಗ ಕುಟುಂಬದವರಿಗೆ ಶಾಕ್ ಕಾದಿತ್ತು. 

ಹೀಗಾಗಿ ವರನ ಮನೆಯವರು ಹುಡುಗಿಗೆ ಏನಾದರೂ ಹೇಳಿರಬಹುದು ಎಂದು ಹುಡುಗಿಯ ಕುಟುಂಬ ಸದಸ್ಯರು ಆರೋಪಿಸಿದ್ದಾರೆ ಮತ್ತು ಮದುವೆಯ ದಿನವೇ ಏಕೆ ಇಂತಹ ಆಘಾತಕಾರಿ ಹೆಜ್ಜೆಆಕೆ ಇಟ್ಟಲು ಎಂದು ಗೊಂದಲಕ್ಕೊಳಗಾಗಿದ್ದರು. ನಂತರ ಎರಡೂ ಕುಟುಂಬಗಳು ಪೊಲೀಸರನ್ನು ಸಂಪರ್ಕಿಸಿದ್ದು, ನಿಖರವಾಗಿ ಏನಾಯಿತು ಎಂದು ತಿಳಿಯಲು ತನಿಖೆ ನಡೆಸುತ್ತಿದ್ದಾರೆ.

ತವರು ಬಿಡುವ ನೋವು: ಅಳು ಅತಿಯಾಗಿ ನವ ವಧು ಸಾವು

ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ಅತ್ತೆಯೊಬ್ಬರು ವಿಧವೆಯಾದ ಸೊಸೆಯನ್ನು ಮಗಳಂತೆ ಮದುವೆ ಮಾಡಿಸಿದ್ದಾರೆ. ಈ ಮೂಲಕ ಇಡೀ ಸಮಾಜಕ್ಕೆ ಮಾದರಿಯಾಗಿದ್ದಾರೆ. ಗಂಡನ ಮರಣದ ನಂತರ ಸೊಸೆಯು ಮದುವೆಗೆ ಸಿದ್ಧಳಾಗಿರಲಿಲ್ಲ, ಆದರೆ ಅತ್ತೆಗೆ ಆಕೆಯ ಭವಿಷ್ಯದ ಬಗ್ಗೆ ಚಿಂತೆಯಾಗಿತ್ತು. ಮಗನ ತಿಥಿಯಂದೇ, ಅತ್ತೆ ತನ್ನ ಸೊಸೆಗೆ ಬಆಕೆಯ ಭವಿಷ್ಯದ ಬಗ್ಗೆ ವಿವರಿಸಿದ್ದಾರೆ. ಸೊಸೆ ಒಪ್ಪಿಕೊಂಡ ಬಳಿಕ, ಅತ್ತೆ ಮಾವ ಸೇರಿ ಆಕೆಗೆ ಸಂಬಂಧ ಹುಡುಕಲು ಮುಂದಾಗಿದ್ದಾರೆ. ಇದಾದ ನಂತರ ನಾಗ್ಪುರದಲ್ಲಿ ನೆಲೆಸಿರುವ ಹುಡುಗನೊಂದಿಗೆ ಸೊಸೆಯ ಸಂಬಂಧವನ್ನು ನಿಶ್ಚಯಗೊಳಿಸಲಾಗಿದೆ. ಅಕ್ಷಯ ತೃತೀಯ ದಿನದಂದು ನಾಗ್ಪುರದಲ್ಲಿ ಸೊಸೆಯ ಮದುವೆಯಾಗಿದೆ. ಅತ್ತೆ ಮಾವ ಖುದ್ದು ತಾವೇ ಮುಂದೆ ನಿಂತು ಸೊಸೆಗೆ ಮದುವೆ ಮಾಡಿಸಿದ್ದಾರೆ.
 

ಎಸ್‌ಬಿಐನ ನಿವೃತ್ತ ಅಧಿಕಾರಿಯಾಗಿರುವ ಯುಗ್‌ ಪ್ರಕಾಶ್ ತಿವಾರಿ ಅವರು ಧಾರ್ ಜಿಲ್ಲೆಯ ಪ್ರಕಾಶ್ ನಗರದಲ್ಲಿ ವಾಸಿಸುತ್ತಿದ್ದಾರೆ. ಕುಟುಂಬದಲ್ಲಿ ಎಲ್ಲವೂ ಚೆನ್ನಾಗಿ ನಡೆಯುತ್ತಿತ್ತು. ಆದರೆ ಕೊರೋನಾದ ಎರಡನೇ ಅಲೆಯ ಸಮಯದಲ್ಲಿ, ಕುಟುಂಬ ಮೇಲೆ ಶೋಕದ ಅಲೆ ಬೀಸಿದೆ. ಇಂಜಿನಿಯರ್ ಆಗಿದ್ದ ಪುತ್ರ ಪ್ರಿಯಾಂಕ್ ತಿವಾರಿಗೆ ಕೊರೋನಾ ಸೋಂಕು ತಗುಲಿದೆ. 2021 ರ ಏಪ್ರಿಲ್ 25 ರಂದು ಭೋಪಾಲ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರಿಯಾಂಕ್ ಸಾವನ್ನಪ್ಪಿದ್ದ. ಮಗನ ಸಾವಿನೊಂದಿಗೆ ಕುಟುಂಬದ ಸಂತೋಷ ಕೊನೆಗೊಂಡಿತು. ಈ ನೋವಿನಿಂದ ಕುಟುಂಬ ಚೇತರಿಸಿಕೊಳ್ಳಲು ಕೆಲವು ದಿನಗಳು ಬೇಕಾಯಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮನೆಯಲ್ಲಿ ಒಂದು ರೂಪಾಯಿ ಇಲ್ಲ ಆದ್ರೂ ಸಿಸಿಟಿವಿ ಯಾಕೆ ಹಾಕಿದ್ರಿ: ಸಿಕ್ಕಿದ್ದನ್ನು ದೋಚಿ ಪತ್ರ ಬರೆದಿಟ್ಟು ಹೋದ ಕಳ್ಳ
ಲೋಕಸಭೆಯಲ್ಲಿ ನೌಕರರ ಪರ ಮಸೂದೆ ಮಂಡನೆ: ಉದ್ಯೋಗಿಗಳ ಲೈಫ್​ ಜಿಂಗಾಲಾಲಾ- ಏನಿದೆ ಇದರಲ್ಲಿ?