
ಮದುವೆಗಳು ಮುರಿದು ಬೀಳೋದ್ಯಾಕೆ?
ಮದುವೆ ದಿನ ವರನ ಕಡೆಯವರು ವಧುವಿನ ಕಡೆಯವರ ಮಧ್ಯೆ ಹಲವು ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳು ಬರುತ್ತವೆ. ಅದೆಲ್ಲವನ್ನೂ ಒಬ್ಬರು ಸರಿದೂಗಿಸಿಕೊಳ್ಳುತ್ತಾ ಮದುವೆಯನ್ನು ಮುಂದುವರೆಸುತ್ತಾರೆ. ಇಲ್ಲದೇ ಹೋದರೆ ಮದುವೆ ಮುರಿದು ಬೀಳುತ್ತದೆ. ಇದೇ ಕಾರಣಕ್ಕೆ ಮದ್ವೆ ಮಾಡಿ ನೋಡು ಒಂದು ಮನೆ ಕಟ್ಟಿ ನೋಡು ಎಂಬ ಗಾದೆ ಮಾತು ಹುಟ್ಟಿಕೊಂಡಿರುವುದು. ಮದುವೆ ಹಾಗೂ ಮನೆ ಕಟ್ಟುವುದು ಬಹಳ ಕಷ್ಟದ ಕೆಲಸ ಎಂಬುದು ಇದರರ್ಥ. ಮದ್ವೆ ದಿನ ಯಾರು ಯಾವಾಗ ಉರಿದು ಬೀಳ್ತಾರೆ ಎಂದು ಹೇಳಲಾಗದು. ಎರಡು ಕುಟುಂಬಗಳ ಸಾವಿರ ಮನಸ್ಥಿತಿಯ ಜನ ಅಲ್ಲಿ ಸೇರಿರುತ್ತಾರೆ. ಒಂದೇ ಸಮುದಾಯದ ಹುಡುಗ ಹುಡುಗಿಯ ಮಧ್ಯೆ ಹಿರಿಯರು ನಿಶ್ಚಯಿಸಿದ ವಿವಾಹದಲ್ಲೇ ಸಂಪ್ರದಾಯಗಳನ್ನು ಪಾಲಿಸುವ ವಿಚಾರದಲ್ಲೇ ಅಲ್ಲಿ ಹಲವು ವೈರುಧ್ಯಗಳು ಇರುತ್ತವೆ. ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಾರೆ. ಇವರೆಲ್ಲರನ್ನು ಸುಧಾರಿಸುವುದು ಬಹಳ ಕಷ್ಟದ ಕೆಲಸ ಯಾರಾದರು ಒಬ್ಬರು ಧ್ವನಿ ಎತ್ತಿದ್ದರು ಅಲ್ಲಿ ದೊಡ್ಡ ಸಮರವೇ ಶುರುವಾಗುತ್ತದೆ. ಮದುವೆಯ ಭೋಜನದಿಂದ ಹಿಡಿದು ವಿದಾಯ ಕೂಟದವರೆಗೆ ಎಲ್ಲರನ್ನು ಸುಧಾರಿಸುವುದೇ ಒಂದು ದೊಡ್ಡ ಸವಾಲು. ಹೀಗಿದ್ದು, ಕೆಲವೊಮ್ಮೆ ಮದ್ವೆಗಳು ಕೊನೆ ಕ್ಷಣದಲ್ಲಿ ಮುರಿದು ಬೀಳುತ್ತದೆ. ನಾವು ಹೇಳಿದ ತಿನಿಸು ತಯಾರಿಸಿಲ್ಲ, ವರನಿಗೆ ಸರಿಯಾದ ಮರ್ಯಾದೆ ಕೊಟ್ಟಿಲ್ಲ ಎಂಬೆಲ್ಲಾ ಕಾರಣಕ್ಕೆ ಮದ್ವೆಗಳು ಮುರಿದು ಬೀಳುವುದುಂಟು, ಇನ್ನೂ ಕೆಲವು ಕಡೆಗಳಲ್ಲಿ ಕೊನೆಕ್ಷಣದಲ್ಲಿ ವಧು ಹುಡುಗ ಬೇಡ ಎಂದು ಹೇಳಿದ ಕಾರಣಕ್ಕೆ ಮದುವೆಗಳು ನಿಂತಿವೆ.
ಹಾಗೆಯೇ ಯುವಕ ಕುಡಿದು ಬಂದ ಕಾರಣಕ್ಕೂ ಯುವತಿ ಬೇರೆಯವರನ್ನು ಪ್ರೀತಿಸುತ್ತಿದ್ದ ಕಾರಣಕ್ಕೂ ಕೊನೆಕ್ಷಣಗಳಲ್ಲಿ ಮದುವೆ ಮುರಿದು ಬಿದ್ದಿದೆ. ಆದರೆ ಇಲ್ಲೊಂದು ಕಡೆ ವಧುವಿನ ಸ್ನೇಹಿತೆಯರನ್ನು ಅವಮಾನಿಸಿದರು ಎಂಬ ಕಾರಣಕ್ಕೆ ಮದುವೆ ಮುರಿದು ಬಿದ್ದಿದೆ. ಮದುವೆ ಮನೆ ಅಂದರೆ ಅಲ್ಲಿ ಸಂಭ್ರಮ ಸಡಗರಗಳು ಪರಸ್ಪರ ಸ್ನೇಹಿತರು ಸ್ನೇಹಿತೆಯರ ಕಾಲೆಳೆಯುವುದು, ಮುಂದೆ ಮದುವೆ ಆಗಲಿರುವ ಬ್ಯಾಚುಲರ್‌ಗಳಿದ್ದರೆ ಅವರಿಗೆ ತಮಾಷೆ ಮಾಡುವುದು, ಬ್ಯಾಚುಲರ್‌ಗಳಾಗಿದ್ದು ಸಿಂಗಲ್‌ಗಳಾಗಿದ್ದಲ್ಲಿ ಅಲ್ಲಿ ಬಂದ ಹುಡುಗ ಹುಡಗಿಯರಲ್ಲೇ ಯಾರನ್ನಾದರೂ ಅವರಿಗೆ ನೋಡು ನೋಡು ಹುಡುಗಿ ಚೆನ್ನಾಗಿದ್ದಾಳೆ ಹುಡುಗ ಚೆನ್ನಾಗಿದ್ದಾನೆ ಅಂತ ಸ್ನೆಹಿತರು ಹೇಳಿ ಕಾಲೆಳೆಯುತ್ತಾ ತಮಾಷೆ ಮಾಡುವುದನ್ನು ನೀವು ನೋಡಿರಬಹುದು. ಆದರೆ ಇಲ್ಲೊಂದುಕಡೆ ಈ ತಮಾಷೆಯ ಕಾಲೆಳೆಯುವಿಕೆ ವಿವಾದದ ಸ್ವರೂಪ ಪಡೆದಿದ್ದು, ವಧು ತನಗೆ ವರನೇ ಬೇಡ ಎಂದು ಹೇಳಿ ಮದ್ವೆ ಮುರಿದುಕೊಂಡಿದ್ದಾಳೆ. ಹಾಗಿದ್ದರೆ ಅಲ್ಲಿ ನಡೆದಿದ್ದು ಏನು?
ಉತ್ತರ ಪ್ರದೇಶದ ವಾರಣಾಸಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದೆ. ವಧು ಜ್ಯೋತಿ ಶರ್ಮಾ ತನ್ನ ಗೆಳತಿಯರಿಗೆ ಗೆಳೆಯನ ಸ್ನೇಹಿತರು ಕೆಟ್ಟದಾಗಿ ಕಾಮೆಂಟ್ ಮಾಡಿದರು ಎಂಬ ಕಾರಣಕ್ಕೆ ಮದುವೆ ನಿಲ್ಲಿಸಿದ್ದಾಳೆ. ವರದಿಯ ಪ್ರಕಾರ ವರನ ಸ್ನೇಹಿತರು ವಧುವಿನ ಸ್ನೇಹಿತರಿಗೆ ಕೆಟ್ಟ ಕಾಮೆಂಟ್ ಮಾಡಿದ್ದು, ಈ ವೇಳೆ ತನ್ನ ಸ್ನೇಹಿತರನ್ನು ಕಂಟ್ರೋಲ್ ಮಾಡುವಂತೆ ವಧು ವರನಿಗೆ ಹೇಳಿದ್ದಾಳೆ. ಆದರೆ ವರ ಹಾಗೆ ಮಾಡದೇ ನಕ್ಕಿದ್ದಾನೆ ಇದರಿಂದ ಸಿಟ್ಟಿಗೆದ್ದ ವಧು, ಈಗಲೇ ನನ್ನ ಮಾತು ಕೇಳದವನು ನನ್ನ ಗೌರವಿಸದವನು ಇನ್ನೂ ಜೀವನಪೂರ್ತಿ ನನ್ನ ಮಾತು ಕೇಳುತ್ತಾನಾ? ನನಗೆ ಗೌರವ ನೀಡ್ತಾನಾ ಎಂದು ಹೇಳಿ ಈ ಮದುವೆಯನ್ನೇ ಕ್ಯಾನ್ಸಲ್ ಮಾಡಿದ್ದಾಳೆ.
ಈ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಅನೇಕರು ತನ್ನ ಮಾತು ಕೇಳದವನು ಗೌರವಿಸದವನು ಯಾವತ್ತೂ ಒಳ್ಳೆಯ ಪತಿ ಆಗಲು ಸಾಧ್ಯವಿಲ್ಲ ಎಂದು ಆಕೆ ಹೇಳಿದ್ದಾಳೆ. ಈ ವಿಚಾರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಹಿಳೆಯರು ಮಹಿಳೆಯರಿಗಾಗಿ ಇದು ನಾವು ನಮಗಾಗಿ ಕೆಲಸ ಎದ್ದು ನಿಲ್ಲುವ ರೀತಿ ಗೌರವ ಹಾಗೂ ಸ್ವಾಭಿಮಾನದ ವಿಚಾರದ ಮುಂದೆ ಎಲ್ಲವೂ ಗೌಣ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಆಕೆ ಒತ್ತಾಯಪೂರ್ವಕವಾಗಿ ಮದುವೆಯಾಗುವ ಬದಲು ಮದುವೆಯಿಂದ ಹಿಂದೆ ಸರಿಯುವ ಆಯ್ಕೆ ಆಕೆಗೆ ಸಿಕ್ಕಿದು ಖುಷಿಯ ವಿಚಾರ ಎಂದು ಕಾಮೆಂಟ್ ಮಾಡಿದ್ದಾರೆ. ಆಕೆ ಒಳ್ಳೆಯ ನಿರ್ಧಾರವನ್ನು ತೆಗೆದುಕೊಂಡಿದ್ದಾಳೆ. ಇಲ್ಲದಿದ್ದರೆ ಆತನ ವರ್ತನೆಯನ್ನು ಜೀವನದುದ್ದಕ್ಕೂ ಸಹಿಸಿಕೊಳ್ಳಬೇಕಿತ್ತು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಸದ್ಯ ಈಗಲಾದರೂ ಭಾರತೀಯ ಮಹಿಳೆಯರು ತಮಗಾಗಿ ದಿಟ್ಟನಿರ್ಧಾರ ತೆಗೆದುಕೊಳ್ಳುವ ಧೈರ್ಯ ತೋರುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಈ ಘಟನೆ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ