ಮದುವೆ ವೇಳೆಯೇ ಪರಸ್ಪರ ಕಪಾಳಕ್ಕೆ ಹೊಡೆದುಕೊಂಡ ವಧು ವರರು

Published : May 01, 2022, 04:34 PM IST
ಮದುವೆ ವೇಳೆಯೇ ಪರಸ್ಪರ ಕಪಾಳಕ್ಕೆ ಹೊಡೆದುಕೊಂಡ ವಧು ವರರು

ಸಾರಾಂಶ

ಪರಸ್ಪರ ಹೊಡೆದಾಡಿಕೊಂಡ ವಧುವರರು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಮದುವೆಯ ಅನೇಕ ವಿಡಿಯೋಗಳು ವೈರಲ್‌ ಆಗಿರುವುದನ್ನು ನೀವು ಈಗಾಗಲೇ ನೋಡಿರಬಹುದು. ಮದುವೆಯ ವಿಡಿಯೋಗಳು ಬಹುತೇಕ ಮೋಜಿನಿಂದ ಕೂಡಿರುತ್ತದೆ. ವಧು ವರರು ಡಾನ್ಸ್ ಮಾಡುವುದು, ಅವರ ಸ್ನೇಹಿತರು ಕೀಟಲೆ ಮಾಡುವುದು, ದಿಬ್ಬಣ ಬಂದವರು ಅಥವಾ ಮದುವೆಗೆ ಬಂದ ಇನ್ನಾರೋ ಕುಡಿದು ತೂರಾಡುತ್ತಾ ಬಿಟ್ಟಿ ಮನೋರಂಜನೆ ನೀಡುವುದು ಹೀಗೆ ಸಾಮಾಜಿಕ ಜಾಲತಾಣದಲ್ಲಿ ಮದುವೆಯ ಹಲವು ವಿಡಿಯೋಗಳು ವೈರಲ್ ಆಗಿರುವುದನ್ನು ನೀವು ನೋಡಿರಬಹುದು. ಆದರೆ ಇಲ್ಲೊಂದು ಮದುವೆಯಲ್ಲಿ ವಧು ವರರು ಪರಸ್ಪರ ಸರಿಯಾಗಿ ಕಪಾಳಕ್ಕೆ ಬಾರಿಸಿಕೊಂಡಿದ್ದು, ನೋಡುಗರನ್ನು ಬೆಚ್ಚಿ ಬೀಳಿಸುತ್ತಿದೆ. 

ಮದುವೆಗೆ ಬಂದವರು ಮದುವೆ ಗಂಡು ಹಾಗೂ ಹೆಣ್ಣಿನ ಈ ಹೊಸ ಅವಾತರ ನೋಡಿ ಗಾಬರಿಗೊಳಗಾಗಿದ್ದಾರೆ. ವಿಡಿಯೋದಲ್ಲಿ ಕಾಣಿಸುವಂತೆ ವಧು ವರರು ಪರಸ್ಪರ ಹಾರ ಬದಲಾಯಿಸಿದ ನಂತರ ಈ ಘಟನೆ ನಡೆದಂತಿದೆ. ವಧು ಆಗಲೇ ಸಿಟ್ಟಿನಿಂದ ಮೂಕ ಊದಿಸಿಕೊಂಡು ಕ್ಯಾಮರಾದತ್ತ ನೋಡುತ್ತಿದ್ದಾನೆ. ಆತನಿಗೆ ಏಕೆ ಕೋಪ ಬಂದಿದೆ ಎಂಬುದು ತಿಳಿದಿಲ್ಲ. ಆದರೆ ಕೋಪವಂತೂ ಬಂದಿದೆ. ಇದೇ ಸಮಯಕ್ಕೆ ಸರಿಯಾಗಿ ವಧು ಆತನಿಗೆ ಲಾಡು ತಿನ್ನಿಸುವ ಸಲುವಾಗಿ ಆತನ ಬಾಯಿಯ ಬಳಿ ಲಾಡನ್ನು ಹಿಡಿದಿದ್ದಾಳೆ. ಆದರೆ ಕೋಪದಲ್ಲೇ ದುರುಗುಟ್ಟುತ್ತಿರುವ ಪತಿ ಲಾಡನ್ನು ತಿನ್ನುವುದಿಲ್ಲ. ಇದರಿಂದ ಸಿಟ್ಟಿಗೆದ್ದ ವಧು ಆತನ ಮುಖಕ್ಕೆ ಲಡ್ಡನ್ನು ಹುಡಿ ಮಾಡಿ ಉಜ್ಜಿದ್ದಾಳೆ.

 

ಮೊದಲೇ ಸಿಟ್ಟಿನಲ್ಲಿದ್ದ ಪತಿರಾಯ ಇದರಿಂದ ರೊಚ್ಚಿಗೆದ್ದಿದ್ದು ಆಕೆಯ ಕಪಾಳಕ್ಕೆ ರಫ್ ಎಂದು ಬಾರಿಸಿದ್ದಾನೆ. ವಧು ಕೂಡ ತಿರುಗಿ ಆತನ ಕಪಾಳಕ್ಕೆ ಸರಿಯಾಗೇ ಕೊಟ್ಟಿದ್ದು, ಇಬ್ಬರು ಸರಣಿಯಲ್ಲಿ ಕಪಾಳಕ್ಕೆ ಬಾರಿಸಿಕೊಂಡಿದ್ದಾರೆ. ಮದುವೆಗೆ ಬಂದಿದ್ದ ನೆಂಟರು ಇವರಿಬ್ಬರನ್ನು ನೋಡಿ ಗಲಿಬಿಲಿಗೊಂಡಿದ್ದು, ಯಾರೂ ಇಬ್ಬರ ಜಗಳ ಬಿಡಿಸಲು ಯತ್ನಿಸಿಲ್ಲ. ಆದರೆ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. 

Viral Video: ಹಾರ ಹಾಕುವಾಗಲೇ ವಧುವಿನ ಕಪಾಳಕ್ಕೆ ಬಾರಿಸಿದ ವರ!

ಈ ವಿಡಿಯೋವನ್ನು ಮೂರು ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದು, ಹಲವು ಕಾಮೆಂಟ್‌ಗಳನ್ನು ಮಾಡಿದ್ದಾರೆ. ಕೆಲ ದಿನಗಳ ಹಿಂದೆಯೂ ಇಂತಹದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಮದುವೆಯ ಸಮಾರಂಭದ ವೇದಿಕೆಯಲ್ಲಿ ವಧು ವರ ತಮ್ಮ ಸಂಬಂಧಿಗಳ ನಡುವೆ ಪರಸ್ಪರ ಎದುರಾಗಿ ನಿಂತಿರುವುದನ್ನು ವಿಡಿಯೋ ತೋರಿಸಿದೆ. ಆದರೆ, ಮದುವೆಯಿಂದ ಯುವಕ ಒಂಚೂರು ಸಂತಸವಾಗಿಲ್ಲ ಎನ್ನುವುದು ಆತನ ವರ್ತನೆಯಿಂದಲೇ ತಿಳಿಯುತ್ತಿತ್ತು. ಬೇಕಾದ್ರೆ ತಿನ್ನು ಅನ್ನೋ ವರ್ತನೆಯಲ್ಲೇ ಯುವತಿಗೆ ಸಿಹಿ ತಿನ್ನಿಸುವ ಕೆಲಸ ಮಾಡಲು ಆತ ಯತ್ನಿಸಿದರೆ, ಇನ್ನೊಂದೆಡೆ ಯುವತಿ ತನ್ನ ಮುಖವನ್ನು ತಿರುಗಿಸಿದ್ದಾಳೆ. ಇದರಿಂದ ಸಿಟ್ಟಿಗೆದ್ದ ವರ ಆಕೆಯ ಮೇಲೆ ಸಿಹಿತಿಂಡಿಗಳನ್ನು ಎಸೆದಿದ್ದಾನೆ.

ವಧುವಿನ ಸಿಗ್ನಲ್ ನೋಡಿ ಬೆಚ್ಚಿಬಿದ್ದ ಕ್ಯಾಮಾರಮ್ಯಾನ್; ಮದುವೆ ವಿಡಿಯೋ ವೈರಲ್
 

ಅಷ್ಟರಲ್ಲಿ ವಧು ಕೂಡ ಕೋಪಗೊಂಡು ಸಿಹಿತಿಂಡಿಗಳನ್ನು ಎತ್ತಿಕೊಂಡು ವರನ ಮೇಲೆ ಎಸೆದಿದ್ದಾಳೆ. ಇದರಿಂದ ಮತ್ತಷ್ಟು ಸಿಟ್ಟಿಗೆದ್ದ ಯುವಕ, ವಧುವಿಗೆ ವೇದಿಕೆಯಲ್ಲೇ ಕಪಾಳಕ್ಕೆ ಬಾರಿಸಿದ್ದಾನೆ. ಕೆಲವೇ ಕ್ಷಣದಲ್ಲಿ ಈ ಎಲ್ಲಾ ಘಟನೆಗಳು ನಡೆದಿದ್ದರಿಂದ ಅಕ್ಕ-ಪಕ್ಕದಲ್ಲಿ ನಿಂತಿದ್ದವರು ಬೆಚ್ಚಿಬಿದ್ದಿದ್ದಾರೆ. ಈ ವಿಡಿಯೋವನ್ನು ರಾಮ್‌ಸುಭಾಗ್ ಯಾದವ್ ಅವರು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದು, ಇದುವರೆಗೆ 2.3 ಮಿಲಿಯನ್ ವೀಕ್ಷಣೆಗಳನ್ನು ಕಂಡಿದೆ.

ಇಬ್ಬರೂ ಬಲವಂತವಾಗಿ ಮದುವೆಯಾಗುತ್ತಿರುವಂತೆ ತೋರುತ್ತಿದೆ ಎಂದು ಫೇಸ್ ಬುಕ್ ಬಳಕೆದಾರರು ತಕ್ಷಣವೇ ಊಹೆ ಮಾಡಿದ್ದಾರೆ. ಮದುವೆಯ ದಿನದಂದೇ ವಧುವರರು ಜಗಳವಾಡುತ್ತಿದ್ದರೆ ಆ ಮದುವೆ ಹೆಚ್ಚುಕಾಲ ಉಳಿಯುವುದಿಲ್ಲ ಎನ್ನುವುದು ನಂಬಿಕೆ. ಆದರೆ, ಈ ವಿಡಿಯೋವನ್ನು ಬಹುತೇಕರು ತಮಾಷೆಯಾಗಿ ತೆಗೆದುಕೊಂಡು ನಗುವಿನ ಇಮೋಜಿಯನ್ನು ಹಾಕಿದ್ದಾರೆ. ಇನ್ನೂ ಕೆಲವರು ಮಹಿಳೆಯ ಮೇಲೆ ಪುರುಷನ ದೌರ್ಜನ್ಯದ ನಡವಳಿಕೆಯನ್ನು ಪ್ರಶ್ನೆ ಮಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ
India Latest News Live: Gold Silver Price Today - ಚಿನ್ನದ ದರದಲ್ಲಿ ಏರಿಕೆನಾ? ಇಳಿಕೆನಾ?