ಭಾರತದಲ್ಲಿ ಚೀನಾ ಅಧ್ಯಕ್ಷರ 24 ಗಂಟೆ, ಭದ್ರತಾ ಪಡೆ ಸೇರಿ 15 ಸಾವಿರ ಅಧಿಕಾರಿಗಳು, 50ಕ್ಕೂ ಹೆಚ್ಚು ಕಾರು

Published : Sep 12, 2026, 04:23 PM IST
Xi jinping arrives delhi brics 2026

ಸಾರಾಂಶ

ಬ್ರಿಕ್ಸ್ ಶೃಂಗಸಭೆಗೆ ಭಾರತಕ್ಕೆ ಆಗಮಿಸಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ 24 ಗಂಟೆ ಭಾರತದಲ್ಲಿ ಇರಲಿದ್ದಾರೆ. ಚೀನಾ ಅಧ್ಯಕ್ಷರಿಗೆ ಭದ್ರತಾ ಪಡೆ, ಅಧಿಕಾರಿಗಳು ಸೇರಿದಂತೆ 15 ಸಾವಿರ ಮಂದಿ ನಿಯೋಜಿಸಲಾಗಿದೆ. ಇನ್ನು ಕ್ಸಿ ಪ್ರಯಾಣಿಸುವ ಲಿಮೋಸಿನ್ ಸೇರಿ 50ಕ್ಕೂ ಹೆಚ್ಚು ಕಾರು ಕೂಡ ತಂದಿದ್ದಾರೆ.

ನವದೆಹಲಿ (ಸೆ.12) ವಿಶ್ವವೇ ಇದೀಗ ಭಾರತದಲ್ಲಿ ನೋಡುತ್ತಿದೆ. ನವದೆಹಲಿಯಲ್ಲಿ ನಡೆಯುತ್ತಿರುವ ಎರಡು ದಿನಗಳ ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಮುಖ ನಾಯಕರು ಪಾಲ್ಗೊಂಡಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸೇರಿದಂತೆ ಹಲವು ಗಣ್ಯರು ಭಾರತದಲ್ಲಿದ್ದಾರೆ. ಈ ಪೈಕಿ ಪುಟಿನ್ ಹಾಗೂ ಕ್ಸಿ ಜಿನ್‌ಪಿಂಗ್ ಭದ್ರತೆ ಎಲ್ಲರಿಗಂತ ಭಿನ್ನ. ಈ ಬಾರಿ ಕ್ಸಿ ಜಿನ್‌‍ಪಿಂಗ್ ಭಾರತ ಬೇಟಿಯಲ್ಲಿ 24 ಗಂಟೆ ಕಳೆಯಲಿದ್ದಾರೆ. ಇದಕ್ಕಾಗಿ ಚೀನಾದಿಂದ ಭದ್ರತಾ ಪಡೆಗಳು, ಅಧಿಕಾರಿಗಳು ಆಗಮಿಸಿದ್ದಾರೆ. ಚೀನಾ ಅಧ್ಯಕ್ಷರಿಗೆ ಒಟ್ಟು 15 ಸಾವಿರ ಮಂದಿ ನಿಯೋಜಿಸಲಾಗಿದೆ. ಇನ್ನು ಕ್ಸಿ ಜಿನ್‌ಪಿಂಗ್ ಪ್ರಯಾಣಿಸುವ ಲಿಮೋಸಿನ್ ಕಾರು ಸೇರಿದಂತೆ 50ಕ್ಕೂ ಹೆಚ್ಚು ಕಾರನ್ನು ಚೀನಾದಿಂದಲೇ ತಂದಿದ್ದಾರೆ. ಜಿನ್‌ಪಿಂಗ್ ಭದ್ರತೆ ಹಾಗೂ ಅಧಿಕಾರಿಗಳ ಬಳಗವೇ ಭಾರಿ ಕುತೂಹಲಕ್ಕೆ ಕಾರಣವಾಗಿದೆ.

ಕ್ಸಿ ಜಿನ್‌ಪಿಂಗ್‌ಗೆ ಹಲವು ಸ್ತರದ ಭದ್ರತೆ

ಕ್ಸಿ ಜಿನ್‌ಪಿಂಗ್ ಚೀನಾ ಏರ್ ವಿಮಾನ ಮೂಲಕ ಭಾರತಕ್ಕೆ ಆಗಮಿಸಿದ್ದಾರೆ. ಭಾರತದ ಹಲವು ಎಜೆನ್ಸಿಗಳು ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಂಡ ನಾಯಕರಿಗೆ ಭದ್ರತೆ ನೀಡುತ್ತಿದೆ. ದೆಹಲಿ ಪೊಲೀಸ್, ಎನ್‌ಎಸ್‌ಜಿ ಕಮಾಂಡೋ, ಪ್ಯಾರಾ ಮಿಲಿಟರಿ ಸೇರಿದಂತೆ ಹಲವು ಎಜೆನ್ಸಿಗಳಿಂದ ಭಾರಿ ಭದ್ರತೆ ನೀಡುತ್ತಿದೆ. ಇದರ ಜೊತೆಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಭದ್ರತಾ ಪಡೆಗಳು ಭಾರತಕ್ಕೆ ಆಗಮಿಸಿದ್ದಾರೆ. ಚೀನಾ ಭದ್ರತಾ ಪಡೆಗಳು, ಭದ್ರತಾ ಎಜೆನ್ಸಿ ಅಧಿಕಾರಿಗಳು, ರಾಜತಾಂತ್ರಿಕ ಅಧಿಕಾರಿಗಳು, ಸರ್ಕಾರದ ಪ್ರತಿನಿಧಿಗಳು ಸೇರಿದಂತೆ ಬರೋಬ್ಬರಿ 15 ಸಾವಿರ ಮಂದಿ ಇದ್ದಾರೆ.

ಲಿಮೋಸಿನ್ ಸೇರಿ 50ಕ್ಕೂ ಹೆಚ್ಚು ಕಾರು

ಚೀನಾ ಅಧ್ಯಕ್ಷರು ಪ್ರಯಾಣಿಸುವ ಅತೀ ಸುರಕ್ಷತೆ ಹಾಗೂ ಭದ್ರತೆಯ ಲಿಮೋಸಿನ್ ಕಾರನ್ನು ಚೀನಾದಿಂದಲೇ ತರಿಸಿಕೊಳ್ಳಲಾಗಿದೆ. ವಿಶೇಷ ಅಂದರೆ ಕ್ಸಿ ಜಿನ್‌ಪಿಂಗ್ ಪ್ರಯಾಣಿಸುವ ಲಿಮೋಸಿನ್ ಕಾರು ಭಾರತಕ್ಕೆ 10 ದಿನಗಳ ಮೊದಲೇ ಆಗಮಿಸಿದೆ. ಇದರ ಜೊತೆಗೆ ಬೆಂಗಾವಲು ಪಡೆ ಕಾರು ಸೇರಿದಂತೆ 50ಕ್ಕೂ ಹೆಚ್ಚು ಕಾರು ಭಾರತಕ್ಕೆ ಆಗಮಿಸಿದೆ. ಇದರ ಜೊತೆಗೆ ಭಾರತದ ಭದ್ರತಾ ಪಡೆಗಳ ಕಾರು ಇರಲಿದೆ.

ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ಚಾಣಾಕ್ಯಪುರಿಯ ಲಕ್ಷುರಿ ಹೊಟೆಲ್‌ನಲ್ಲಿ ತಂಗಲಿದ್ದಾರೆ. ಕ್ಸಿ ಜಿನ್‌ಪಿಂಗ್‌ಗೆ ಪ್ರತ್ಯೇಕ ಹೊಟೆಲ್ ವ್ಯವಸ್ಥೆ ಮಾಡಿದ್ದಾರೆ. ಹೊಟೆಲ್ ಸುತ್ತಲೂ ಭದ್ರತಾ ಪಡೆಗಳಿವೆ. ಇನ್ನು ಪ್ರತಿ ಚಲನವಲನಗಳನ್ನು ಕೂಡ ಪರಿಶೀಲಿಸಲಾಗುತ್ತದೆ. ಪ್ರತಿ ರಸ್ತೆ, ಹೊಟೆಲ್, ಶೃಂಗಸಭೆ ಸ್ಥಳ ಸೇರಿದಂತೆ ಎಲ್ಲೆಡೆ ಭದ್ರತೆ ನಿಯೋಜನೆ ಮಾಡಲಾಗಿದೆ. 700ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾ, ಡ್ರೋನ್‌ಗಳ ಮೂಲಕ ಭದ್ರತಾ ಪಡೆಗಳು ಕಣ್ಗಾವಲು ಇಟ್ಟಿದ್ದಾರೆ. ಕಂಟ್ರೋಲ್ ರೂಂ ಮೂಕ ಎಲ್ಲವನ್ನು ಪರಿಶೀಲಿಸಲಾಗುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಡಿ ದಾಳಿ ಬೆನ್ನಲ್ಲೇ ರಾಜೀನಾಮೆಗೆ ಮುಂದಾದ ಕಾಂಗ್ರೆಸ್ ನಾಯಕ, ಮಾಜಿ ಸಿಎಂ ನಡೆಯಿಂದ ಕೋಲಾಹಲ
ಅನಂತ್ ಅಂಬಾನಿ ವಂತಾರಾದಲ್ಲಿ ಮಾಧುರಿಗೆ ಸಿಕ್ತು ಪುನರ್ಜನ್ಮ, ಚೇತರಿಸಿಕೊಂಡು ನಂದನಿ ಮಠಕ್ಕೆ ಮರಳಿದ ಮಹಾದೇವಿ!