ಇಡಿ ದಾಳಿ ಬೆನ್ನಲ್ಲೇ ರಾಜೀನಾಮೆಗೆ ಮುಂದಾದ ಕಾಂಗ್ರೆಸ್ ನಾಯಕ, ಮಾಜಿ ಸಿಎಂ ನಡೆಯಿಂದ ಕೋಲಾಹಲ

Published : Sep 12, 2026, 03:53 PM IST
Congress flag

ಸಾರಾಂಶ

ಕಾಂಗ್ರೆಸ್‌ನಲ್ಲೀಗ ಇಡಿ ದಾಳಿಯಿಂದ ಕೋಲಾಹಲ ಶುರುವಾಗಿದೆ. ಸೆ.10ರಂದು ಇಡಿ ಅಧಿಕಾರಿಗಳು ಮಾಜಿ ಸಿಎಂ ನಿವಾಸ, ಕಚೇರಿ ಸೇರದಿದಂತೆ ಹಲವು ಕಡೆ ದಾಳಿ ಮಾಡಲಾಗಿದೆ. ಈ ದಾಳಿ ಬೆನ್ನಲ್ಲೇ ಕಾಂಗ್ರೆಸ್ ನಾಯಕ ಇದೀಗ ಪ್ರಮುಖ 2 ಸ್ಥಾನಗಳಿಗೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.

ಡೆಹ್ರಡೂನ್ (ಸೆ.12) ದೇಶದ ಹಲವು ಭಾಗದಲ್ಲಿ ಇಡಿ ದಾಳಿ ನಡೆಯುತ್ತಿದೆ. ಕರ್ನಾಟಕದಲ್ಲಿ ಸತೀಶ್ ಜಾರಕಿಹೊಳಿಗೆ ಸೇರಿದ ಹಲವೆಡೆ ದಾಳಿ ನಡೆದಿದೆ. ಇನ್ನು ಉತ್ತರಖಂಡದಲ್ಲೂ ಇಡಿ ದಾಳಿ ಮುಂದುವರಿದಿದೆ. ಉತ್ತರಖಂಡದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ನಾಯಕ ಹರೀಶ್ ರಾವತ್ ನಿವಾಸ ಸೇರಿದಂತೆ ಹಲವೆಡೆ ಇಡಿ ದಾಳಿ ನಡೆದಿದೆ.ಹರೀಶ್ ರಾವತ್ ಸಹಾಯಕನ ಮನೆಯಿಂದ 1.28 ಕೋಟಿ ರೂಪಾಯಿ ನಗದು, ಚಿನ್ನಾಭರಣ, ಲಕ್ಷುರಿ ವಾಚ್ ಸೇರಿದಂತೆ ಹಲವು ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಇಡಿ ದಾಳಿ ಬೆನ್ನಲ್ಲೇ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹರೀಶ್ ರಾವತ್, ಇದೀಗ ಕಾಂಗ್ರೆಸ್ ಪಕ್ಷದ ಪ್ರಮುಖ ಎರಡೂ ಸ್ಥಾನಗಳಿಗೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.

2 ಸ್ಥಾನಗಳಿಗೆ ಹರೀಶ್ ರಾವತ್ ರಾಜೀನಾಮೆ ಸಾಧ್ಯತೆ

ಇಡಿ ದಾಳಿ ಬೆನ್ನಲ್ಲೇ ಹರೀಶ್ ರಾವತ್ ರಾಜೀನಾಮೆ ಮಾತುಗಳನ್ನಾಡಿದ್ದಾರೆ. ಉತ್ತರಖಂಡ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಪ್ರಮುಖ ಜವಾಬ್ದಾರಿಯಿಂದ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ಕಾರ್ಯಾಕಾರಿ ಸಮಿತಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ಹರೀಶ್ ರಾವತ್ ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಉತ್ತರಖಂಡದಲ್ಲಿ ಚುನಾವಣೆ ಸೋತ ಬಳಿಕ ಹಿರಿಯ ನಾಯಕ ಹರೀಶ್ ರಾವತ್‌‍ಗೆ ಉತ್ತರಖಂಡ ಕಾಂಗ್ರೆಸ್ ಹಾಗೂ ರಾಷ್ಟ್ರೀಯ ಕಾಂಗ್ರೆಸ್‌ನಲ್ಲಿ ಪ್ರಮುಖ ಜವಾಬ್ದಾರಿ ನೀಡಲಾಗಿತ್ತು. ಇದೀಗ ಈ ಎರಡೂ ಸ್ಥಾನಕ್ಕೆ ರಾಜೀನಾಮೆ ನೀಡಿ ತಮ್ಮ ಕಾನೂನು ಹೋರಾಟ ಮುಂದುವರಿಸಲು ನಿರ್ಧರಿಸಿದ್ದಾರೆ. ಶೀಘ್ರದಲ್ಲೇ ಹರೀಶ್ ರಾವತ್ ಅಧಿೃಕೃತ ಘೋಷಣೆ ಮಾಡುವ ಸಾಧ್ಯತೆ ಇದೆ.

ಸೆಪ್ಟೆಂಬರ್ 10ಕ್ಕೆ ಹರೀಶ್ ರಾವತ್‌ಗೆ ಸೇರಿದ ಹಲವು ಕಡೆಗಳಲ್ಲಿ ಇಡಿ ದಾಳಿ ನಡೆದಿತ್ತು. 2016ರ ಉತ್ತರಖಂಡ ಸಬೋರ್ಡಿನೇಟ್ ಸೆಲೆಕ್ಷನ್ ಕಮಿಷನ್ (UKSSSC) ನಡೆದಿದೆ ಎನ್ನಲಾದ ಹಲವು ಅಕ್ರಮಗಳಿಗೆ ಸಂಬಂಧಿಸಿ ಇಡಿ ದಾಳಿ ನಡೆಸಿದೆ. ಹರೀಶ್ ರಾವತ್, UKSSSC ಮಧ್ಯವರ್ತಿಗಳು ಸೇರಿದಂತೆ ಹಲವು ಕಡೆಗಳಲ್ಲಿ ಇಡಿ ದಾಳಿ ನಡೆದಿದೆ. 2009 ರಿಂದ 2017ರ ವರೆಗೆ ಮುಖ್ಯಮಂತ್ರಿಯಾಗಿದ್ದ ಹರೀಶ್ ರಾವತ್, ಈ ಸಮಯದಲ್ಲಿದ್ದ ನಿವಾಸದ ಮೇಲೂ ಇಡಿ ದಾಳಿ ನಡೆದಿದೆ.

ಒಎಂಆರ್ ಶೀಟ್, ಉತ್ತರ ಪತ್ರಿಕೆಗಳು ರಹಸ್ಯವಾಗಿ ಕಮಿಷನರ್ ಕಸ್ಟಡಿಯಿಂದ ಸೆಕ್ರಟರಿ ಕಚೇರಿಗೆ ವರ್ಗಾವಣೆಯಾಗಿರುವುದು ಪತ್ತೆಯಾಗಿತ್ತು. UKSSSCನಲ್ಲಿ ಹಲವು ಅಕ್ರಮಗಳು ನಡೆದಿರುವ ಕುರಿತು ತನಿಖೆ ತೀವ್ರಗೊಂಡಿದೆ. ಈ ಬೆಳವಣಿಗೆ ಬೆನ್ನಲ್ಲೇ ಕಾಂಗ್ರೆಸ್ ಜವಾಬ್ದಾರಿಗಳಿಂದ ಮುಕ್ತಿಹೊಂದಲು ಹರೀಶ್ ರಾವತ್ ಬಯಸಿದ್ದಾರೆ. ಇಷ್ಟೇ ಅಲ್ಲ ಹರೀಶ್ ರಾವತ್ ನಡೆ ಇದೀಗ ಭಾರಿ ಕೋಲಾಹಲಕ್ಕೂ ಕಾರಣವಾಗಿದೆ. ಇಡಿ ದಾಳಿ ಬೆನ್ನಲ್ಲೇ ಹರೀಶ್ ರಾವತ್ ರಾಜೀನಾಮೆ ಬಯಸಿರುವುದು ಪ್ರಕರಣದಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಆಳ ಸೂಚಿಸುತ್ತಿದೆ ಎಂದು ರಾಜಕೀಯ ಆರೋಪಗಳು ಕೇಳಿಬರುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅನಂತ್ ಅಂಬಾನಿ ವಂತಾರಾದಲ್ಲಿ ಮಾಧುರಿಗೆ ಸಿಕ್ತು ಪುನರ್ಜನ್ಮ, ಚೇತರಿಸಿಕೊಂಡು ನಂದನಿ ಮಠಕ್ಕೆ ಮರಳಿದ ಮಹಾದೇವಿ!
ಹಲವು ದಿನಗಳ ಬಳಿಕ ಸೀಮಾ ಹೈದರ್ ರೀಲ್ಸ್, ಡ್ಯಾನ್ಸ್‌ಗಿಂತ ಹೆಚ್ಚು ಚರ್ಚೆಯಾಗುತ್ತಿದೆ ಹಿಂದಿನ ಫೋಟೋ