ಪ್ರಧಾನಿ ನರೇಂದ್ರ ಮೋದಿ ಮತ್ತು ಅದಾನಿ ಉದ್ಯಮ ಸಮೂಹವನ್ನು ಗುರಿಯಾಗಿಸಿಕೊಂಡು ಪ್ರಶ್ನೆಗಳನ್ನು ಕೇಳಲು ಮಹುವಾ ಮೊಯಿತ್ರಾ ಅವರ ಸಂಸತ್ತಿನ ಲಾಗಿನ್ ಐಡಿಯನ್ನು (parliamentary login ID) ಬಳಸಿಕೊಂಡಿದ್ದೆ. ಸ್ವತಃ ಮಹುವಾ ಅವರೇ ಲಾಗಿನ್ ಐಡಿಯ ಪಾಸ್‌ವರ್ಡ್ ನೀಡಿದ್ದರು ಎಂದು ಉದ್ಯಮಿ ದರ್ಶನ್ ಹೀರಾನಂದಾನಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ನವದೆಹಲಿ: ತೃಣಮೂಲ ಕಾಂಗ್ರೆಸ್ (TMC) ಸಂಘದ ಮಹುವಾ ಮೊಯಿತ್ರಾ ವಿರುದ್ಧ ಕೇಳಿ ಬಂದಿರುವ ಪ್ರಶ್ನೆಗಾಗಿ ಲಂಚ ಕೇಳಿದ ಆರೋಪದ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅದಾನಿ ಉದ್ಯಮ ಸಮೂಹವನ್ನು ಗುರಿಯಾಗಿಸಿಕೊಂಡು ಪ್ರಶ್ನೆಗಳನ್ನು ಕೇಳಲು ಮಹುವಾ ಮೊಯಿತ್ರಾ ಅವರ ಸಂಸತ್ತಿನ ಲಾಗಿನ್ ಐಡಿಯನ್ನು (parliamentary login ID) ಬಳಸಿಕೊಂಡಿದ್ದೆ. ಸ್ವತಃ ಮಹುವಾ ಅವರೇ ಲಾಗಿನ್ ಐಡಿಯ ಪಾಸ್‌ವರ್ಡ್ ನೀಡಿದ್ದರು ಎಂದು ಉದ್ಯಮಿ ದರ್ಶನ್ ಹೀರಾನಂದಾನಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಅಲ್ಲದೆ, 'ದುಬಾರಿ ಐಷಾರಾಮಿ - ವಸ್ತುಗಳು, ರಜಾದಿನದ ಮೋಜಿಗಾಗಿ ಮಹುವಾ ನನ್ನ ಬಳಿ ಸಾಕಷ್ಟು ಬೇಡಿಕೆ ಇಟ್ಟಿದ್ದರು. ಅವುಗಳಿಗಾಗಿ ನಾನು ಅವರಿಗೆ ಹಣ ನೀಡಿದ್ದೆ. ಅದಾನಿ ಕಂಪನಿಗಳಿಗೆ ಸಂಬ ೦ಧಿಸಿದ ವಿಷಯಗಳ ಬಗ್ಗೆ ರಾಹುಲ್ ಗಾಂಧಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರ ಜತೆ ಮಹುವಾ ಸಂವಹನ ನಡೆಸಿದ್ದರು ಎಂದಿದ್ದಾರೆ ಉದ್ಯಮಿ ಹೀರಾ ನಂದಾನಿ (Businessman Hiranandani).
ಉದ್ಯಮಿ ಹೇಳಿದ್ದೇನು?
ಈ ಸಂಬಂಧ ಮಹುವಾ ವಿರುದ್ಧ ವಿಚಾರಣೆ ನಡೆಸುತ್ತಿರುವ ಸಂಸತ್ತಿನ ನೈತಿಕ ಸಮಿತಿಗೆ ಹೀರಾನಂದಾನಿ ಅಫಿಡವಿಟ್ ಸಲ್ಲಿಸಿದ್ದಾರೆ. ಈ ಅಫಿಡವಿಟ್ ದೆಹಲಿ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಆದರೆ ಅಫಿಡವಿಟ್‌ನಲ್ಲಿನ (affidavit) ಅಂಶಗಳ ಸಾಚಾತನವನ್ನು ಮಹುವಾ ಪ್ರಶ್ನಿಸಿದ್ದು, ಪ್ರಧಾನಿ ಕಚೇರಿ ಒತ್ತಡದಿಂದ ಹೀರಾನಂದಾನಿ ಅಫಿಡವಿಟ್ ಸಲ್ಲಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ಅಫಿಡವಿಟ್ ಅನ್ನು ಸ್ವೀಕರಿಸಲಾಗಿದೆ ಎಂದಿರುವ ಸಂಸತ್ತಿನ ನೈತಿಕ ಸಮಿತಿ ಅಧ್ಯಕ್ಷ ವಿನೋದ್ ಸೋನ್‌ಕರ್, 'ಅಗತ್ಯ ಬಿದ್ದರೆ ಮಹುವಾ ಅವರನ್ನು ಸ್ಥಾಯಿ ಸಮಿತಿ ವಿಚಾರಣೆಗೆ ಕರೆಯಲಿದೆ ಎಂದಿದ್ದಾರೆ.
ಸುಖೋಯ್ ಯುದ್ಧ ವಿಮಾನದ ರಾಡಾರ್‌ಗೆ ಹಂಪಿ ವಿರೂಪಾಕ್ಷನ ಹೆಸರು
ಹೀರಾನಂದಾನಿ ಅಫಿಡವಿಟ್‌ನಲ್ಲೇನಿದೆ?:
ಯಾರು ಈ ಮೊಯಿತಾ?
ಅಮೆರಿಕದಲ್ಲಿ ವ್ಯಾಸಂಗ ಮುಗಿಸಿ, ಅಲ್ಲೇ ಯಡಿಕೆ ಬ್ಯಾಂಕರ್ ಆಗಿದ್ದವರು. 2009ರಲ್ಲಿ ಉದ್ಯೋಗ ತೊರೆದು ಯುವ ಕಾಂಗ್ರೆಸ್ ಸೇರಿದರು. 2010ರಲ್ಲಿ ತೃಣಮೂಲ ಕಾಂಗ್ರೆಸ್‌ಗೆ ಜಿಗಿದರು. 2016ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಗೆದ್ದರು. 2019ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಆಯ್ಕೆಯಾದರು.
ಯಾರು ಈ ದರ್ಶನ್?
ಶತಕೋಟ್ಯಧೀಶ ರಿಯಲ್ ಎಸ್ಟೇಟ್ ಉದ್ಯಮಿ ನಿರಂಜನ್ ಹೀರಾನಂದಾನಿ ಅವರ ಪುತ್ರ, ಬೆಂಗಳೂರು, ಮುಂಬೈ, ಹೈದರಾಬಾದ್, ಚೆನ್ನೈನಲ್ಲೂ ಇವರ ಕಂಪನಿಯ ಯೋಜನೆಗಳು ಇವೆ. ಮಹುವಾ ಮೊಯಿತಾ, ಮೂಲಕ ಸಂಸತ್ತಿನಲ್ಲಿ ನಿರ್ದಿಷ್ಟ ಪ್ರಶ್ನೆಗಳನ್ನು ಕೇಳಿಸುತ್ತಿದ್ದ ಆರೋಪವನ್ನು ಈಗ ಎದುರಿಸುತ್ತಿದ್ದಾರೆ.
ಏನಿದು ಪ್ರಶ್ನೆಗಾಗಿ ಲಂಚ ಹಗರಣ?
ಅದಾನಿ ಉದ್ಯಮ ಸಮೂಹ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಲು ಉದ್ಯಮಿ ದರ್ಶನ್, ಹೀರಾನಂದಾನಿ ಪರವಾಗಿ ತೃಣ ಮೂಲ ಕಾಂಗ್ರೆಸ್ ಸಂಸದ ಮಹುವಾ ಮೊಯಿತಾ ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಲಂಚ ತೆಗೆದುಕೊಂಡಿದ್ದಾರೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಕಳೆದ ವಾರ ಆರೋಪಿಸಿದ್ದರು. ಆದರೆ ಆರೋಪಗಳನ್ನು ನಿರಾಕರಿಸಿದ್ದಾರೆ ಮತ್ತು ಈ ಪ್ರಕರಣದ ತನಿಖೆ ಈಗ ಸಂಸದೀಯ ಸಮಿತಿ ಅಂಗಳ ಮುಟ್ಟಿದೆ.