ಬ್ರಾಹ್ಮಿನ್‌ ಜೀನ್ಸ್‌ ಸ್ಟಿಕ್ಕರ್‌ ಕಾರ್‌ಗೆ ಅಂಟಿಸಿ ಮತ್ತೊಮ್ಮೆ ಚರ್ಚೆಗೆ ನಾಂದಿ ಹಾಡಿದ ಬೆಂಗಳೂರು ಸಿಇಒ ಅನುರಾಧಾ ತಿವಾರಿ!

By Santosh NaikFirst Published Oct 7, 2024, 8:30 PM IST
Highlights

ಬ್ರಾಹ್ಮಿನ್ ಜೀನ್ಸ್ ಎಂಬ ಪೋಸ್ಟ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದ್ದ ಅನುರಾಧಾ ತಿವಾರಿ, ಈಗ ತಮ್ಮ ಕಾರಿನ ಮೇಲೆ ಬ್ರಾಹ್ಮಿನ್ ಜೀನ್ಸ್ ಸ್ಟಿಕ್ಕರ್ ಅಂಟಿಸುವ ಮೂಲಕ ಮತ್ತೆ ಚರ್ಚೆಗೆ ಗ್ರಾಸವಾಗಿದ್ದಾರೆ. ಈ ನಡೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಹಲವರು ಟೀಕೆಗಳನ್ನು ಮಾಡಿದ್ದಾರೆ.

ಬೆಂಗಳೂರು (ಅ.7): ಬ್ರಾಹ್ಮಿನ್‌ ಜೀನ್ಸ್‌ ಅಥವಾ ಅಚ್ಚ ಕನ್ನಡದಲ್ಲಿ ಬ್ರಾಹ್ಮಣ ವಂಶವಾಹಿ ಎನ್ನುವ ವಿಚಾರದ ಬಗ್ಗೆ ಸೋಶಿಯಲ್‌ಮೀಡಿಯಾದಲ್ಲಿ ಇತ್ತೀಚಿಗೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಕೆಲವು ವಾರಗಳ ಕಾಲ ಇದು ಸೋಶಿಯಲ್‌ ಮೀಡಿಯಾದಲ್ಲಿ ಟ್ರೆಂಡಿಂಗ್‌ ಆಗಿತ್ತು. ಜನರಲ್‌ ಕೆಟಗರಿಯಲ್ಲಿ ಬರುವ ನಾವು ನಮ್ಮ ಜಾತಿಯನ್ನು ಹೆಮ್ಮೆಯಿಂದ ತೋರಿಸಬೇಕು ಎನ್ನುವ ಅರ್ಥದಲ್ಲಿ ಬೆಂಗಳೂರು ಮೂಲದ ಕಂಪನಿಯೊಂದರ ಸಿಇಒ ಅನುರಾಧಾ ತಿವಾರಿ ಪೋಸ್ಟ್‌ ಮಾಡಿದ್ದರು. ಬೆಂಗಳೂರು ಮೂಲದ ಕಂಟೆಂಟ್‌ ಮಾರ್ಕೆಟಿಂಗ್‌ ಕಂಪನಿಯೊಂದರ ಸಿಇಒ ಆಗಿರುವ  ಅನುರಾಧಾ ತಿವಾರಿ ಆಗಸ್ಟ್‌ 22 ರಂದು ತಮ್ಮ ಎಕ್ಸ್‌ ಖಾತೆಯಲ್ಲಿ ಬ್ರಾಹ್ಮಿನ್‌ ಜೀನ್ಸ್‌ ಎನ್ನುವ ಹೆಸರಲ್ಲಿ ಒಂದು ಫೋಟೋವನ್ನು ಹಂಚಿಕೊಂಡಿದ್ದರು. ಸ್ಕೂಟರ್‌ಗೆ ಒರಗಿಕೊಂಡು ನಿಂತಿದ್ದ ಆಕೆ, ಕೈಯಲ್ಲಿದ್ದ ಎಳನೀರನ್ನು ಕುಡಿಯುತ್ತ, ತಮ್ಮ ತೋಳಲ್ಲಿ ಮೂಡಿಬಂದ ಬೈಸೆಪ್ಸ್‌ಅನ್ನು ತೋರಿಸಿದ್ದರು. ಇದಕ್ಕೆ ಬ್ರಾಹ್ಮಿನ್‌ ಜೀನ್ಸ್‌ ಎಂದು ಶೀರ್ಷಿಕೆ ನೀಡುವ ಮೂಲಕ ನನ್ನದು ಬ್ರಾಹ್ಮಣ ವಂಶವಾಹಿ ಎಂದು ತಿಳಿಸಿದ್ದರು.

ಈ ಪೋಸ್ಟ್‌ ಎಷ್ಟು ದೊಡ್ಡ ಮಟ್ಟಕ್ಕೆ ರೀಚ್‌ ಆಯಿತೆಂದರೆ, ಒಂದು ವಾರಗಳ ಕಾಲ ಸೋಶಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಆಗಿತ್ತು. ಅಷ್ಟು ದೊಡ್ಡ ಪ್ರಮಾಣದಲ್ಲಿ ಟ್ರೆಂಡ್‌ ಆಗಿದ್ದ ತನ್ನ ಬ್ರಾಹ್ಮಿನ್‌ ಜೀನ್ಸ್ ಪೋಸ್ಟ್‌ ವಿಚಾರವನ್ನು ಸ್ಟಿಕ್ಕರ್‌ಆಗಿ ಕಾರ್‌ಗೆ ಅಂಟಿಸಿಕೊಳ್ಳುವ ಮೂಲಕ ಅನುರಾಧಾ ತಿವಾರಿ ಮತ್ತೊಮ್ಮೆ ಚರ್ಚೆಗೆ ನಾಂದಿ ಹಾಡಿದ್ದಾರೆ.

'ಈಗ ತಾನೆ ನನ್ನ ಕಾರ್‌ಗೆ ಬ್ರಾಹ್ಮಿನ್‌ ಜೀನ್ಸ್‌ ಸ್ಟಿಕ್ಕರ್‌ನೊಂದಿಗೆ ಸ್ಟಾಂಪ್‌ ಮಾಡಿಸಿಕೊಂಡೆ. ಹುಟ್ಟಿನಿಂದಲೇ ಬುದ್ಧಿವಂತಳಾಗಿದ್ದೇನೆ. ಶಕ್ತಿಯಿಂದ ನನ್ನನ್ನು ನಾನು ಕಟ್ಟಿಕೊಂಡಿದ್ದೇನೆ ಮತ್ತು ಹಿಂದೂ ಧರ್ಮದ ಜ್ಯೋತಿಯನ್ನು ಹೊತ್ತಿದ್ದೇನೆ. ಬ್ರಾಹ್ಮಣನಾಗಿರುವುದಕ್ಕೆ ಹೆಮ್ಮೆ ಇದೆ' ಎಂದು ಅವರು ಬರೆದುಕೊಂಡಿದ್ದಾರೆ. ಅದರೊಂದಿಗೆ ತಮ್ಮ ಕಾರ್‌ನ ಹಿಂಭಾಗ ಹಾಗೂ ಅಕ್ಕ-ಪಕ್ಕದಲ್ಲಿ ಬ್ರಾಹ್ಮಿನ್‌ ಜೀನ್ಸ್‌ ಸ್ಟಿಕ್ಕರ್‌ ಹಾಕಿಸಿಕೊಂಡಿದ್ದಾರೆ. ಇದರಲ್ಲಿ ಪುಸ್ತಕ ಅದರ ಮೇಲೆ 'ಓಂ' ಅಕ್ಷರ, ಬಲಿಷ್ಠ ತೋಳು ಹಾಗೂ ಪರಶುರಾಮನ ಕಡುಗೋಲಿನ ಚಿತ್ರವಿದೆ.

ಅವರ ಈ ಪೋಸ್ಟ್‌ಗೂ ಸಾಕಷ್ಟು ಕಾಮೆಂಟ್‌ಗಳು ಬಂದಿವೆ. ಗಾಡಿಯ ಮೇಲೆ ಜಾತಿಯ ಸ್ಟಿಕ್ಕರ್‌ ಅಂಟಿಸಿದ್ದೀರಿ. ಆದರೆ, ನಿಮ್ಮ ವರ್ತನೆ ಜಾಟ್‌ ಹಾಗೂ ಗುಜ್ಜರ್‌ ರೀತಿ ಇದೆ. ನಾವು ಏನು ಅನ್ನೋದರ ಬಗ್ಗೆ ನಮಗೆ ಹೆಮ್ಮೆ ಇದೆ.  ಈ ರೀತಿಯಲ್ಲಿ ಶೋ ತೋರಿಸುವುದರ ಬದಲಿಗೆ ಸನಾತನ ಧರ್ಮವನ್ನು ಪ್ರಚಾರ ಮಾಡುವ ಬಗ್ಗೆ ಹಿಂದೂ ಸಮಾಜವನ್ನು ಒಗ್ಗೂಡಿಸುವ ಬಗ್ಗೆ ನಮ್ಮ ಪ್ರಯತ್ನಗಳಿರಬೇಕು ಎಂದಿದ್ದಾರೆ.

ಇದರಲ್ಲಿ ಕುಚೋದ್ಯ ಏನೆಂದರೆ, ಈಕೆ ಬ್ರಾಹ್ಮಿನ್‌ ಜೀನ್ಸ್‌ ಎನ್ನುವ ಮೂಲಕ ತನ್ನನ್ನು ತಾನು ಹಿಂದೂ ಧರ್ಮದ ಜ್ಯೋತಿಯನ್ನು ಹಿಡಿದವಳು ಎನ್ನುತ್ತಿದ್ದಾಳೆ. ಹಿಂದೂ ಧರ್ಮದ ಜ್ಯೋತಿ ಹಿಡಿದವರು ಎಂದಿಗೂ ಜಾತಿಯ ಪ್ರಾಮುಖ್ಯತೆಯನ್ನು ತೋರಿಸಿಕೊಳ್ಳೋದಿಲ್ಲ. ಅವರು ಇಡೀ ಹಿಂದೂ ಸಮಾಜದ ಬಗ್ಗೆ ಚಿಂತೆ ಮಾಡ್ತಾರೆ. ಈ ನಕಲಿ ಜಾತಿ ಅಭಿಮಾನದ ಹೆಸರಿನಲ್ಲಿ ನೀವು ನಿಮ್ಮಂತಹವರನ್ನು ಮಾತ್ರ ಮೂರ್ಖರನ್ನಾಗಿ ಮಾಡಬಹುದು, ಎಲ್ಲರನ್ನೂ ಅಲ್ಲ ಎಂದು ಮತ್ತೊಬ್ಬರು ಬರೆದಿದ್ದಾರೆ.

ಬೆಂಗಳೂರಿನ ಕಂಟೆಂಟ್‌ ಮಾರ್ಕೆಟಿಂಗ್‌ ಕಂಪನಿಯೊಂದರ ಸಿಇಒ ‘ಬ್ರಾಹ್ಮಿನ್‌ಜೀನ್ಸ್‌’ ಹೇಳಿಕೆ ತೀವ್ರ ವೈರಲ್‌

ಕಾರ್‌ನ ಮೇಲೆ ಸ್ಟಿಕ್ಕರ್‌ ಅಂಟಿಸುವ ಮೂಲಕ ತನ್ನನ್ನು ನಾನು ಬುದ್ದಿವಂತಲು ಎಂದು ಹೆಮ್ಮೆ ಪಟ್ಟುಕೊಳ್ಳುವ ಅಗತ್ಯವಿಲ್ಲ. ಆ ಶ್ರೇಷ್ಠತೆಯ ಭಾರವನ್ನು ಹೊತ್ತುಕೊಂಡು ನಿಜವಾಗಿಯೂ ದಣಿದಿರಬೇಕು? ಎಲ್ಲಾ ಅಹಂಕಾರವನ್ನು ಹಾದುಹೋಗಲು ರಸ್ತೆಗಳು ಸಾಕಷ್ಟು ವಿಶಾಲವಾಗಿವೆ ಎಂದು ಭಾವಿಸುತ್ತೇವೆ' ಎಂದು ಬರೆದಿದ್ದಾರೆ. ಈಕೆಯ ಬ್ರಾಹ್ಮಿನ್‌ ಜೀನ್ಸ್‌ ಟ್ವೀಟ್‌ ಎಷ್ಟು ವೈರಲ್‌ ಆಗಿತ್ತೆಂದರೆ, 8.3 ಮಿಲಿಯನ್‌ ವೀಕ್ಷಣೆಗಳನ್ನು ಎಕ್ಸ್‌ನಲ್ಲಿ ಕಂಡಿತ್ತು. ಅಂದಾಜು 4700 ಮಂದಿ ಇದಕ್ಕೆ ಕಾಮೆಂಟ್‌ ಮಾಡಿದ್ದರೆ, 5800 ಮಂದಿ ರೀಟ್ವೀಟ್‌ ಮಾಡಿದ್ದರು. 35 ಸಾವಿರ ಮಂದಿ ಈ ಟ್ವೀಟ್‌ ಲೈಕ್‌ ಮಾಡಿದ್ದರೆ,  2 ಸಾವಿರ ಮಂದಿ ಇದನ್ನು ಬುಕ್‌ಮಾರ್ಕ್‌ ಮಾಡಿದ್ದರು.

Latest Videos

ವಿವಾದಕ್ಕೆ ನಾಂದಿ ಹಾಡಿದ ಬೆಂಗಳೂರು ಮಹಿಳಾ ಉದ್ಯಮಿಯ "ಬ್ರಾಹ್ಮಣ ಜೀನ್‌" ಪೋಸ್ಟ್‌! ಅಂತದ್ದೇನಿದೆ?

Just got my car stamped with

Born of wisdom, built on strength, and a torchbearer of Hinduism.

Proud to be a Brahmin ! pic.twitter.com/maWXqIUWWd

— Anuradha Tiwari (@talk2anuradha)
click me!