ಭಾರತದ ಈ ರೈಲಿನಲ್ಲಿ ಪ್ರಯಾಣಿಸಲು ಯಾರಿಗೂ ಟಿಕೆಟ್ ಬೇಕಿಲ್ಲ, ಸಂಪೂರ್ಣ ಉಚಿತ!

By Chethan Kumar  |  First Published Oct 7, 2024, 6:53 PM IST

ಇದು ಭಾರತದ ಏಕೈಕ ರೈಲು, ಇಲ್ಲಿ ನೀವು ಟಿಕೆಟ್ ಖರೀದಿಸಿ ಪ್ರಯಾಣ ಮಾಡಬೇಕಿಲ್ಲ. ಕಾರಣ ಇದು ಸಂಪೂರ್ಣ ಉಚಿತ. ಕಳೆದ 75 ವರ್ಷಗಳಿಂದ ಈ ರೈಲು ಉಚಿತವಾಗಿ ಸೇವೆ ನೀಡುತ್ತಿದೆ. ಹಾಗಾದರೆ ಈ ಫ್ರೀ ರೈಲು ಯಾವುದು?


ನವದೆಹಲಿ(ಅ.07) ಭಾರತೀಯ ರೈಲು ಜಗತ್ತಿನ ಅತೀ ದೊಡ್ಡ ರೈಲು ಸಂಪರ್ಕದಲ್ಲೊಂದು. ಪ್ರತಿ ದಿನ 13,000ಕ್ಕೂ ಹೆಚ್ಚು ರೈಲುಗಳು ಪ್ರಯಾಣಿಕರನ್ನು ಹೊತ್ತು ಸೇವೆ ನೀಡುತ್ತಿದೆ. ಅತ್ಯಂತ ಕಡಿಮೆ ದರದಲ್ಲಿ ಪ್ರಯಾಣಿಕರಿಗೆ ಸೇವೆ ನೀಡುತ್ತಿರುವ ಏಕೈಕ ಸಾರಿಗೆ ವ್ಯವಸ್ಥೆಯಾಗಿ ಭಾರತೀಯ ರೈಲು ಗುರುತಿಸಿಕೊಂಡಿದೆ. ಆದರೆ ಕಳೆದ 75 ವರ್ಷಗಳಿಂದ ಭಾರತದಲ್ಲಿ ಏಕೈಕ ರೈಲು ಪ್ರಯಾಣಿಕರಿಗೆ ಉಚಿತ ಸೇವೆ ನೀಡುತ್ತಿದೆ. ಈ ರೈಲಿನಲ್ಲಿ ಪ್ರಯಾಣಿಸಲು ಯಾರಿಗೂ ಟಿಕೆಟ್ ಬೇಕಿಲ್ಲ. ಎಲ್ಲಾ ಪ್ರಯಾಣಿಕರು ಈ ರೈಲಿನಲ್ಲಿ ಉಚಿತವಾಗಿ ಪ್ರಯಾಣಿಸಲು ಸಾಧ್ಯವಿದೆ.

ಭಾರತದಲ್ಲಿ ಪ್ರಯಾಣಿಕರಿಗೆ ಉಚಿತ ಸೇವೆ ನೀಡುತ್ತಿರುವ ಏಕೈಕ ರೈಲು, ಬಾಕ್ರಾ-ನಂಗಲ್ ಟ್ರೈನ್. ಹೌದು, ಬಾಕ್ರಾ-ನಂಗಲ್ ನಡುವೆ ಸೇವೆ ನೀಡುತ್ತಿರುವ ರೈಲು ಎಲ್ಲಾ ಪ್ರಯಾಣಿಕರಿಗೆ ಸಂಪೂರ್ಣ ಉಚಿತ. 1948ರಲ್ಲಿ ಬಾಕ್ರಾ-ನಂಗಲ್ ರೈಲು ಸೇವೆ ಆರಂಭಗೊಂಡಿತ್ತು. ವಿಶೇಷ ಅಂದರೆ ಈ ಬಾಕ್ರಾ-ನಂಗಲ್ ದಾರಿಯಲ್ಲಿ ರೈಲು ಸೇವೆ ಆರಂಭಗೊಂಡಿದ್ದು, ಡ್ಯಾಮ್ ನಿರ್ಮಾಣದ ವೇಳೆ. ಜನಪ್ರಿಯ ಬಾಕ್ರಾ -ನಂಗಲ್ ಡ್ಯಾಮ್ ನಿರ್ಮಾಣದ ವೇಳೆ ದೊಡ್ಡ ಯಂತ್ರಗಳು, ಕಬ್ಬಿಣ, ಕಲ್ಲು ಸೇರಿದಂತೆ ಸರಕುಗಳನ್ನು ಸಾಗಿಸಲು ರೈಲು ಟ್ರಾಕ್ ನಿರ್ಮಾಣ ಮಾಡಲಾಯಿತು.

Latest Videos

undefined

ದೀಪಾವಳಿ ಸೇರಿ ಸಾಲು ಸಾಲು ಹಬ್ಬಕ್ಕೆ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ ಭಾರತೀಯ ರೈಲ್ವೇ!

ಡ್ಯಾಮ್ ನಿರ್ಮಾಣದ ವೇಳೆ ಕಾಮಾಗಾರಿಗೆ ಅನುಕೂಲವಾಗಲು ಈ ರೈಲು ಹಳಿ ನಿರ್ಮಾಣಗೊಂಡಿತು. ಡ್ಯಾಮ್ ನಿರ್ಮಾಣದ ಬಳಿಕವೂ ಇಲ್ಲಿರುವ ಗ್ರಾಮಗಳ ಸಂಪರ್ಕಿಸಲು ಈ ರೈಲು ಸೇವೆ ಮುಂದುವರಿಸಲಾಯಿತು. ವಿಶೇಷ ಅಂದರೆ ಬಾಕ್ರಾ ನಂಗಲ್ ಡ್ಯಾಮ್ ನಿರ್ಮಾಣದ ವೇಳೆ ಈ ರೈಲು ಯಂತ್ರಗಳನ್ನು,ಸರಕುಗಳನ್ನು ಉಚಿತವಾಗಿ ಸಾಗಿಸುತ್ತಿತ್ತು. ಬಳಿಕ ಇದು ಹಾಗೇ ಪ್ರಯಾಣಿಕರಿಗೂ ಉಚಿತ ಸೇವೆಯನ್ನು ಮುಂದುವರಿಸಿತು.

ಆರಂಭದಲ್ಲಿ ಸ್ಟೀಮ್ ಎಂಜಿನ್‌ನಲ್ಲಿ ಚಲಿಸುತ್ತಿದ್ದ ಈ ರೈಲು 1953ರಲ್ಲಿ ಅಮೆರಿಕದಿಂದ ಆಧುನಿಕ ಎಂಜಿನ್ ತರಿಸಿಕೊಳ್ಳಲಾಗಿತ್ತು. ನಂಗಲ್ ರೈಲು ನಿಲ್ದಾಣ ಹಾಗೂ ಬಾಕ್ರಾ ರೈಲು ನಿಲ್ದಾಣದ ನಡುವಿನ ಅಂತರ 27.3 ಕಿಲೋಮೀಟರ್. ಬೆಳಗ್ಗೆ 7.05ಕ್ಕೆ ನಂಗಲ್ ರೈಲ್ವೇ ನಿಲ್ದಾಣದಿಂದ ಹೊರಡಲಿದೆ. ಬೆಳಗ್ಗೆ 8.20ಕ್ಕೆ ಬಾಕ್ರಾ ರೈಲು ನಿಲ್ದಾಣಕ್ಕೆ ತಲುಪಲಿದೆ. ಬಳಿಕ ಇದೇ ರೀತಿ ಬಾಕ್ರಾದಿಂದ ಮರಳಿ ನಂಗಲ್ ರೈಲು ನಿಲ್ದಾಣ ತಲುಪಲಿದೆ. ಎರಡನೇ ರೈಲು ಮಧ್ಯಾಹ್ನ 3.05ಕ್ಕೆ ಹೊರಟು ಸಂಜೆ 4.20ರ ವೇಳೆ ಬಾಕ್ರಾಗೆ ತಲುಪಲಿದೆ.

ಹಿರಿಯ ನಾಗರೀಕರಿಗೆ ರೈಲಿನಲ್ಲಿದೆ 3 ವಿಶೇಷ ಸೌಲಭ್ಯ, ಟಿಕೆಟ್ ಬುಕಿಂಗ್ ಮುನ್ನ ತಿಳಿದುಕೊಳ್ಳಿ!

ಇಲ್ಲಿನ ಗ್ರಾಮಸ್ಥರು ಈ ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ. ಗ್ರಾಮಸ್ಥರು ಮಾತ್ರವಲ್ಲ. ಈ ರೈಲಿನಲ್ಲಿ ಯಾರೇ ಪ್ರಯಾಣಿಸಿದರೂ ಉಚಿತವಾಗಿ ಪ್ರಯಾಣ ಮಾಡಬಹುದು. ಕಳೆದ 75 ವರ್ಷಗಳಿಂದ ರೈಲು ಉಚಿತ ಸೇವೆ ನೀಡುತ್ತಲೇ ಬಂದಿದೆ. 

click me!