
ನವದೆಹಲಿ(ಮೇ.01): ಕೊರೋನಾ ಆತಂಕದ ನಡುವೆ ಮಾಧ್ಯಮಕ್ಕೆ ಮತ್ತೊಂದು ಬರಸಿಡಿಲು ಎರಗಿದೆ. ಆಜ್‌ತಕ್ ಸುದ್ದಿವಾಹಿನಿ ನಿರೂಪಕ, ಪತ್ರಕರ್ತ ರೋಹಿತ್ ಸರ್ದಾನ ನಿಧನದ ಬೆನ್ನಲ್ಲೇ, ಇದೀಗ ದೂರದರ್ಶನ ವಾಹನಿ , ಬ್ರಹ್ಮಕುಮಾರಿ ಟಿವಿ ನಿರೂಪಕಿ ಕಾನುಪ್ರಿಯಾ ಕೊರೋನಾಗೆ ಬಲಿಯಾಗಿದ್ದಾರೆ.
ಖ್ಯಾತ ಟಿವಿ ಪತ್ರಕರ್ತ ರೋಹಿತ್ ಸರ್ದಾನ ಕೋವಿಡ್‌ಗೆ ಬಲಿ: ಮೋದಿ ಸೇರಿ ಗಣ್ಯರ ಸಂತಾಪ!.
ಕಾನುಪ್ರಿಯ ಕೇವಲ ನ್ಯೂಸ್ ಆ್ಯಂಕರ್ ಮಾತ್ರವಲ್ಲ, ನಟಿ ಹಾಗೂ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದರು. ಕೊರೋನಾದಿಂದ ಅಸ್ವಸ್ಥರಾಗಿದ್ದ ಕಾನುಪ್ರಿಯಾಳನ್ನು 11 ಸೆಕ್ಟರ್ ನೋಯ್ಡಾದಲ್ಲಿ ಆಸ್ಪತ್ರೆಗೆ ದಾಖಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ(ಏ.30) ನಿಧನರಾಗಿದ್ದಾರೆ.
ತನ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲರ ಪ್ರಾರ್ಥನೆ ಅಗತ್ಯ ಎಂದು ಕಾನುಪ್ರಿಯಾ ಎರಡು ದಿನಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಕೊರೋನಾ ಸೋಂಕು ಶ್ವಾಸಕೋಶಕ್ಕೆ ತಗುಲಿತ್ತು. ಹೀಗಾಗಿ ಕಡಿಮೆ ಆಮ್ಲಜನಕ ಮಟ್ಟ ಮತ್ತು ತೀವ್ರ ಜ್ವರದಿಂದಾಗಿ ಕಾನುಪ್ರಿಯಾ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಆಧ್ಯಾತ್ಮಿಕ ಗುರು ಮತ್ತು ಬ್ರಹ್ಮ ಕುಮಾರಿ ಸೋದರಿ ಬಿ.ಕೆ.ಶಿವಾನಿ ಕಾನುಪ್ರಿಯಾ ನಿಧನ ವಾರ್ತೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ನೋವಿನಿಂದ ಹಂಚಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ