ಬಾಯ್‌ಫ್ರೆಂಡ್ ಕೈಕೊಟ್ಟಿದ್ದಕ್ಕೆ ರ‍್ಯಾಪಿಡೋ ರೈಡರ್‌ಗೆ ₹1,000 ಆಫರ್ ಕೊಟ್ಟು ಸಿನಿಮಾಗೆ ಕರೆದ ಯುವತಿ!

Published : Nov 25, 2026, 07:40 PM IST
Woman Asks Rapido Rider to Be Her Movie Date After Boyfriend Backs Out

ಸಾರಾಂಶ

ಬಾಯ್‌ಫ್ರೆಂಡ್ ಕೊನೆಯ ಕ್ಷಣದಲ್ಲಿ ಸಿನಿಮಾ ಪ್ಲಾನ್ ಕ್ಯಾನ್ಸಲ್ ಮಾಡಿದ್ದಕ್ಕೆ ಯುವತಿಯೊಬ್ಬಳು ರ‍್ಯಾಪಿಡೋ ರೈಡರ್‌ನನ್ನೇ ಸಿನಿಮಾ ನೋಡಲು ಆಹ್ವಾನಿಸಿದ್ದಾಳೆ ಎನ್ನಲಾದ ಆಡಿಯೋ ವೈರಲ್ ಆಗಿದೆ. ಮೂರು ಗಂಟೆ ಸಿನಿಮಾ ನೋಡಲು 1,000 ರೂ. ನೀಡುವ ಆಫರ್ ಕೂಡ ಚರ್ಚೆಯಾಗಿದೆ. ಆದರೆ ಈ ಆಡಿಯೋ 250ಕ್ಕೂ ಹೆಚ್ಚು ವಿಡಿಯೋಗಳಲ್ಲಿ ಬಳಕೆಯಾಗಿದ್ದು, ಅದರ ನೈಜತೆಯ ಬಗ್ಗೆ ಅನುಮಾನ ಮೂಡಿದೆ.

ಬಾಯ್‌ಫ್ರೆಂಡ್ ಕೈಕೊಟ್ಟಿದ್ದಕ್ಕೆ ರ‍್ಯಾಪಿಡೋ ರೈಡರ್‌ಗೆ ಸಿನಿಮಾ ಆಫರ್! ಯುವತಿಯ ವಿಚಿತ್ರ ಪ್ರಸ್ತಾಪದ ಆಡಿಯೋ ವೈರಲ್

ಸಿನಿಮಾ ನೋಡಲು ಬಾಯ್‌ಫ್ರೆಂಡ್ ಜೊತೆ ಪ್ಲಾನ್ ಮಾಡಿದ್ದೀರಾ? ಕೊನೇ ಕ್ಷಣದಲ್ಲಿ ಆತ ಬರುವುದಿಲ್ಲ ಎಂದು ಹೇಳಿದರೆ ಏನು ಮಾಡುತ್ತೀರಿ? ಬಹುಶಃ ಸ್ನೇಹಿತರನ್ನು ಕರೆಯಬಹುದು ಅಥವಾ ಸಿನಿಮಾ ನೋಡುವ ಪ್ಲಾನ್ ಕ್ಯಾನ್ಸಲ್ ಮಾಡಬಹುದು. ಆದರೆ ಇಲ್ಲೊಬ್ಬ ಯುವತಿ ಮಾಡಿದ್ದೇ ಬೇರೆ! ಸಿನಿಮಾ ನೋಡಲು ಬಾಯ್‌ಫ್ರೆಂಡ್ ಕೈಕೊಟ್ಟಿದ್ದಕ್ಕೆ ತನ್ನ ರ‍್ಯಾಪಿಡೋ ರೈಡರ್‌ನನ್ನೇ ಸಿನಿಮಾ ನೋಡಲು ಬರುವಂತೆ ಕೇಳಿಕೊಂಡಿದ್ದಾಳೆ. ಈ ವಿಚಿತ್ರ ಸಂಭಾಷಣೆಯ ಆಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರಾಪಿಡೋ ರೈಡರ್‌ಗೆ ಯುವತಿ ಕೇಳಿದ್ದೇನು?

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆಡಿಯೋ ಸಂಭಾಷಣೆಯಲ್ಲಿ ಯುವತಿಯೊಬ್ಬಳು ರ‍್ಯಾಪಿಡೋ ರೈಡರ್‌ಗೆ, 'ಮೇರೆ ಸಾಥ್ ಮೂವಿ ದೇಖನೇ ಚಲೋಗೇ?' (ನನ್ನ ಜೊತೆ ಸಿನಿಮಾ ನೋಡಲು ಬರುತ್ತೀರಾ?) ಎಂದು ಕೇಳುತ್ತಾಳೆ.

ತಾನು ಈಗಾಗಲೇ ಎರಡು ಸಿನಿಮಾ ಟಿಕೆಟ್‌ಗಳನ್ನು ಖರೀದಿಸಿರುವುದಾಗಿಯೂ, ಆದರೆ ಕೊನೆಯ ಕ್ಷಣದಲ್ಲಿ ಬಾಯ್‌ಫ್ರೆಂಡ್ ಸಿನಿಮಾ ನೋಡಲು ಬರುವುದಿಲ್ಲ ಎಂದು ಹೇಳಿರುವುದಾಗಿಯೂ ತಿಳಿಸುತ್ತಾಳೆ. ಒಬ್ಬಳೇ ಸಿನಿಮಾ ನೋಡಲು ಇಷ್ಟವಿಲ್ಲದ ಕಾರಣ ತನ್ನ ಜೊತೆ ಬರುವಂತೆ ರೈಡರ್‌ಗೆ ಮನವಿ ಮಾಡುತ್ತಾಳೆ.

ಮೂರು ಗಂಟೆ ಸಿನಿಮಾ ನೋಡಲು 1,000 ರೂ. ಆಫರ್!

ಮೊದಲಿಗೆ ಯುವತಿಯ ಈ ಪ್ರಸ್ತಾಪ ಕೇಳಿ ರೈಡರ್ ಸ್ವಲ್ಪ ಹಿಂಜರಿಯುತ್ತಾನೆ. ಆದರೆ ಆಕೆ ಸುಮಾರು ಮೂರು ಗಂಟೆಗಳ ಕಾಲ ತನ್ನ ಜೊತೆ ಸಿನಿಮಾ ನೋಡಲು ಹೆಚ್ಚುವರಿಯಾಗಿ 1,000 ರೂಪಾಯಿ ನೀಡುವುದಾಗಿ ಹೇಳುತ್ತಾಳೆ. ಕೊನೆಗೆ ರೈಡರ್ ಈ ಪ್ರಸ್ತಾಪಕ್ಕೆ ಒಪ್ಪಿಕೊಳ್ಳುತ್ತಾನೆ ಎನ್ನಲಾಗಿದೆ.

ಈ ನಡುವೆ ಯುವತಿ ರೈಡರ್‌ನ ದಿನದ ಸಂಪಾದನೆ ಎಷ್ಟು ಎಂದು ಕೇಳುತ್ತಾಳೆ. ಅದಕ್ಕೆ ಆತ ದಿನಕ್ಕೆ ಸುಮಾರು 1,000ರಿಂದ 1,500 ರೂಪಾಯಿ ಸಂಪಾದಿಸುವುದಾಗಿ ಹೇಳುತ್ತಾನೆ. ಈ ಸಂಭಾಷಣೆ ಕೇಳಿದ ನೆಟ್ಟಿಗರು ತಮಾಷೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಕೆಲವರಂತೂ ಇನ್ನು ಮುಂದೆ ನಾವೂ ರಾಪಿಡೋ ರೈಡರ್‌ಗಳಾಗಬೇಕು ಎಂದು ತಮಾಷೆ ಮಾಡಿದ್ದಾರೆ.

ವೈರಲ್ ಆಡಿಯೋ ನಿಜವೇ? ಇಲ್ಲಿದೆ ಅಸಲಿ ಟ್ವಿಸ್ಟ್!

ಈ ಕಥೆ ಎಷ್ಟು ಕುತೂಹಲಕಾರಿಯಾಗಿದೆಯೋ, ಅಷ್ಟೇ ಅನುಮಾನಗಳಿಗೂ ಕಾರಣವಾಗಿದೆ. ವರದಿಯ ಪ್ರಕಾರ, ಇದೇ ಆಡಿಯೋವನ್ನು 250ಕ್ಕೂ ಹೆಚ್ಚು ಇನ್‌ಸ್ಟಾಗ್ರಾಂ ವಿಡಿಯೋಗಳಲ್ಲಿ ಮರುಬಳಕೆ ಮಾಡಲಾಗಿದೆ. ಹೀಗಾಗಿ ಇದು ನಿಜವಾದ ಸಂಭಾಷಣೆಯೇ ಅಥವಾ ಮನರಂಜನೆಗಾಗಿ ಸೃಷ್ಟಿಸಿದ ಸ್ಕ್ರಿಪ್ಟೆಡ್ ಆಡಿಯೋವೇ ಎಂಬ ಪ್ರಶ್ನೆ ಎದ್ದಿದೆ.

ಈ ಘಟನೆಯನ್ನು ಸ್ವತಂತ್ರವಾಗಿ ಪರಿಶೀಲಿಸಿ ಖಚಿತಪಡಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ವರದಿಯೂ ಸ್ಪಷ್ಟಪಡಿಸಿದೆ. ಹೀಗಾಗಿ ಯುವತಿ ಮತ್ತು ರಾಪಿಡೋ ರೈಡರ್ ನಡುವಿನ ಸಂಭಾಷಣೆ ನಿಜವೆಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ.

ಒಟ್ಟಿನಲ್ಲಿ, ಬಾಯ್‌ಫ್ರೆಂಡ್ ಸಿನಿಮಾ ಪ್ಲಾನ್ ಕ್ಯಾನ್ಸಲ್ ಮಾಡಿದ ಕಥೆಗಿಂತಲೂ ರಾಪಿಡೋ ರೈಡರ್‌ಗೆ ಸಿನಿಮಾ ಆಫರ್ ನೀಡಿದ ಈ ವೈರಲ್ ಆಡಿಯೋವೇ ಈಗ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಿತೇಶ್ ದೇಶಮುಖ್-ಜೆನೆಲಿಯಾ ಫೋಟೋದಲ್ಲಿ ಅಂತಹದ್ದೇನಿದೆ? ರಾಹುಲ್ ಗಾಂಧಿ ಇದನ್ನು ಶೇರ್ ಮಾಡಿದ್ದೇಕೆ?
ವೈನ್ ಶಾಪ್, ಬಾರಿಗೆ ಎಂಟ್ರಿ ಮೊದಲೇ ವೈದ್ಯರಿಂದ ಲಿವರ್ ಕಿಡ್ನಿ ಪರೀಕ್ಷೆ, ಸರ್ಕಾರದಿಂದ ಹೊಸ ಸ್ಕೀಂ