ವೈನ್ ಶಾಪ್, ಬಾರಿಗೆ ಎಂಟ್ರಿ ಮೊದಲೇ ವೈದ್ಯರಿಂದ ಲಿವರ್ ಕಿಡ್ನಿ ಪರೀಕ್ಷೆ, ಸರ್ಕಾರದಿಂದ ಹೊಸ ಸ್ಕೀಂ

Published : Nov 25, 2026, 06:02 PM IST
Health Checks Before Entering Bars and Wine Shops

ಸಾರಾಂಶ

ವೈನ್ ಶಾಪ್, ಬಾರಿಗೆ ಎಂಟ್ರಿ ಕೊಡುವ ಮೊದಲೇ ವೈದ್ಯರ ತಂಡವೊಂದು ಲಿವರ್, ಕಿಡ್ನಿ, ರಕ್ತ ಪರೀಕ್ಷೆ ನಡೆಸುತ್ತಿದೆ. ಇಷ್ಟೇ ಅಲ್ಲ ಕೌನ್ಸಲಿಂಗ್ ಕೂಡ ಮಾಡಲಾಗುತ್ತಿದೆ. ಸರ್ಕಾರವೇ ಹೊಸ ಸ್ಕೀಂ ಜಾರಿಗೊಳಿಸಿದೆ.

ಭೋಪಾಲ್ (ನ.25) ಮದ್ಯಪಾನ ಆರೋಗ್ಯಕ್ಕೆ ಹಾನಿಕರ. ಮದ್ಯ ಕುಡಿಯುವರು ವೈನ್ ಶಾಪ್ ಅಥವಾ ಬಾರ್‌ಗೆ ಪ್ರವೇಶಕ್ಕೆ ಮುಂದಾದರೆ ಮೊದಲು ಕೌಂಟರ್ ಸಿಗಲ್ಲ. ಬದಲಿಗೆ ವೈದ್ಯರು ಸಿಗುತ್ತಾರೆ. ಲಿವರ್, ಕಿಡ್ನಿ ಸೇರಿದಂತೆ ಕೆಲ ತಪಾಸಣೆ ನಡೆಸುತ್ತಾರೆ. ರಕ್ತ ಪರೀಕ್ಷೆಯನ್ನು ನಡೆಸಲಾಗುತ್ತದೆ. ಇಷ್ಟೇ ಅಲ್ಲ ಕೌನ್ಸಲಿಂಗ್ ಮೂಲಕ ಮದ್ಯಪಾನದ ಪರಿಣಾಮ, ಆರೋಗ್ಯ ಸಮಸ್ಯೆಗಳ ಕುರಿತು ವಿವರಿಸಲಾಗುತ್ತದೆ. ಈ ವಿಶೇಷ ಪ್ರಯೋಗವನ್ನು ಸರ್ಕಾರವೇ ಜಾರಿಗೊಳಿಸಿದೆ. ಹೌದು ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಹೊಸ ಸ್ಕೀಂ ಜಾರಿಗೊಂಡಿದೆ.

ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ತಪಾಸಣೆ

ಅತೀಯಾದ ಮದ್ಯಪಾನದಿಂದ ಆರೋಗ್ಯದ ಮೇಲೆ ಆಗುತ್ತಿರುವ ಪರಿಣಾಮಗಳ ಕುರಿತು ಜಾತಿ ಮೂಡಿಸಲು ಸ್ಥಳೀಯ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ. ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ವಿಶೇಷ ಅಭಿಯಾನ ಆರಂಭಿಸಿದೆ.ವೈದ್ಯದ ಅಂಗಡಿ ಮುಂದೆ, ಬಾರ್ ಶಾಪ್ ಮುಂದೆ ವೈದ್ಯರು, ಆರೋಗ್ಯ ಸಿಬ್ಬಂಧಿಗಳು ಠಿಕಾಣಿ ಹೂಡಿದ್ದಾರೆ. ಬಾರ್, ವೈನ್ ಶಾಪ್‌ಗೆ ಎಂಟ್ರಿಕೊಡುವ ಗ್ರಾಹಕರನ್ನು ತಪಾಸಣೆ ಮಾಡುತ್ತಿದ್ದಾರೆ. ಇಷ್ಟೇ ಅಲ್ಲ ಆಪ್ತ ಸಮಾಲೋಚನೆ ನಡೆಸಲಾಗುತ್ತಿದೆ.

ಅಬಕಾರಿ ಇಲಾಖೆ ಸಾಥ್

ಆರೋಗ್ಯ ಇಲಾಖೆ ಹಾಗೂ ಅಬಕಾರಿ ಇಲಾಖೆ ಎರಡೂ ತಂಡಗಳು ಸ್ಥಳದಲ್ಲಿದ್ದು ಈ ಅಭಿಯಾನಕ್ಕೆ ಸಾಥ್ ನೀಡುತ್ತಿದೆ.ಈ ತಂಡಗಳು ಮದ್ಯದ ಅಂಗಡಿಗೆ ಬರುವ ಗ್ರಾಹಕರನ್ನು ತಪಾಸಣೆಗೆ ಒಳಪಡುವಂತೆ ಸಲಹೆ ನೀಡುತ್ತಿದೆ. ಗಂಭೀರ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುವ, ಆರೋಗ್ಯ ತಪಾಸಣೆ ಮಾಡದೆ ಕುಡಿತದಿಂದ ಆಗಿರುವ ಪರಿಣಾಮಗಳ ಕುರಿತು ವೈದ್ಯರು ತಪಾಸಣೆ ಮೂಲಕ ಬಿಚ್ಚಿಡುತ್ತಿದ್ದಾರೆ. ಇದರಿಂದ ಹಲವರು ಮದ್ಯ ತೊರೆಯಲು ಮನಸ್ಸು ಮಾಡಿದ್ದಾರೆ.

ಲಿವರ್ (Liver) ಮತ್ತು ಕಿಡ್ನಿ (Kidney) ಆರೋಗ್ಯವನ್ನು ಪತ್ತೆಹಚ್ಚುವ ಪರೀಕ್ಷೆಗಳು ನಡೆಸಲಾಗುತ್ತಿದೆ. ರಕ್ತದ ಮಾದರಿಗಳನ್ನೂ ಸಂಗ್ರಹಿಸಲಾಗುತ್ತಿದೆ. ಮದ್ಯಪಾನದ ಚಟವು ದೇಹದ ಮೇಲೆ ಇನ್ನಷ್ಟು ಗಂಭೀರ ಪರಿಣಾಮ ಬೀರುವ ಮೊದಲೇ ಆರೋಗ್ಯ ತೊಡಕುಗಳನ್ನು ಗುರುತಿಸಿ, ವೈದ್ಯಕೀಯ ಸಲಹೆ ಪಡೆಯುವಂತೆ ಪ್ರೇರೇಪಿಸುವುದು ಇದರ ಉದ್ದೇಶವಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.

ಮದ್ಯ ಸೇವನೆಯಿಂದ ಹಲವರು ಮೃತ

ಸಾಗರ್ ಜಿಲ್ಲೆಯಲ್ಲಿ ಕಳ್ಳಬಟ್ಟಿ, ಕಳಪೆ ಗುಣಮಟ್ಟದ, ಅಕ್ರಮ ಮದ್ಯಗಳ ಸೇವಿಸಿ ಹಲವರು ಮೃತಪಟ್ಟಿದ್ದಾರೆ. ಇದೇ ವೇಳೆ ಹಲವರು ಮದ್ಯಸೇವನೆಯಿಂದ ಎದುರಾದ ಗಂಭೀರ ಆರೋಗ್ಯ ಸಮಸ್ಯೆಗೆ ತುತ್ತಾಗಿರುವುದು ವರಿಯಾಗಿದೆ. ಈ ಕುರಿತು ಜಾಗೃತಿ ಮೂಡಿಸಲು ಜಿಲ್ಲಾಧಿಕಾರಿಗಳು ಹೊಸ ಪ್ರಯೋಗ ಮಾಡಿದ್ದಾರೆ.

ಆರೋಗ್ಯ ಇಲಾಖೆಯ ಡಾ. ಧರ್ಮೇಂದ್ರ ಸಿಂಗ್ ಮಾತನಾಡಿ, ಅತಿಯಾಗಿ ಮದ್ಯಪಾನ ಮಾಡುವವರ ಲಿವರ್ ಮತ್ತು ಕಿಡ್ನಿ ಸ್ಥಿತಿಯನ್ನು ಪರೀಕ್ಷಿಸುವುದರ ಮೇಲೆ ಗಮನ ಕೇಂದ್ರೀಕರಿಸಲಾಗಿದೆ ಎಂದಿದ್ದಾರೆ. ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ (CMHO) ಡಾ. ದೇವೇಶ್ ಪಟೇರಿಯಾ ಮಾತನಾಡಿ, ಜನರಿಗೆ ಆರೋಗ್ಯದ ಬಗ್ಗೆ ಕೌನ್ಸೆಲಿಂಗ್ ನೀಡಲಾಗುತ್ತಿದ್ದು, ಪರವಾನಗಿ ಪಡೆದ ಸರ್ಕಾರಿ ಮದ್ಯದಂಗಡಿಗಳಿಂದ ಮಾತ್ರ ಮದ್ಯ ಖರೀದಿಸುವಂತೆ, ಸಮರ್ಪಕವಾಗಿ ಆಹಾರ ಸೇವಿಸುವಂತೆ ಹಾಗೂ ಆರೋಗ್ಯ ಸಮಸ್ಯೆಗಳಿದ್ದರೆ ವೈದ್ಯರನ್ನು ಸಂಪರ್ಕಿಸುವಂತೆ ಸಲಹೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಅಧಿಕಾರಿಗಳು ಮತ್ತು ವೈದ್ಯರು ಹೇಳುವುದೇನು?

ಈ ಕುರಿತು ಮಾತನಾಡಿದ ಅಬಕಾರಿ ಸಬ್-ಇನ್‌ಸ್ಪೆಕ್ಟರ್ ಶೈಲೇಂದ್ರ ಸಿಂಗ್ (Shailendra Singh), "ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದವರು ಅತಿಯಾದ ಮದ್ಯ ಸೇವನೆಯಿಂದ ಮೃತಪಟ್ಟ ಇತ್ತೀಚಿನ ಪ್ರಕರಣಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಹಿರಿಯ ಅಧಿಕಾರಿಗಳ ಸೂಚನೆಯಂತೆ ಮದ್ಯದಂಗಡಿಗಳ ಬಳಿ ತಂಡಗಳನ್ನು ನಿಯೋಜಿಸಿ, ಮದ್ಯ ಸೇವಿಸುವವರನ್ನು ಪರೀಕ್ಷಿಸಿ ಸಂಭಾವ್ಯ ಅಪಾಯಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ" ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುತ್ರಿ ಮದುವೆ ವೇಳೆ ನರ್ತಿಸುತ್ತಲೇ ಕೊನೆಯುಸಿರೆಳೆದ ಅಪ್ಪ! ಸಾವಿನ ಸುದ್ದಿ ಮುಚ್ಚಿಟ್ಟು ವಿವಾಹ- ವಿಡಿಯೋ ವೈರಲ್​
ಆಪರೇಷನ್ ಸಿಂಧೂರ್ ಬಳಿಕ ಭಾರತಕ್ಕೆ ಬಂದ ಪಾಕ್ ಸಚಿವ, ಕುಲಭೂಷಣ್ ಜಾಧವ್ ವಿಚಾರ ಎತ್ತದಿದ್ದಕ್ಕೆ ತನ್ನ ದೇಶದಲ್ಲೇ ಟೀಕೆ!