ಹಾವು ಕಚ್ಚಿ ಸತ್ತ ಮಗನ ಶವವನ್ನು ಸಗಣಿಯಲ್ಲಿ ಮುಚ್ಚಿದ ಅಪ್ಪ: ಜೀವ ಬರುತ್ತೆ ಅಂತ ಕಾಯ್ತಿದ್ದ ತಂದೆಗೆ ನಿರಾಸೆ

By Mahmad RafikFirst Published Sep 2, 2024, 6:25 PM IST
Highlights

ಉತ್ತರ ಪ್ರದೇಶದಲ್ಲಿ ಹಾವು ಕಡಿತದಿಂದ ಮಗ ಸಾವನ್ನಪ್ಪಿದಾಗ, ಪೋಷಕರು ಮಂತ್ರವಾದಿಯೊಬ್ಬನ ಬಳಿಗೆ ಮಗುವನ್ನು ಕರೆದೊಯ್ದರು. ಮಂತ್ರವಾದಿ ಮಗುವನ್ನು ಬದುಕಿಸುವ ನೆಪದಲ್ಲಿ ಮೃತದೇಹವನ್ನು ಸಗಣಿಯಲ್ಲಿ ಹೂತ ಘಟನೆ ನಡೆದಿದೆ.

ಲಕ್ನೋ: ಸತ್ತ ಮಗನನ್ನು ಉಳಿಸಿಕೊಳ್ಳಲು ತಂದೆಯೋರ್ವ ವಿಫಲ ಪ್ರಯತ್ನ ಮಾಡಿ ನಿರಾಶೆ ಅನುಭವಿಸಿದ್ದಾರೆ.  ಉತ್ತರ ಪ್ರದೇಶದ ನೌಹಾಜಿಲ್ ವ್ಯಾಪ್ತಿಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಗ್ರಾಮದ ಬಾಲಕ ಹಾವು ಕಚ್ಚಿ ತೀವ್ರ  ಅಸ್ವಸ್ಥನಾಗಿದ್ದನು. ಕೂಡಲೇ ಪೋಷಕರು ಬಾಲಕನನ್ನು ವೈದ್ಯರ ಬಳಿ ಕರೆದೊಯ್ದಿದ್ದರು. ಆದ್ರೆ ಮಾರ್ಗ ಮಧ್ಯೆಯೇ ಬಾಲಕನ ಜೀವ ಹೋಗಿದೆ ಎಂದು ವೈದ್ಯರು ಘೋಷಣೆ ಮಾಡಿದ್ದಾರೆ. ಆದರೆ ಪೋಷಕರು ಮಾತ್ರ ಮಗನ ಸಾವನ್ನು ಒಪ್ಪಿಕೊಳ್ಳಲು ಸಿದ್ಧರಿರಲ್ಲ. ನಂತರ ಸ್ಥಳೀಯ ಮಂತ್ರವಾದಿಯನ್ನು ಪೋಷಕರು ಕರೆಸಿದ್ದಾರೆ. ಮಂತ್ರವಾದಿ ಮೃತ ಮಗನನ್ನು ಬದುಕಿಸೋದಾಗಿ ಹೇಳಿದ್ದಾನೆ. ಚಿಕಿತ್ಸೆಯ ನೆಪದಲ್ಲಿ ಮೃತದೇಹವನ್ನು ಸಗಣಿಯಲ್ಲಿ ಮುಚ್ಚಿದ್ದಾನೆ. ಆದರೆ ಬಾಲಕ ಬದುಕಿ ಬರಲಿಲ್ಲ. 

ವರದಿಗಳ ಪ್ರಕಾ, ಭಾನುವಾರ ರಾತ್ರಿ, ಮಿಟ್ಟೋಲಿ ಗ್ರಾಮದ ನಿವಾಸಿ ಪ್ರಮೋದ್ ಕುಮಾರ್ ಎಂಬವರ ಮಗ 11 ವರ್ಷದ ಕಿಶೋರ್ ಮಯಾಂಕ್ ಗೆ ಹಾವು ಕಚ್ಚಿತ್ತು. ಗಾಢ ನಿದ್ದೆಯಲ್ಲಿದ್ದರಿಂದ ಕಿಶೋರ್‌ಗೆ ಹಾವು ಕಚ್ಚಿರೋದು ಗೊತ್ತಾಗಿಲ್ಲ. ಬೆಳಗ್ಗೆ ಆಗುತ್ತಿದ್ದಂತೆಯೇ ಕಿಶೋರ್ ಆರೋಗ್ಯದಲ್ಲಿ ವ್ಯತ್ಯಾಸ ಕಾಣಲು ಶುರುವಾಗಿದೆ. ಕುಟುಂಬಸ್ಥರು ಮೊದಲು ಮನೆಯಲ್ಲಿಯೇ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಆದರೆ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡಿಲ್ಲ. ಕ್ಷಣ ಕ್ಷಣದಿಂದ ಕಿಶೋರ್ ಆರೋಗ್ಯ ಬಿಗಾಡಾಯಿಸುತ್ತಿತ್ತು. ನಂತರ ಸ್ಥಳೀಯ ವೈದ್ಯರ ಬಳಿ ಕರೆದುಕೊಂಡು ಹೋದಾಗ ಇಲ್ಲಿ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ನಗರ ಪ್ರದೇಶದ ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದ್ದಾರೆ.

Latest Videos

ಪೋಷಕರು ಕಿಶೋರ್‌ನನ್ನು ಅಲಿಘರ್‌ನ ವೈದ್ಯಕೀಯ ಆಸ್ಪತ್ರೆಗೆ  ಕರೆದೊಯ್ದಿದ್ದಾರೆ. ವೈದ್ಯರು ಹಾವು ಕಡಿತದಿಂದ ಸಾವನ್ನಪ್ಪಿರೋದನ್ನು ಖಚಿತಪಡಿಸಿದ್ದಾರೆ. ಕಿಶೋರ್ ಮಲಗಿದ್ದ ಕೊಠಡಿಯಲ್ಲಿ ಹುಡುಕಾಡಿದಾಗ ಹಾವು ಸಹ ಸಿಕ್ಕಿದೆ. ಹಾವನ್ನು ಹಿಡಿಯಲಾಗಿದೆ. ನೀಮ್‌ಗಾಂವ್ ಗ್ರಾಮದಲ್ಲಿರುವ ಮಂತ್ರವಾದಿ ಹಾವು ಕಚ್ಚಿದವರನ್ನ ಬದುಕಿಸುತ್ತಾನೆ ಎಂದು ಕಿಶೋರ್ ಪೋಷಕರಿಗೆ ಕೆಲವರು ಹೇಳಿದ್ದಾರೆ. ಮೂಢನಂಬಿಕೆಯನ್ನು ನಂಬಿದ ಪೋಷಕರು ಮಗನ ಶವವನ್ನು ಮಂತ್ರವಾದಿ ಬಳಿ ತೆಗೆದುಕೊಂಡು ಹೋಗಿದ್ದಾರೆ. 

500 ವರ್ಷಗಳಿಂದ ಈ ಹಳ್ಳಿಯಲ್ಲಿ ಯಾರೂ ಮದ್ಯ ಕುಡಿದಿಲ್ಲ, ಮಾಂಸವೂ ತಿಂದಿಲ್ಲ... ಬೆಳ್ಳುಳ್ಳಿಯನ್ನ ಬಳಸದ ಪವಿತ್ರ ಗ್ರಾಮ ಎಲ್ಲಿದೆ?

ಮಂತ್ರವಾದಿ ಬಾಲಕ ಶವವನ್ನು ಹಸುವಿನ ಸಗಣಿಯಲ್ಲಿಯೇ ಸಂಪೂರ್ಣವಾಗಿ ಮುಚ್ಚಿದ್ದಾನೆ. ಸುಮಾರು ಎರಡೂವರೆ ಮೂರು ಗಂಟೆಗಳ ಕಾಲ ಹಸುವಿನ ಸಗಣಿಯಲ್ಲಿಯೇ ಶವವನ್ನು ಇರಿಸಲಾಗಿತ್ತು. ಬಾಲಕ ಬದುಕಿ ಬರ್ತಾನಾ ಅಂತ ಇಡೀ ಗ್ರಾಮದ ಜನತೆ ಕುತೂಹಲದಿಂದ ಅಲ್ಲಿಯೇ ಕುಳಿತಿದ್ದರು. ಸುಮಾರು ಮೂರು ಗಂಟೆ ಬಳಿಕ ಶವವನ್ನು ಹೊರಗೆ ತೆಗೆದುಕೊಂಡು ಪೋಷಕರು ತಮ್ಮೂರಿಗೆ ಮರಳಿದ್ದಾರೆ. 

ಕೆಲ ವರ್ಷಗಳ ಹಿಂದೆ ಬಳ್ಳಾರಿ ಜಿಲ್ಲೆಯಲ್ಲಿ ಮೃತ ಮಗನನ್ನು ಬದುಕಿಸಿಕೊಳ್ಳಲು ಪೋಷಕರು ಪುತ್ರನ ಶವವನ್ನು ಉಪ್ಪಿನಲ್ಲಿ ಮುಚ್ಚಿದ್ದರು. ಅನಂತರ ಅಧಿಕಾರಿ, ಪೊಲೀಸರು ತೆರಳಿ ಇದು ಮೂಢನಂಬಿಕೆ ಎಂದು ತಿಳಿಸಿದಾಗ ಶವ ಹೊರ ತೆಗೆದು ಅಂತ್ಯಸಂಸ್ಕಾರ ನೆರವೇರಿಸಿದ್ದರು.

ಅಂದು ಕಲ್ಲು ಹಾಕಿ ನೀರು ಕುಡಿದ ಜಾಣ ಕಾಗೆ, ಇಂದು ಎಣ್ಣೆ ಕುಡಿದು ಹಾರೋದನ್ನೇ ಮರೆತು ಹೋಯ್ತು!

click me!