ವಿದ್ಯಾರ್ಥಿಗೆ ನೆಟ್ವರ್ಕ್ ಸಮಸ್ಯೆ, ಆನ್‌ಲೈನ್ ಕ್ಲಾಸ್‌ಗೆ ಪ್ರತಿ ದಿನ ಏರಲೇಬೇಕು ಪರ್ವತ!

Published : Jul 18, 2020, 10:50 PM IST
ವಿದ್ಯಾರ್ಥಿಗೆ ನೆಟ್ವರ್ಕ್ ಸಮಸ್ಯೆ, ಆನ್‌ಲೈನ್ ಕ್ಲಾಸ್‌ಗೆ ಪ್ರತಿ ದಿನ ಏರಲೇಬೇಕು ಪರ್ವತ!

ಸಾರಾಂಶ

ಕೊರೋನಾ ವೈರಸ್ ಕಾರಣ ಹೆಚ್ಚಿನ ಶಾಲೆಗಳು ಆನ್‌ಲೈನ್ ಕ್ಲಾಸ್ ಆರಂಭಿಸಿದೆ. ಆದರೆ ವಿದ್ಯಾರ್ಥಿಗಳು ಮಾತ್ರ ನೆಟ್‌ವರ್ಕ್ ಸಮಸ್ಯೆಯಿಂದ ಪಡಬಾರದ ಕಷ್ಟ ಪಡುವಂತಾಗಿದೆ. ವಿದ್ಯಾರ್ಥಿಯೋರ್ವ ನೆಟ್‌ವರ್ಕ್‌ಗಾಗಿ ಪರ್ವತವನ್ನೇ ಏರಿ ಪ್ರತಿ ದಿನ ಕ್ಲಾಸ್‌ಗೆ ಹಾಜರಾಗುತ್ತಿದ್ದಾನೆ.

ರಾಜಸ್ಥಾನ(ಜು.18): ಕೊರೋನಾ ವೈರಸ್ ವಕ್ಕರಿಸಿದ ಬಳಿಕ ವಿದ್ಯಾರ್ಥಿಗಳು ಹಾೂ ಪೋಷಕರ ಕಷ್ಟ ಹೇಳತೀರದು.  ಕಳೆದ 5 ತಿಂಗಳಿನಿಂದ ಮನೆಯಲ್ಲಿರುವ ಪುಟಾಣಿ ವಿದ್ಯಾರ್ಥಿಗಳಿಗೆ ಯಾವುದೂ ನೆನಪಿಲ್ಲ ಎಂಬುದು ಪೋಷಕರ ಅಳಲು. ಇನ್ನು ಹೈಸ್ಕೂಲ್ ಸೇರಿದಂತೆ ಇತರ ವಿದ್ಯಾರ್ಥಿಗಳಿಗೆ ಆನ್‌ಲೈನ್ ಕ್ಲಾಸ್ ಚಿಂತೆ. ಮಕ್ಕಳಿಗೆ ಮೊಬೈಲ್ ಕೊಡಿಸಬೇಕಾದ ಅನಿವಾರ್ಯತೆ ಒಂದೆಡೆಯಾದರೆ ಮಕ್ಕಳಿಗೆ ನೆಟ್‌ವರ್ಕ್ ಸಮಸ್ಯೆ ಮತ್ತೊಂದೆಡೆ. ಹೀಗಿ ನೆಟ್‌ವರ್ಕ್ ಸಮಸ್ಯೆಗೆ ಮುಕ್ತಿ ನೀಡಲು ವಿದ್ಯಾರ್ಥಿ ಪ್ರತಿ ದಿನ ಸಾಹಸ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.

ಸರ್ಕಾರಿ ಶಾಲಾ ಮಕ್ಕಳು ವಂಚಿತರು; ಆನ್‌ಲೈನ್‌ ಶಿಕ್ಷಣಕ್ಕೆ ಪೋಷಕರ ವಿರೋಧ

ಜವಾಹರ್ ನವೋದಯ ವಿದ್ಯಾಲಯದಲ್ಲಿ ಓದುತ್ತಿರುವ ಹರೀಶ್ ಅನ್ನೋ ವಿದ್ಯಾರ್ಥಿ ರಾಜಸ್ಥಾನದ ಬಾರಮರ್ ಜಿಲ್ಲೆಯ ದಾರುರಾ ಗ್ರಾಮದವನು. ಈ ಗ್ರಾಮದಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಹೆಚ್ಚಿದೆ. ಕೇವಲ ಕರೆ ಮಾಡಲು ಸಾಧ್ಯವಾಗದ ಪರಿಸ್ಥಿತಿ ಇದೆ. ಹೀಗಿರುವಾಗ 4G ಡಾಟ, ವಿಡಿಯೋ ಕಾಲ್ ಕ್ಲಾಸ್ ಅಸಾಧ್ಯದ ಮಾತು. ಆದರೆ ಹರೀಶ್‌ಗೆ ಆನ್‌ಲೈನ್ ಕ್ಲಾಸ್ ಕೇಳಲೇಬೇಕಿದೆ.

ಇದಕ್ಕಾಗಿ ಹರೀಶ್ ತನ್ನ ಮನೆಯ ಸನಿಹಲ್ಲಿರುವ ಪರ್ವತ ಏರಿ ಆನ್‌ಲೈನ್ ಕ್ಲಾಸ್‌ಗೆ ಹಾಜರಾಗುತ್ತಾನೆ. ಪ್ರತಿ ದಿನ ಪರ್ವತ ಏರಿ ತರಗತಿಗೆ ಹಾಜರಾಗುತ್ತಿದ್ದಾನೆ. ಬೆಳಗ್ಗೆ 10 ಗಂಟೆಯ ಕ್ಲಾಸ್‌ಗೆ ಹರೀಶ್ 8 ಗಂಟಗೆ ಪರ್ವತ ಏರಲು ಆರಂಭಿಸುತ್ತಾನೆ. ಬಳಿಕ 2 ಗಂಟೆಗೆ ಕೆಳಗಿಳಿದು ಬರುತ್ತಾನೆ.

ಪ್ರತಿ ದಿನಾ ನೆಟ್‌ವರ್ಕ್ ಉತ್ತಮವಾಗಿರುವುದಿಲ್ಲ. ಹಲವು ದಿನ ನೆಟ್‌ವರ್ಕ್ ಕಾರಣ ಕ್ಲಾಸ್‌ಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಹರೀಶ್ ಹೇಳಿದ್ದಾನೆ. ಆನ್‌ಲೈನ್ ತರಗತಿಗಾಗಿ ಮರ ಹತ್ತಿದ ಘಟನೆಗಳು ವರದಿಯಾಗಿದೆ. ಇದೀಗ ಪರ್ವವತವೇರುವ ಸಾಹಸ ಮಾಡಬೇಕಾದ ಪರಿಸ್ಥಿತಿ ಎದುರಾಗಿದ್ದು ಮಾತ್ರ ದುರಂತ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಪ್ರಧಾನಿ ಮೋದಿ, ಅಮಿತ್‌ ಶಾ ಜೊತೆ ರಾಹುಲ್‌ ಗಾಂಧಿ 90 ನಿಮಿಷದ ಅಪರೂಪದ ಸಭೆ, ಚರ್ಚೆ ಆಗಿದ್ದೇನು?
ದೆವ್ವಗಳ ಬಗ್ಗೆ ಪಿಎಚ್‌ಡಿ ಮಾಡಲಿದ್ದಾರೆ ಬಾಗೇಶ್ವರ ಬಾಬಾ ಧೀರೇಂದ್ರ ಶಾಸ್ತ್ರಿ! ಘೋಸ್ಟ್ ಬಗ್ಗೆ ತಿಳಿಯಲು ನಿಮಗೆ ಆಸಕ್ತಿ ಇದೆಯೇ?